ಕೋಟಕ್ ಮಹೀಂದ್ರಾ ಬ್ಯಾಂಕ್ ಸಾಲಿಟೇರ್ ಎಂಬ ಹೊಸ ಯೋಜನೆ ತಂದಿದೆ. ಈ ಕುರಿತ ವಿವರ ಇಲ್ಲಿದೆ.
ಕನ್ನಡಪ್ರಭವಾರ್ತೆ ಬೆಂಗಳೂರು
ಕೋಟಕ್ ಮಹೀಂದ್ರಾ ಬ್ಯಾಂಕ್ ಇಂದು ಭಾರತದ ಶ್ರೀಮಂತ ವರ್ಗವನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ರೂಪಿಸಿರುವ ಒಂದು ವಿನೂತನ ಬ್ಯಾಂಕಿಂಗ್ ಯೋಜನೆ ಆಗಿರುವ ಕೋಟಕ್ ಸಾಲಿಟೇರ್ ಅನ್ನು ಪರಿಚಯಿಸಿದೆ.ಸಾಲಿಟೇರ್ ಯೋಜನೆಯು ಒಂದು ಇನ್ವೈಟ್ ಓನ್ಲಿ ಯೋಜನೆಯಾಗಿದ್ದು, ಕೋಟಕ್ ಜೊತೆಗೆ ಗಾಢವಾದ, ಬಹು ಆಯಾಮದ ಆರ್ಥಿಕ ಸಂಬಂಧ ಹೊಂದಿರುವ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ. ಈ ಯೋಜನೆಯು ಖಾತೆಯ ಬ್ಯಾಲೆನ್ಸ್ ಬಗ್ಗೆ ಮಾತ್ರವೇ ಗಮನ ಹರಿಸುವುದಿಲ್ಲ, ಬದಲಿಗೆ ಇದು ಠೇವಣಿಗಳು, ಹೂಡಿಕೆಗಳು, ಸಾಲಗಳು, ವಿಮೆ, ಮತ್ತು ಬ್ಯಾಂಕ್ ನಿಂದ ನೀಡಲಾಗುವ ಡಿಮ್ಯಾಟ್ ಹೋಲ್ಡಿಂಗ್ ಗಳಾದ್ಯಂತ ಕುಟುಂಬ ಮಟ್ಟದಲ್ಲಿ ಅತ್ಯುತ್ತಮ ಮೌಲ್ಯವನ್ನು ಒದಗಿಸಲಿದೆ ಮತ್ತು ಉತ್ತಮ ಸಂಬಂಧವನ್ನು ಬೆಳೆಸಲಿದೆ.
ಈ ಕುರಿತು ಕೋಟಕ್ ಮಹೀಂದ್ರಾ ಬ್ಯಾಂಕ್ ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಮತ್ತು ಅಫ್ಲುಯೆಂಟ್, ಎನ್‌ಆರ್‌ಐ, ಮತ್ತು ಬಿಸಿನೆಸ್ ಬ್ಯಾಂಕಿಂಗ್ ವಿಭಾಗದ ಮುಖ್ಯಸ್ಥರಾದ ರೋಹಿತ್ ಭಾಸಿನ್ ಅವರು, ‘ಭಾರತದಲ್ಲಿನ ಶ್ರೀಮಂತ ವರ್ಗವು ವೇಗವಾಗಿ ಬೆಳೆಯುತ್ತಿದೆ. ಆದರೆ ಅವರ ವೇಗಕ್ಕೆ ತಕ್ಕಂತೆ ಬ್ಯಾಂಕಿಂಗ್ ಅನುಭವ ದೊರೆಯುತ್ತಿಲ್ಲ. ಸಾಲಿಟೇರ್ ಯೋಜನೆಯು ಈ ಕೊರತೆಯನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮದೊಂದು ಮಹತ್ವದ ಹೆಜ್ಜೆಯಾಗಿದೆ. ಇದು ಉತ್ಪನ್ನವಲ್ಲ, ಬದಲಿಗೆ ಇದೊಂದು ಉತ್ತಮ ಸವಲತ್ತಾಗಿದೆ’ ಎಂದರು.ಕೋಟಕ್ ಮಾಡಿದ ವ್ಯಾಪಕ ಸಂಶೋಧನೆಯಿಂದ ಶ್ರೀಮಂತ ಗ್ರಾಹಕರು ಮತ್ತು ಅವರ ಬ್ಯಾಂಕ್ ಗಳ ನಡುವಿನ ಸಂಪರ್ಕದ ಕೊರತೆಯು ತಿಳಿದುಬಂತು. ಅವರು ತಮ್ಮನ್ನು ಪರಿಗಣಿಸದೇ ಇರುವ, ಸೇವಾ ಅಲಭ್ಯತೆ ಹೊಂದಿರುವ ಮತ್ತು ತಮ್ಮ ಬ್ಯಾಂಕ್ ಗಳಿಂದ ಭಾವನಾತ್ಮಕವಾಗಿ ದೂರವಿರುವ ಭಾವನೆಯನ್ನು ಹೊಂದಿರುವುದು ತಿಳಿಯಿತು. ಅದಕ್ಕೆ ಪೂರಕವಾಗಿ ಕೋಟಕ್ ಬ್ಯಾಂಕ್ ಅವರ ಪ್ರಮುಖ ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಉತ್ತಮ ಪರಿಹಾರವಾಗಿ ಈ ಯೋಜನೆಯನ್ನು ರೂಪಿಸಿತು.
ಸಾಲಿಟೇರ್‌ನ ವಿಶೇಷತೆಗಳು:- ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ವಿಭಾಗಗಳಲ್ಲಿ ₹8 ಕೋಟಿ ಪ್ರೀ-ಅಪ್ರೂವ್ಡ್ ಕ್ರೆಡಿಟ್ ಲೈನ್ ಗಳು
- ವೇತನ ಪಡೆಯುವ ವೃತ್ತಿಪರರು ಮತ್ತು ಉದ್ಯಮಿಗಳಿಗೆ ವಿಭಾಗ ನಿರ್ದಿಷ್ಟ ಉತ್ಪನ್ನಗಳು- ಕುಟುಂಬ ಪ್ರಧಾನ ಬ್ಯಾಂಕಿಂಗ್ ವ್ಯವಸ್ಥೆ, ಜಂಟಿ ಕ್ರೆಡಿಟ್ ಮಿತಿಗಳು ಮತ್ತು ಇತರ ಸವಲತ್ತುಗಳು
- ಅತ್ಯುತ್ತಮ ಅನುಭವ, ನೆರವು ಒದಗಿಸಲು ರಿಲೇಷನ್ಶಿಪ್ ಮತ್ತು ಸರ್ವೀಸ್ ಮ್ಯಾನೇಜರ್ ಗಳು- ಬ್ಯಾಂಕಿಂಗ್, ಸಂಪತ್ತು, ವಿಮೆ^ ಮತ್ತು ಜೀವನಶೈಲಿ ವಿಭಾಗಗಳಲ್ಲಿ ಕೋಟಕ್ ನ ಉತ್ತಮ ಏಕೀಕೃತ ಸೇವಾ ಅನುಭವ ವಿಶಿಷ್ಟ ವಿನ್ಯಾಸದ ಸಾಲಿಟೇರ್ ಕ್ರೆಡಿಟ್ ಕಾರ್ಡ್
ಸಾಲಿಟೇರ್ ಅನುಭವದ ಭಾಗವಾಗಿ, ಕೋಟಕ್ ಸಾಲಿಟೇರ್ ಕ್ರೆಡಿಟ್ ಕಾರ್ಡ್ ಅನ್ನು ಪರಿಚಯಿಸುತ್ತಿದ್ದು, ಈ ಕಾರ್ಡ್ ಈ ಯೋಜನೆಯ ತತ್ವವನ್ನು ಪ್ರತಿಬಿಂಬಿಸುತ್ತದೆ:- ಇನ್ವೈಟ್ ಓನ್ಲಿ: ಸಾಲಿಟೇರ್ ಗ್ರಾಹಕರಿಗೆ ಮಾತ್ರ ವಿಶೇಷವಾಗಿ ಲಭ್ಯ
- ಸಾಲಿಟೇರ್ ಗ್ರಾಹಕರಿಗೆ ವಾರ್ಷಿಕ ಶುಲ್ಕ ಇಲ್ಲ- ಉನ್ನತ ಕ್ರೆಡಿಟ್ ಮಿತಿಗಳು
- ಪ್ರಾಥಮಿಕ ಮತ್ತು ಆಡ್- ಆನ್ ಗಳಿಗೆ ಅನಿಯಮಿತ ಲಾಂಜ್ ಪ್ರವೇಶ. ಅತಿಥಿ ಪ್ರಯಾಣಿಕರಿಗೂ ಲಾಂಜ್ ಪ್ರವೇಶ. ಈಗ, ಇಡೀ ಕುಟುಂಬಕ್ಕೆ ಲಾಂಜ್ ಪ್ರವೇಶ ಲಭ್ಯವಿದೆ.- ಕೋಟಕ್ ಅನ್‌ಬಾಕ್ಸ್ ಮೂಲಕ ಪ್ರಯಾಣದ ವೆಚ್ಚಗಳ ಮೇಲೆ ಶೇ.10ರಷ್ಟು ಏರ್‌ಮೈಲ್ಸ್ ಗಳಿಸಿ ಮತ್ತು ಇತರ ಅರ್ಹ ವೆಚ್ಚಗಳ ಮೇಲೆ ಶೇ.3ರಷ್ಟು ಏರ್‌ಮೈಲ್ಸ್ ಗಳಿಸಿ, ಪ್ರತಿ ಸ್ಟೇಟ್‌ಮೆಂಟ್ ಸೈಕಲ್ ನಲ್ಲಿ ₹1,00,000 ವರೆಗಿನ ಏರ್‌ಮೈಲ್ಸ್ ಗಳಿಸಬಹುದು. ಕುಟುಂಬ ಪ್ರಯಾಣಕ್ಕೆ ದೊಡ್ಡ ಉಳಿತಾಯ ಲಭ್ಯ.
- ಜೀರೋ ಫಾರೆಕ್ಸ್ ಮಾರ್ಕ್‌ಅಪ್ - ಎಲ್ಲಾ ನಿಮ್ಮ ವೆಚ್ಚಗಳಿಗೆ ಒಂದೇ ಕಾರ್ಡ್.- ₹7500 ವರೆಗಿನ ಇಂಧನ ವೆಚ್ಚಗಳಿಗೆ ಇಂಧನ ಸರ್ಚಾರ್ಜ್ ಮನ್ನಾ
- ಏರ್‌ಮೈಲ್ಸ್ ಗೆ ಅತ್ಯುತ್ತಮ ರಿಡೆಂಪ್ಶನ್ ಆಯ್ಕೆಗಳು. ಇವುಗಳಲ್ಲಿ ಫ್ಲೈಟ್ ಬುಕಿಂಗ್ ಗಳು, ಹೋಟೆಲ್ ಗಳು ಮತ್ತು ಜನಪ್ರಿಯ ಏರ್‌ಲೈನ್ ಮತ್ತು ಹೋಟೆಲ್ ಲಾಯಲ್ಟಿ ಕಾರ್ಯಕ್ರಮಗಳಿಗೆ ಮೈಲ್ಸ್ ವರ್ಗಾವಣೆ ಸೌಲಭ್ಯ ಸೇರಿದೆ.ಈ ಕುರಿತು ಕ್ರೆಡಿಟ್ ಕಾರ್ಡ್ ವಿಭಾಗದ ಬಿಸಿನೆಸ್ ಮುಖ್ಯಸ್ಥ ಫ್ರೆಡರಿಕ್ ಡಿಸೋಜಾ ಅವರು, ‘ಈ ಕಾರ್ಡ್ ನಿಮಗೆ ಕೇವಲ ರಿವಾರ್ಡ್ ಮಾತ್ರ ನೀಡುವುದಿಲ್ಲ, ಜೊತೆಗೆ ಇದು ನಿಮ್ಮ ಪಯಣವನ್ನು ಗೌರವಿಸುತ್ತದೆ. ಇದನ್ನು ಸಾಧನೆ ಮಾಡಿದವರಿಗಾಗಿಯೇ ಮತ್ತು ತಮ್ಮ ಕುಟುಂಬವು ಅದೇ ಮಟ್ಟದ ಸೇವೆ ಮತ್ತು ಮನ್ನಣೆ ಗಳಿಸಬೇಕು ಎಂದು ಬಯಸುವವರಿಗಾಗಿ ವಿನ್ಯಾಸ ಮಾಡಲಾಗಿದೆ’ ಎಂದರು.