ಭಾರತೀಯಗೆ 45 ಕೋಟಿ ದುಬೈ ಲಾಟರಿ!

| Published : Nov 17 2023, 06:45 PM IST

ಸಾರಾಂಶ

ಯುಎಇಯಾದ್ಯಂತ ವಾಸಿಸುತ್ತಿರುವ ಭಾರತೀಯರ ಪೈಕಿ ಕಳೆದೊಂದು ವಾರದಲ್ಲಿ ಸುಮಾರು ಐವರು ಭಾರತೀಯರು ಭರ್ಜರಿ ಲಾಟರಿ ಅಥವಾ ಡ್ರಾ ಗೆದ್ದು ದಿಢೀರ್‌ ಸಿರಿವಂತರಾಗಿದ್ದಾರೆ.

5 ಭಾರತೀಯರಿಗೆ ಒಂದೇ ವಾರದಲ್ಲಿ ಭರ್ಜರಿ ಲಾಟ್ರಿ

ದುಬೈ: ಯುಎಇಯಾದ್ಯಂತ ವಾಸಿಸುತ್ತಿರುವ ಭಾರತೀಯರ ಪೈಕಿ ಕಳೆದೊಂದು ವಾರದಲ್ಲಿ ಸುಮಾರು ಐವರು ಭಾರತೀಯರು ಭರ್ಜರಿ ಲಾಟರಿ ಅಥವಾ ಡ್ರಾ ಗೆದ್ದು ದಿಢೀರ್‌ ಸಿರಿವಂತರಾಗಿದ್ದಾರೆ.

ಈ ಪೈಕಿ ಕೇರಳ ಮೂಲದ ಶ್ರೀಜು ಎಂಬುವವರು ಬರೋಬ್ಬರಿ 45 ಕೋಟಿ ರು. ಲಾಟರಿ ಗೆದ್ದಿದ್ದಾರೆ. ತೈಲ ಮತ್ತು ಅನಿಲ ಉದ್ಯಮದ ನಿಯಂತ್ರಣ ಕೊಠಡಿಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀಜು ಬುಧವಾರ ಪ್ರಕಟಗೊಂಡ ಲಾಟರಿ ಫಲಿತಾಂಶದಲ್ಲಿ 45 ಕೋಟಿ ರು. ಗೆದ್ದಿದ್ದಾರೆ. ಉಳಿದಂತೆ ಇನ್ನೊಬ್ಬ ಭಾರತೀಯ ಕೇರಳ ಮೂಲದ ಶರತ್‌ ಶಿವದಾಸನ್‌ ಕಳೆದ 2 ತಿಂಗಳಲ್ಲಿ 11 ಲಕ್ಷ ರು., ಮುಂಬೈ ಮೂಲದ ಮನೋಜ್‌ ಭಾವಸರ್‌ ಶನಿವಾರದಂದು 16 ಲಕ್ಷ ರು., ನ.8 ರಂದು ದೆಹಲಿ ಮೂಲದ ಅನಿಲ್‌ ಜಿಯಾಚಂದಾನಿ 10 ಲಕ್ಷ ರು. ಮತ್ತು ಶನಿವಾರ ಇನ್ನಿಬ್ಬರು ಭಾರತೀಯರು ತಲಾ 22 ಲಕ್ಷ ರು. ಬಹುಮಾನ ಗೆದ್ದಿದ್ದಾರೆ.