2025ರ ಭಾರತದ ಟಾಪ್ ಮಿಡ್‌ ಸೈಜ್ ಅಗ್ರ ಕಂಪನಿಗಳ ಪಟ್ಟಿ ಬಿಡುಗಡೆ ಮಾಡಿದ ಲಿಂಕ್ಡ್‌ ಇನ್‌

| N/A | Published : Apr 17 2025, 12:08 AM IST / Updated: Apr 17 2025, 06:37 AM IST

ಸಾರಾಂಶ

ಭಾರತದ ಸಾವಿವಾರು ಸಂಖ್ಯೆಯ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಹುಡುಕಲು ನೆರವಾಗಲು ಭಾರತರ 2025ನೇ ಸಾಲಿನ ಅಗ್ರ ಮಿಡ್ ಸೈಜ್ ಕಂಪನಿಗಳ ಪಟ್ಟಿಯನ್ನು ಲಿಂಕ್ಡ್‌ ಇನ್‌ ಬಿಡುಗಡೆ ಮಾಡಿದೆ. ಈ ಕುರಿತ ವಿವರ ಇಲ್ಲಿದೆ.

 ಲಿಂಕ್ಡ್‌ ಇನ್ ಸಂಸ್ಥೆಯು 2025ರ ಭಾರತದ ಅಗ್ರ ಮಿಡ್‌ ಸೈಜ್ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಜಾಗತಿಕ ಮಟ್ಟದಲ್ಲಿ 5,000ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಮತ್ತು ಭಾರತದಲ್ಲಿ ಕನಿಷ್ಠ 250 ಉದ್ಯೋಗಿಗಳನ್ನು ಹೊಂದಿರುವ ಅಗ್ರ 15 ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ.

ಲಿಂಕ್ಡ್ ಇನ್‌ನಲ್ಲಿನ ಲಕ್ಷಾಂತರ ಉದ್ಯೋಗಿಗಳ ಚಟುವಟಿಕೆಯ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಈ ಪಟ್ಟಿಯು ಬೇಡಿಕೆಯಲ್ಲಿರುವ ಕೌಶಲ್ಯಗಳು, ಟಾಪ್ ಲೊಕೇಷನ್‌ಗಳು, ಮತ್ತು ಈ ಕಂಪನಿಗಳ ಪ್ರಮುಖ ಉದ್ಯೋಗ ಕಾರ್ಯಗಳ ಕುರಿತು ಮಾಹಿತಿ ನೀಡುತ್ತದೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಮುಂದಿನ ದಾರಿಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ಖೇತಾನ್ & ಕೋ ಈ ವರ್ಷದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಇದರ ನಂತರದ ಸ್ಥಾನವನ್ನು ಮೇಕ್‌ಮೈಟ್ರಿಪ್ ಪಡೆದುಕೊಂಡಿದೆ. ಶಾರ್ದೂಲ್ ಅಮರ್‌ಚಂದ್ ಮಂಗಲದಾಸ್ & ಕೋ ಮೂರನೇ ಸ್ಥಾನದಲ್ಲಿದೆ. ಕಾನ್ ಸ್ಟಿಟ್ಯೂಷನಲ್ ಲಾ, ಟ್ರಾವೆಲ್ ಮ್ಯಾನೇಜ್ ಮೆಂಟ್ ಮತ್ತು ರೆವೆನ್ಯೂ ಅನಾಲಿಸಿಸ್ ಕೌಶಲ್ಯಗಳಿಗೆ ಬೇಡಿಕೆ ಹೆಚ್ಚಿರುವುದನ್ನು ಈ ಪಟ್ಟಿ ತೋರಿಸಿದ್ದು, ವಕೀಲ, ಲೀಗಲ್ ಅಸೋಸಿಯೇಟ್, ಅಕೌಂಟ್ ಮ್ಯಾನೇಜರ್, ಮತ್ತು ಬಿಸಿನೆಸ್ ಡೆವಲಪ್ ಮೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಭಾರಿ ನೇಮಕಾತಿ ನಡೆಯುತ್ತಿದೆ. ಮುಂಬೈ, ಗುರುಗ್ರಾಮ, ಮತ್ತು ದೆಹಲಿ- ಎನ್ ಸಿ ಆರ್ ಕೇಂದ್ರಿತವಾಗಿರುವ ಕಂಪನಿಗಳು ಹೆಚ್ಚಿನ ನೇಮಕಾತಿ ಮಾಡಿಕೊಳ್ಳುತ್ತಿವೆ.

ಲಿಂಕ್ಡ್‌ ಇನ್ ಕರಿಯರ್ ಎಕ್ಸ್ ಪರ್ಟ್ ಮತ್ತು ಇಂಡಿಯಾ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ನಿರಾಜಿತಾ ಬ್ಯಾನರ್ಜಿ ಅವರು, ‘ಈ ವರ್ಷದ ಪಟ್ಟಿಯು ಸಣ್ಣ ತಂಡಗಳಿರುವ, ಕೈಗೆಟಕುವ ಹುದ್ದೆಗಳಿರುವ ಮತ್ತು ನೇರ ವ್ಯಾಪಾರ ಪರಿಣಾಮವನ್ನು ಸೃಷ್ಟಿಸುವ ಅವಕಾಶಗಳು ಹೇರಳವಾಗಿರುವ ಕಂಪನಿಗಳಲ್ಲಿ ಇರುವ ಬೆಳವಣಿಗೆಯ ಅವಕಾಶಗಳನ್ನು ಎತ್ತಿ ತೋರಿಸುತ್ತದೆ. 15 ಕಂಪನಿಗಳಲ್ಲಿ 14 ಕಂಪನಿಗಳು ಮುಂಬೈ, ದೆಹಲಿ- ಎನ್ ಸಿ ಆರ್, ಬೆಂಗಳೂರು, ಮತ್ತು ಹೈದರಾಬಾದ್‌ ನಲ್ಲಿ ಕೇಂದ್ರ ಕಚೇರಿಗಳನ್ನು ಹೊಂದಿವೆ. ಮುಂಬೈ ಮತ್ತು ದೆಹಲಿ- ಎನ್ ಸಿ ಆರ್ ನ ಕಾನೂನು ಸಂಸ್ಥೆಗಳು ಕಾನೂನು ಪ್ರತಿಭೆಗಳನ್ನು ನೇಮಕ ಮಾಡುತ್ತಿವೆ, ಬೆಂಗಳೂರು ಕಂಪನಿಗಳು ಸಾಫ್ಟ್‌ ವೇರ್ ಟೆಸ್ಟಿಂಗ್ ಮತ್ತು ಎಐ ಅಪ್ಲಿಕೇಶನ್ ಹುದ್ದೆಗಳಿಗೆ, ಮತ್ತು ಹೈದರಾಬಾದ್ ಕಂಪನಿಗಳು ಫಾರ್ಮಾ, ಸೆಮಿಕಂಡಕ್ಟರ್, ಮತ್ತು ಮೀಡಿಯಾ ಕಾರ್ಯಾಚರಣೆಗಳಿಗೆ ವೃತ್ತಿಪರರ ನೇಮಕಾತಿ ಮಾಡುತ್ತಿವೆ. ವಿವಿಧ ಕ್ಷೇತ್ರಗಳ ಜ್ಞಾನ, ತಾಂತ್ರಿಕ ಪರಿಣತಿ, ಮತ್ತು ಉತ್ತಮ ಸಂವಹನ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಹೊಂದಿರುವ ವೃತ್ತಿಪರರು ಈ ಮಿಡ್‌ ಸೈಜ್ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ವಿಚಾರದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ’ ಎಂದು ಹೇಳಿದ್ದಾರೆ.

2025ರ ಟಾಪ್ ಮಿಡ್‌ ಸೈಜ್ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ 15 ಕಂಪನಿಗಳು ಇಲ್ಲಿವೆ:

1. ಖೇತಾನ್ & ಕೋ

2. ಮೇಕ್ ಮೈ ಟ್ರಿಪ್

3. ಶಾರ್ದೂಲ್ ಅಮರ್ ಚಂದ್ ಮಂಗಲ್ ದಾಸ್ & ಕೋ

4. ಆರ್ಗನ್ ಲೈಫ್ ಸೈನ್ಸಸ್

5. ನೈಕಾ

6. ಸಿರಿಲ್ ಅಮರ್ ಚಂದ್ ಮಂಗಲ್ ದಾಸ್

7. ಟ್ರೈಕಾಗ್ ಹೆಲ್ತ್

8. ಆಡ್ ಫ್ಯಾಕ್ಟರ್ಸ್ ಪಿಆರ್

9. ಸಾಸ್ಕೆನ್ ಟೆಕ್ನಾಲಜೀಸ್ ಲಿಮಿಟೆಡ್

10. ಪ್ರೊಫೆಷನಲ್ ಅಸಿಸ್ಟೆನ್ಸ್ ಫಾರ್ ಡೆವಲಪ್ಮೆಂಟ್ ಆಕ್ಷನ್ (ಪ್ರದಾನ್)

11. ಎಕ್ಸೆಲ್ ಸಾಫ್ಟ್ ಟೆಕ್ನಾಲಜೀಸ್

12. ಅರ್ಬನ್ ಕಂಪನಿ

13. ಮಾಸ್ ಚಿಪ್®

14. ಮೀಡಿಯಾ ಮಿಂಟ್

15. ಟ್ರೈಕಾನ್ ಇನ್ಫೋಟೆಕ್