ಅತ್ಯಂತ ಪ್ರತಿಷ್ಠಿತ ಕರ್ನಾಟಕ ಬ್ಯಾಂಕ್ ಲಿಮಿಟೆಡ್ (ಕೆಬಿಎಲ್) ತನ್ನ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಐಬಿಎಂ ಜೊತೆಗೆ ಸಹಯೋಗ ಮಾಡಿಕೊಂಡಿದೆ.  ಐಬಿಎಂನ ಜೊತೆಗಾರ ಸಂಸ್ಥೆಯಾದ ಫೈರಿ ಹಾಗೂ ಐಬಿಎಂ ಕಸ್ಟಮರ್ ಸಕ್ಸಸ್ ತಂಡದ ಸಹಾಯದಿಂದ ಈ ಯೋಜನೆಯನ್ನು ಜಾರಿಗೆ 

 ಬೆಂಗಳೂರು : ಅತ್ಯಂತ ಪ್ರತಿಷ್ಠಿತ ಕರ್ನಾಟಕ ಬ್ಯಾಂಕ್ ಲಿಮಿಟೆಡ್ (ಕೆಬಿಎಲ್) ತನ್ನ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಐಬಿಎಂ ಜೊತೆಗೆ ಸಹಯೋಗ ಮಾಡಿಕೊಂಡಿದೆ.

ಐಬಿಎಂನ ಜೊತೆಗಾರ ಸಂಸ್ಥೆಯಾದ ಫೈರಿ ಹಾಗೂ ಐಬಿಎಂ ಕಸ್ಟಮರ್ ಸಕ್ಸಸ್ ತಂಡದ ಸಹಾಯದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಮೂಲಕ ಕರ್ನಾಟಕ ಬ್ಯಾಂಕ್‌ ಗೆ ಸುರಕ್ಷಿತವಾದ, ಅಭಿವೃದ್ಧಿಪಡಿಸಬಹುದಾದ ಮತ್ತು ಹೊಂದಿಕೊಳ್ಳಬಲ್ಲ ಎಪಿಐ (ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್) ಪ್ಲಾಟ್‌ಫಾರ್ಮ್ ಸಿದ್ಧಗೊಂಡಿದೆ. ಈ ಪ್ಲಾಟ್ ಫಾರ್ಮ್ ಒಟ್ಟಾರೆ ಖರ್ಚು ವೆಚ್ಚ ಕಡಿಮೆ ಮಾಡಲಿದೆ ಮತ್ತು ಇದರಿಂದ ಬ್ಯಾಂಕ್‌ನ ಡಿಜಿಟಲ್ ವ್ಯವಸ್ಥೆ ಬಲಗೊಳ್ಳಲಿದೆ.

ಈ ಸಹಯೋಗದ ಭಾಗವಾಗಿ ಕರ್ನಾಟಕ ಬ್ಯಾಂಕ್ ಆಧುನಿಕ, ಸುರಕ್ಷಿತ ಮತ್ತು ಇನ್ನಷ್ಟು ಅಭಿವೃದ್ಧಿಪಡಿಸಬಹುದಾದ ಎಪಿಐ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸಿಕೊಂಡಿದ್ದು, ಇದು ಬ್ಯಾಂಕ್‌ನ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವುದರ ಜೊತೆಗೆ ಕಾರ್ಯಾಚರಣೆ ವೆಚ್ಚವನ್ನು ಕಡಿಮೆ ಮಾಡಲಿದೆ.

ಈ ಕುರಿತು ಮಾತನಾಡಿರುವ ಕರ್ನಾಟಕ ಬ್ಯಾಂಕ್ ಲಿಮಿಟೆಡ್‌ನ ಮುಖ್ಯ ಮಾಹಿತಿ ಅಧಿಕಾರಿ ಶ್ರೀ ವೆಂಕಟ್ ಕೃಷ್ಣನ್ ಅವರು, ‘ಇದು ನಮ್ಮ ಡಿಜಿಟಲ್ ಪಯಣದಲ್ಲಿ ಒಂದು ಬಹುದೊಡ್ಡ ಮೈಲುಗಲ್ಲಾಗಿದೆ. ರೆಡ್ ಹ್ಯಾಟ್ ಓಪನ್ ಶಿಫ್ಟ್ ಮೇಲೆ ಐಬಿಎಂ ಕ್ಲೌಡ್ ಪ್ಯಾಕ್ ಫಾರ್ ಇಂಟಿಗ್ರೇಷನ್ ಬಳಕೆಯಿಂದಾಗಿ ಈಗ ನಮಗೆ ಹೊಂದಿಕೊಳ್ಳಬಲ್ಲ ಮತ್ತು ಸುರಕ್ಷಿತ ಪ್ಲಾಟ್‌ಫಾರ್ಮ್ ಸಿಕ್ಕಿದೆ. ಇದರಿಂದ ದೇಶಾದ್ಯಂತ ಕಾರ್ಯಾಚರಣೆಗಳನ್ನು ವಿಸ್ತರಿಸುವುದು, ವ್ಯವಸ್ಥೆ ನಿರ್ವಹಣೆ ಸರಳಗೊಳಿಸುವುದು, ಖರ್ಚು ಉಳಿತಾಯ ಮಾಡುವುದು ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ಗ್ರಾಹಕರ ಅನುಭವವನ್ನೂ ಇನ್ನಷ್ಟು ಉತ್ತಮಗೊಳಿಸುತ್ತದೆ’ ಎಂದು ಹೇಳಿದರು.ಹೊಸದಾಗಿ ಅಪ್‌ಗ್ರೇಡ್ ಆದ ಎಪಿಐ ವ್ಯವಸ್ಥೆಯಿಂದ ಉತ್ಕೃಷ್ಟ ಸುರಕ್ಷತೆ ದೊರೆತಿದೆ, ವಿಸ್ತರಣಾ ಸಾಮರ್ಥ್ಯ ಶೇ.50ರಷ್ಟು ಹೆಚ್ಚಾಗಿದೆ ಮತ್ತು ಕಾರ್ಯಾಚರಣೆ ವೆಚ್ಚ ಶೇ.30ರಷ್ಟು ಕಡಿಮೆಯಾಗಿದೆ. ಮೈಕ್ರೋಸರ್ವೀಸ್‌ಗಳಿಗೆ ವಿಶೇಷವಾಗಿ ರೂಪಿತವಾದ ಆಪ್ಟಿಮೈಸ್ಡ್ ಕಂಟೇನರ್ ಆಧಾರಿತ ಪ್ಲಾಟ್‌ಫಾರ್ಮ್‌ಗೆ ಬದಲಾವಣೆ ಹೊಂದಿರುವುದರಿಂದ ಈ ಲಾಭಗಳು ದೊರಕಿವೆ.

ಇಂದಿನ ಬ್ಯಾಂಕಿಂಗ್ ಕ್ಷೇತ್ರ ಅತ್ಯಂತ ಸಂಕೀರ್ಣ

ಈ ಕುರಿತು ಐಬಿಎಂ ಇಂಡಿಯಾ ಮತ್ತು ಸೌತ್ ಏಷ್ಯಾದ ತಂತ್ರಜ್ಞಾನ ವಿಭಾಗದ ಉಪಾಧ್ಯಕ್ಷ ಶ್ರೀ ವಿಶ್ವನಾಥ್ ರಾಮಸ್ವಾಮಿ ಅವರು ಮಾತನಾಡಿ, ‘ಇಂದಿನ ಬ್ಯಾಂಕಿಂಗ್ ಕ್ಷೇತ್ರ ಅತ್ಯಂತ ಸಂಕೀರ್ಣವಾಗಿದೆ. ಅನೇಕ ವ್ಯವಸ್ಥೆಗಳು ಮತ್ತು ಡೇಟಾ ಸೋರ್ಸ್ ಗಳು ನಿರಂತರವಾಗಿ ಬಳಕೆ ಆಗುತ್ತಿರುತ್ತವೆ. ಹೀಗಾಗಿ ಎಲ್ಲರಿಗಿಂತ ಮುಂಚೂಣಿಯಲ್ಲಿರಲು ಬ್ಯಾಂಕ್‌ಗಳಿಗೆ ಸ್ಮಾರ್ಟ್ ಆಟೋಮೇಶನ್ ವ್ಯವಸ್ಥೆ ಬೇಕು. ಅದು ಕೇವಲ ಕಾರ್ಯಗಳನ್ನು ಸರಳಗೊಳಿಸುವುದಷ್ಟೇ ಅಲ್ಲ, ಸಮಸ್ಯೆಗಳು ಬರುವ ಮೊದಲೇ ಊಹಿಸಬೇಕು. ಕರ್ನಾಟಕ ಬ್ಯಾಂಕ್‌ನ ಈ ಆಧುನೀಕರಣವು ಬುದ್ಧಿವಂತ ಆಟೋಮೇಶನ್ ವ್ಯವಸ್ಥೆ ಮತ್ತು ಸಂಯೋಜಿತ ವ್ಯವಸ್ಥೆಗಳು ಹೇಗೆ ಸಂಕೀರ್ಣತೆ ಕಡಿಮೆ ಮಾಡಿ, ಸಾಮರ್ಥ್ಯ ಹೆಚ್ಚಿಸಿ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಡಿಜಿಟಲ್ ಸೇವೆಗಳನ್ನು ವೇಗವಾಗಿ ಒದಗಿಸುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ’ ಎಂದು ಹೇಳಿದ್ದಾರೆ.

ಕರ್ನಾಟಕ ಬ್ಯಾಂಕ್‌ನ ಆಧುನೀಕರಣ ಪಯಣಕ್ಕೆ ಬೆಂಬಲ

ಈ ಸಹಯೋಗದ ಬಗ್ಗೆ ಮಾತನಾಡಿದ ಫೈರಿಯ ಸಹ-ಸಂಸ್ಥಾಪಕಿ ಮತ್ತು ಸಿಇಓ ಶ್ರೀಮತಿ ಪದ್ಮಾ ಸುಬ್ರಮಣಿಯನ್ ಅವರು, ‘ಐಬಿಎಂನ ಅನುಷ್ಠಾನ ಪಾಲುದಾರರಾಗಿ ನಾವು ನಮ್ಮ ಫೈರಿಯ ಯುನಿಫೈಡ್ ಫಿನ್‌ಟೆಕ್ ಪ್ಲಾಟ್‌ಫಾರ್ಮ್ ಮತ್ತು ಐಬಿಎಂ ಕ್ಲೌಡ್ ಪಾಕ್ ಫಾರ್ ಇಂಟಿಗ್ರೇಷನ್ ಬಳಸಿಕೊಂಡು ಕರ್ನಾಟಕ ಬ್ಯಾಂಕ್‌ನ ಆಧುನೀಕರಣ ಪಯಣಕ್ಕೆ ಬೆಂಬಲ ನೀಡಿದ್ದಕ್ಕೆ ನಮಗೆ ಹೆಮ್ಮೆಯಿದೆ. ಐಬಿಎಂ ಮತ್ತು ಕರ್ನಾಟಕ ಬ್ಯಾಂಕ್ ಜೊತೆಗಿನ ಈ ಸಹಯೋಗವು ನಮ್ಮ ಪ್ಲಾಟ್‌ಫಾರ್ಮ್ ಬಳಸಿಕೊಂಡು ಹೇಗೆ ಹೆಚ್ಚಿನ ಚುರುಕುತನದೊಂದಿಗೆ ಮತ್ತು ಸುರಕ್ಷಿತ ಎಪಿಐ ಸಾಮರ್ಥ್ಯದೊಂದಿಗೆ ಡಿಜಿಟಲ್ ವ್ಯವಸ್ಥೆಯನ್ನು ವೇಗಗೊಳಿಸಬಹುದು ಎಂಬುದನ್ನು ತೋರಿಸುತ್ತದೆ. ಇದು ಬ್ಯಾಂಕ್‌ಗೆ ನಾವೀನ್ಯತೆ ತರಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಗಟ್ಟಿಯಾದ ತಳಪಾಯ ಹಾಕಿಕೊಡಲಿದೆ’ ಎಂದು ಹೇಳಿದ್ದಾರೆ.