ಬೆಂಗಳೂರಿನ ಟಾಪ್ ಸ್ಟಾರ್ಟಪ್‌ಗಳ ಪಟ್ಟಿ ಬಿಡುಗಡೆ ಮಾಡಿದ ಲಿಂಕ್ಡ್‌ ಇನ್‌

| N/A | Published : Oct 30 2025, 01:02 AM IST

Linked In
ಬೆಂಗಳೂರಿನ ಟಾಪ್ ಸ್ಟಾರ್ಟಪ್‌ಗಳ ಪಟ್ಟಿ ಬಿಡುಗಡೆ ಮಾಡಿದ ಲಿಂಕ್ಡ್‌ ಇನ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿನ ಅತಿದೊಡ್ಡ ವೃತ್ತಿಪರ ನೆಟ್‌ವರ್ಕ್ ಆಗಿರುವ ಲಿಂಕ್ಡ್‌ ಇನ್ ಇದೀಗ 2025ನೇ ಸಾಲಿನ ಬೆಂಗಳೂರಿನ ಟಾಪ್ ಸ್ಟಾರ್ಟಪ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸ್ಥಳೀಯವಾಗಿ ಉದ್ಯೋಗ ಹುಡುಕುವವರಿಗೆ ಈ ನಗರದಲ್ಲಿರುವ ಹೊಸ ಅವಕಾಶಗಳನ್ನು ಗುರುತಿಸಲು ಈ ಪಟ್ಟಿ ಸಹಾಯ ಮಾಡುತ್ತದೆ.

 ಜಗತ್ತಿನ ಅತಿದೊಡ್ಡ ವೃತ್ತಿಪರ ನೆಟ್‌ವರ್ಕ್ ಆಗಿರುವ ಲಿಂಕ್ಡ್‌ ಇನ್ ಇದೀಗ 2025ನೇ ಸಾಲಿನ ಬೆಂಗಳೂರಿನ ಟಾಪ್ ಸ್ಟಾರ್ಟಪ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸ್ಥಳೀಯವಾಗಿ ಉದ್ಯೋಗ ಹುಡುಕುವವರಿಗೆ ಈ ನಗರದಲ್ಲಿರುವ ಹೊಸ ಅವಕಾಶಗಳನ್ನು ಗುರುತಿಸಲು ಈ ಪಟ್ಟಿ ಸಹಾಯ ಮಾಡುತ್ತದೆ.

2025ನೇ ಸಾಲಿನ ಟಾಪ್ ಸ್ಟಾರ್ಟಪ್ ಇಂಡಿಯಾ ಪಟ್ಟಿಯಲ್ಲೂ ಮೊದಲ ಸ್ಥಾನದಲ್ಲಿರುವ ಕ್ವಿಕ್-ಕಾಮರ್ಸ್ ಯೂನಿಕಾರ್ನ್ ಝೆಪ್ಟೋ ಬೆಂಗಳೂರು ಪಟ್ಟಿಯಲ್ಲಿಯೂ ಮೊದಲ ಸ್ಥಾನ ಪಡೆದಿದೆ. ದ್ವಿತೀಯ ಸ್ಥಾನದಲ್ಲಿ ಸೆಕ್ಯುರಿಟಿ ಕಂಪ್ಲಯನ್ಸ್ ಆಟೋಮೇಷನ್ ಪ್ಲಾಟ್‌ ಫಾರ್ಮ್ ಸ್ಪ್ರಿಂಟೋ ಮತ್ತು ಮೂರನೇ ಸ್ಥಾನದಲ್ಲಿ ನಗರದ ಸ್ವಂತ 10 ಮಿನಿಟ್ ಫುಡ್ ಡೆಲಿವರಿ ಸರ್ವೀಸ್ ಸ್ವಿಶ್ ಇದೆ.

‘ಕ್ವಿಕ್ ಎಕಾನಮಿ’ ವಿಭಾಗವು ಪಟ್ಟಿಯಲ್ಲಿ ಪ್ರಾಬಲ್ಯ

‘ಕ್ವಿಕ್ ಎಕಾನಮಿ’ ವಿಭಾಗವು ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದು, ಅಗ್ರ ಮೂರು ಸ್ಥಾನಗಳಲ್ಲಿ ಝೆಪ್ಟೋ (1) ಮತ್ತು ಸ್ವಿಶ್ (3) ಎರಡೂ ಸ್ಥಾನ ಗಿಟ್ಟಿಸಿಕೊಂಡಿವೆ. ನಗರದ ಎಂಟರ್‌ ಪ್ರೈಸ್ ಟೆಕ್ ವಿಭಾಗ ಕೂಡ ಪ್ರಾಬಲ್ಯ ಸಾಧಿಸಿದ್ದು, ಕ್ಲೌಡ್ ಸ್ಟೋರೇಜ್‌ ವಿಭಾಗದ ಲ್ಯೂಸಿಡಿಟಿ (5) ಮತ್ತು ಎಐ ಆಧಾರಿತ ಮಾರ್ಕೆಟಿಂಗ್ ಪರಿಹಾರಗಳನ್ನು ನೀಡುವ ಬೈಟ್‌ಸ್ಪೀಡ್ (10) ಉತ್ತಮ ಸ್ಥಾನ ಗಳಿಸಿದೆ. ಗ್ರಾಹಕ ಬ್ರ್ಯಾಂಡ್‌ ಗಳೂ ಉತ್ತಮವಾಗಿ ಬೆಳೆಯುತ್ತಿದ್ದು, ಆಭರಣ ತಯಾರಕ ಗಿವಾ (8) ಮತ್ತು ಹೇರ್ ಕೇರ್ ಬ್ರ್ಯಾಂಡ್ ತ್ರಯಾ (9) ಕೂಡ ಉತ್ತಮ ಸ್ಥಾನ ಹೊಂದಿವೆ.

ಫಿನ್‌ಟೆಕ್ ಸ್ಟಾರ್ಟಪ್‌ಗಳಾದ ಕ್ರೆಡ್ (4) ಮತ್ತು ಜ್ಯುಪಿಟರ್ (7) ಹಣ ನಿರ್ವಹಣಾ ವಿಭಾಗದಲ್ಲಿ ಮುಂಚೂಣಿಯ ಸ್ಥಾನ ಗಳಿಸಿವೆ. ಮೊದಲ ಐದರಲ್ಲಿ ಮೂರು ಕಂಪನಿಗಳು ಭಾರತದ ಟಾಪ್ ಸ್ಟಾರ್ಟಪ್ ಪಟ್ಟಿಯಲ್ಲೂ ಇದ್ದು, ಬೆಂಗಳೂರು ದೇಶದ ಸ್ಟಾರ್ಟಪ್ ರಾಜಧಾನಿ ಎಂಬ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿವೆ. ಆದರೆ ಅರ್ಧದಷ್ಟು ಕಂಪನಿಗಳು ಹೊಸ ಕಂಪನಿಗಳಾಗಿದ್ದು, ಹೊಸ ಆಲೋಚನೆಗಳು ಮತ್ತು ವಿಸ್ತಾರವಾದ ಅವಕಾಶಗಳಿಂದ ಪರಿಸ್ಥಿತಿ ಬದಲಾಗುವುದನ್ನು ತೋರಿಸಿಕೊಟ್ಟಿವೆ.

ಈ ವರ್ಷದ ಪಟ್ಟಿ ಕುರಿತು ಮಾತನಾಡಿರುವ ಲಿಂಕ್ಡ್‌ ಇನ್ ಕರಿಯರ್ ಎಕ್ಸ್‌ ಪರ್ಟ್ ಮತ್ತು ಲಿಂಕ್ಡ್‌ ಇನ್ ಇಂಡಿಯಾ ನ್ಯೂಸ್‌ನ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ನಿರಾಜಿತಾ ಬ್ಯಾನರ್ಜಿ ಅವರು, ‘ಬೆಂಗಳೂರಿನ ಸ್ಟಾರ್ಟಪ್ ಕ್ಷೇತ್ರವು ಭಾರತದ ಸ್ಟಾರ್ಟಪ್ ವಿಭಾಗಕ್ಕೆ ಭಾರಿ ಬಲ ತುಂಬುವುದನ್ನು ಮುಂದುವರಿಸಿದ್ದು, ಗ್ರಾಹಕ ತಂತ್ರಜ್ಞಾನ ಮತ್ತು ಎಂಟರ್‌ ಪ್ರೈಸ್ ಪರಿಹಾರಗಳಲ್ಲಿ ಮುಂಚೂಣಿಯಲ್ಲಿದೆ. ಎಂಟರ್‌ ಪ್ರೈಸ್ ಟೆಕ್, ಫಿನ್‌ ಟೆಕ್ ಮತ್ತು ಡಿಜಿಟಲ್-ಫಸ್ಟ್ ಗ್ರಾಹಕ ಬ್ರ್ಯಾಂಡ್‌ ಗಳ ಮಿಶ್ರಣವು ಸ್ಟಾರ್ಟಪ್ ಗಳ ವೈವಿಧ್ಯತೆಯನ್ನು ತೋರಿಸುತ್ತದೆ. ವೃತ್ತಿಪರರಿಗೆ ವಿಪುಲ ಅವಕಾಶ ಎದುರಾಗುತ್ತಿದ್ದು, ತಂತ್ರಜ್ಞಾನ ಮತ್ತು ಸೃಜನಶೀಲತೆಯ ಮಿಶ್ರಣ ಹೊಂದಿರುವವರಿಗೆ ಹೆಚ್ಚಿನ ಅವಕಾಶ ಲಭ್ಯವಾಗುತ್ತಿದೆ’ ಎಂದು ಹೇಳಿದರು.

ಬೆಂಗಳೂರಿನ ಟಾಪ್ 10 ಸ್ಟಾರ್ಟಪ್‌ಗಳ ಪಟ್ಟಿ:

1. ಝೆಪ್ಟೋ

2. ಸ್ಪ್ರಿಂಟೋ

3. ಸ್ವಿಶ್

4. ಕ್ರೆಡ್

5. ಲ್ಯೂಸಿಡಿಟಿ

6. ಪಾಕೆಟ್ ಎಫ್‌ಎಂ

7. ಜ್ಯುಪಿಟರ್

8. ಗಿವಾ

9. ತ್ರಯಾ

10. ಬೈಟ್‌ಸ್ಪೀಡ್

Read more Articles on