ಸಾರಾಂಶ
ತಮ್ಮ 97ನೇ ವಯಸ್ಸಲ್ಲೂ ವಕೀಲ ವೃತ್ತಿಯಲ್ಲಿ ತೊಡಗಿಕೊಳ್ಳುವ ಮೂಲಕದ ಕೇರಳದ ವಕೀಲ ಬಾಲಸುಬ್ರಹ್ಮಣಿಯನ್ ಅವರು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.
- 73 ವರ್ಷ ಸೇವೆ ಬಳಿಕವೂ ದಣಿವರಿಯದ ಕೇರಳದ ವೃದ್ಧ
ಪಾಲಕ್ಕಾಡ್: ತಮ್ಮ 97ನೇ ವಯಸ್ಸಲ್ಲೂ ವಕೀಲ ವೃತ್ತಿಯಲ್ಲಿ ತೊಡಗಿಕೊಳ್ಳುವ ಮೂಲಕದ ಕೇರಳದ ವಕೀಲ ಬಾಲಸುಬ್ರಹ್ಮಣಿಯನ್ ಅವರು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಇವರು 73 ವರ್ಷದಿಂದ ವಕೀಲರಾಗಿದ್ದು, ಇದು ಅತಿ ಸುದೀರ್ಘಾವಧಿಯ ವಕೀಲಿಕೆ ವೃತ್ತಿ ಎಂಬ ದಾಖಲೆಗೆ ಭಾಜನವಾಗಿದೆ.ಪಾಲಕ್ಕಾಡ್‌ನ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿರುವ ಪಿ. ಬಾಲಸುಬ್ರಮಣಿಯನ್ ಮೆನನ್ (97) 1950ರ ದಶಕದಲ್ಲಿ ಸೇವೆ ಆರಂಭಿಸಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ. ಇದು 73 ವರ್ಷ 60 ದಿನಗಳ ವೃತ್ತಿಯಾಗಿದೆ. ಅವರ ಈ ಸೇವೆ ಸೆ.11 2023ರಂದು ಗಿನ್ನೆಸ್ ವಿಶ್ವದಾಖಲೆಗೆ ಸೇರಿದ್ದು, ಇವರು ಪ್ರಪಂಚದ ಅತಿ ದೀರ್ಘಕಾಲ ವಕೀಲರಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಎನಿಸಿಕೊಂಡಿದ್ದಾರೆ.
ನಿವೃತ್ತಿ ಪ್ರಶ್ನೆಯೇ ಇಲ್ಲ:ತಮ್ಮ ಆರೋಗ್ಯ ಸರಿಯಿರುವವರೆಗೂ ನಿವೃತ್ತಿ ಆಗುವುದಿಲ್ಲ ಎಂದು ತಿಳಿಸಿರುವ ಮೆನನ್, ನ್ಯಾಯಾಲಯದಲ್ಲಿ ಚುಟುಕು ವಾದ-ಪ್ರತಿವಾದವೇ ತಮಗೆ ತೃಪ್ತಿ ಕೊಡುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ ತಮ್ಮ ಬಳಿ ಬರುವ ಕಕ್ಷಿದಾರರು ನನ್ನ ಮೇಲೆ ನಂಬಿಕೆ ಇಟ್ಟು ಬರುವುದರಿಂದ ತನ್ನ ಕೈಲಾದ ಮಟ್ಟಿಗೆ ಅವರಿಗೆ ಸಹಾಯ ಮಾಡಲು ಶಕ್ತಿಮೀರಿ ಪ್ರಯತ್ನಿಸುವುದು ನನ್ನ ಧ್ಯೇಯ ಎಂದು ತಿಳಿಸಿದ್ದಾರೆ.