ಕ್ಯಾತ್ಸಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

| Published : Nov 23 2023, 01:45 AM IST

ಸಾರಾಂಶ

ತುಮಕೂರಿನ ಕ್ಯಾತ್ಸಂದ್ರದ ಪೇಟೆ ಬೀದಿ ಮುಖ್ಯರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘದ ವತಿಯಿಂದ 3ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಬೀದಿ ಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಭದ್ರೇಗೌಡ ನೆರವೇರಿಸಿದರು.ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಭದ್ರೇಗೌಡರವರು, ನಮ್ಮ ಬೀದಿ ಬದಿ ವ್ಯಾಪಾರಿಗಳು ನಾಡು ನುಡಿ ಉಳಿಸುವ ಸಲುವಾಗಿ ಕಳೆದ ಮೂರು ವರ್ಷಗಳಿಂದ ರಾಜ್ಯೋತ್ಸವವನ್ನುಆಚರಿಸಿಕೊಂಡು ಬರುತ್ತಿದ್ದು, ನಮ್ಮ ಸಂಘವನ್ನೊಳಗೊಂಡು ಸಿದ್ದಗಂಗಾ ಸಮಾನ ಮನಸ್ಕಾರ ಗುಂಪಿನ ಅಧ್ಯಕ್ಷರಾದ ಅಂಜಿನಮ್ಮ ಹಾಗೂ ಎಲ್ಲ ನನ್ನ ತಾಯಂದಿರು ಒಟ್ಟಾಗಿ ಸೇರಿಕೊಂಡು ಈ ಬಾರಿ ಆಚರಿಸುತ್ತಿದ್ದೇವೆಂದರು.

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರಿನ ಕ್ಯಾತ್ಸಂದ್ರದ ಪೇಟೆ ಬೀದಿ ಮುಖ್ಯರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘದ ವತಿಯಿಂದ 3ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಬೀದಿ ಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಭದ್ರೇಗೌಡ ನೆರವೇರಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಭದ್ರೇಗೌಡರವರು, ನಮ್ಮ ಬೀದಿ ಬದಿ ವ್ಯಾಪಾರಿಗಳು ನಾಡು ನುಡಿ ಉಳಿಸುವ ಸಲುವಾಗಿ ಕಳೆದ ಮೂರು ವರ್ಷಗಳಿಂದ ರಾಜ್ಯೋತ್ಸವವನ್ನುಆಚರಿಸಿಕೊಂಡು ಬರುತ್ತಿದ್ದು, ನಮ್ಮ ಸಂಘವನ್ನೊಳಗೊಂಡು ಸಿದ್ದಗಂಗಾ ಸಮಾನ ಮನಸ್ಕಾರ ಗುಂಪಿನ ಅಧ್ಯಕ್ಷರಾದ ಅಂಜಿನಮ್ಮ ಹಾಗೂ ಎಲ್ಲ ನನ್ನ ತಾಯಂದಿರು ಒಟ್ಟಾಗಿ ಸೇರಿಕೊಂಡು ಈ ಬಾರಿ ಆಚರಿಸುತ್ತಿದ್ದೇವೆಂದರು.

ಈ ಒಂದು ಆಚರಣೆ ನಮ್ಮ ಜಿಲ್ಲೆಗೆ ಒಂದು ಮಾದರಿಯಾಗಿದೆ, ಕನ್ನಡ ನೆಲ ಜಲ ಭಾಷೆಯನ್ನು ಉಳಿಸಬೇಕು ಕನ್ನಡ ನಾಡು ಚಂದ ಕನ್ನಡ ಭಾಷೆ ಚೆಂದ. ಕನ್ನಡವನ್ನು ಮಾತನಾಡುವುದು ಹೆಜ್ಜೇನು ಸವಿದಂತೆ ಎಂದು ನಮ್ಮ ನಾಡ ಕವಿ ಹೇಳಿದ್ದಾರೆ ಎಂದುಭದ್ರೇಗೌಡ ಹೇಳಿದರು.

ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಮಾತನಾಡಿ, ನಮ್ಮ ಕ್ಯಾತ್ಸಂದ್ರದ ಈ ಬೀದಿಬದಿ ವ್ಯಾಪಾರಿಗಳಾದ ನನ್ನ ಅಕ್ಕ ತಂಗಿ ಅಣ್ಣ ತಮ್ಮ ಬಂಧು-ಬಳಗದವರು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿರುವುದು ಬಹಳ ಸಂತೋಷ ಉಂಟು ಮಾಡಿದೆ. ನಮ್ಮ ಮುಂದಿನ ಪೀಳಿಗೆಯವರಿಗೂ ನಾವು ಮಾದರಿಯಾಗುವಂತಹ ಕಾರ್ಯಗಳನ್ನು ಮಾಡಬೇಕಾಗಿದೆ. ಅಲ್ಲದೇ, ನಮ್ಮ ನಾಡು-ನುಡಿ-ಜಲ, ರಾಜ್ಯೋತ್ಸವದ ಆಚರಣೆಯ ಕುರಿತು ಮುಂದಿನ ಪೀಳಿಗೆಯವರಿಗೆ ಉಳಿಸಿ ಬೆಳಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದರು. ಅಂಜಿನಮ್ಮ, ಕೃಷ್ಣಮೂರ್ತಿ, ಹನುಮಂತರಾಜು ಹಾಗೂ ಹಲವಾರು ಬೀದಿ ಬದಿ ವ್ಯಾಪಾರಿಗಳು ಹಾಜರಿದ್ದರು.