ಸಾರಾಂಶ
ಹುಣಸೂರು: ಕುಪ್ಪೆ ಗ್ರಾಮದಲ್ಲಿ ಚಿರತೆ ಸೆರೆಹುಣಸೂರುತಾಲೂಕಿನ ಕುಪ್ಪೆ ಗ್ರಾಮದ ಜಮೀನಿನಲ್ಲಿರಿಸಿದ್ದ ಬೋನಿನಲ್ಲಿ ಚಿರತೆ ಬಂಧಿಯಾಗಿದೆ.
ಕನ್ನಡಪ್ರಭ ವಾರ್ತೆ ಹುಣಸೂರು
ತಾಲೂಕಿನ ಕುಪ್ಪೆ ಗ್ರಾಮದ ಜಮೀನಿನಲ್ಲಿರಿಸಿದ್ದ ಬೋನಿನಲ್ಲಿ ಚಿರತೆ ಬಂಧಿಯಾಗಿದೆ.ಈ ಭಾಗದ ಸಾಕು ಪ್ರಾಣಿಗಳಿಗೆ ಕಂಠಕವಾಗಿದ್ದ ಚಿರತೆಯನ್ನು ಸೆರೆ ಹಿಡಿಯಲು ಕುಪ್ಪೆ ಗ್ರಾಮದ ರೈತರ ಮನವಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ನಾಯಿ ತಿನ್ನುವ ಆಸೆಯಿಂದ ಒಳಕೊಕ್ಕಿದ್ದ ಸುಮಾರು 3 ವರ್ಷದ ಚಿರತೆ ಬಂದಿಯಾಗಿದೆ.
ಸೆರೆ ಸಿಕ್ಕಿರುವ ಚಿರತೆಯನ್ನು ನಾಗರಹೊಳೆ ಉದ್ಯಾನವನಕ್ಕೆ ಬಿಡಲಾಯಿತು ಎಂದು ಆರ್.ಎಫ್.ಓ ನಂದಕುಮಾರ್ ತಿಳಿಸಿದ್ದಾರೆ.ನಗರಕ್ಕೆ ಸಮೀಪದ ನಾಗನಹಳ್ಳಿಯ ನಾಗೇಶ್ ಎಂಬವರ ಜಮೀನಿನಲ್ಲಿ ಕಳೆದ ಒಂದು ವಾರದಿಂದ ಚಿರತೆ ಮರಿಗಳು ಓಡಾಡುತ್ತಿದ್ದು. ಸುತ್ತಮುತ್ತಲಿನಲ್ಲಿ ತಾಯಿ ಚಿರತೆ ಇರಬಹುದು. ಇದರಿಂದ ಜಮೀನಿಗೆ ತೆರಳದಂತಾಗಿದೆ. ಮರಿಯೊಂದಿಗೆ ತಾಯಿ ಚಿರತೆಯನ್ನು ಸೆರೆ ಹಿಡಿದು ಆತಂಕ ದೂರಮಾಡುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.