‘ಕನ್ನಡ ನಾಡಿನ ಸೇವೆಗೆ ಮುಡಿಪಾಗಿರಲಿ ಬದುಕು’

| Published : Nov 07 2023, 01:31 AM IST

‘ಕನ್ನಡ ನಾಡಿನ ಸೇವೆಗೆ ಮುಡಿಪಾಗಿರಲಿ ಬದುಕು’
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಾಡಿನ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡೋಣ. ಕನ್ನಡ ಬಳಸಿ, ಬೆಳೆಸಿ, ಉಳಿಸೋಣ ಎಂದು ಉಪನ್ಯಾಸಕ ಮಹದೇವಪ್ರಭು ಕರೆ ನೀಡಿದರು.

ಕುದೇರಿಯ ಪದವಿಪೂರ್ವ ಕಾಲೇಜಿನಲ್ಲಿ ‘ಕನ್ನಡ ಮಾಸಾಚರಣೆ 2023’ ಕಾರ್ಯಕ್ರಮ । ಮಹದೇವಪ್ರಭು ಕರೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕನ್ನಡ ನಾಡಿನ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡೋಣ. ಕನ್ನಡ ಬಳಸಿ, ಬೆಳೆಸಿ, ಉಳಿಸೋಣ ಎಂದು ಉಪನ್ಯಾಸಕ ಮಹದೇವಪ್ರಭು ಕರೆ ನೀಡಿದರು.ಚಾಮರಾಜನಗರ ತಾಲೂಕಿನ ಕುದೇರಿಯ ಸರ್ಕಾರಿ ಎಂ. ಸಂಗಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜೆ ಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ ''''''''ಕನ್ನಡ ಮಾಸಾಚರಣೆ ೨೦೨೩'''''''' ಕಾರ್ಯಕ್ರಮದಲ್ಲಿ ಕನ್ನಡತಾಯಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದ ಅವರು, ಕನ್ನಡವು ನಮ್ಮ ಹೃದಯದ ಭಾಷೆಯಾಗಲಿ. ನಮಗೆ ಸ್ವರ್ಗ ಅಂತಿದ್ದರೆ ಅದುವೇ ಕರ್ನಾಟಕ ಮತ್ತು ಕನ್ನಡ ಭೂಮಿ. ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಲಕ್ಷಾಂತರ ಜನರನ್ನು ಇಂದು ನೆನೆಯಬೇಕು ಎಂದು ಹೇಳಿದರು.

ಕನ್ನಡವನ್ನು ಮರೆತರೆ ನಮ್ಮ ಹೆತ್ತ ತಾಯಿಯನ್ನು ಮರೆತಂತೆ. ಕನ್ನಡ-ಕನ್ನಡಿಗ-ಕರ್ನಾಟಕ ನಮ್ಮ ಹೃದಯದ ಹಾಗೂ ಮನದಾಳದ ಮಿಡಿತವಾಗಬೇಕು. ತುಂಗೆ, ಭದ್ರೆ, ಕಾವೇರಿ, ಕೃಷ್ಣೆಯರು ಹರಿಯುವ ಈ ನಾಡು ಪವಿತ್ರ ಭೂಮಿಯಾಗಿದೆ. ಬರೀ ಮೈಕ್ ಹಚ್ಚಿ ಕುಣಿದರೆ ಭಾಷೆಯ, ರಾಜ್ಯದ ಅಭಿಮಾನವಾಗುವುದಿಲ್ಲ. ಈ ನಾಡನ್ನು ಕಟ್ಟಲು ಶ್ರಮಿಸಿದವರನ್ನು, ನಮ್ಮ ರಾಜ್ಯದ ಭವ್ಯ ಪರಂಪರೆಯನ್ನು ಸದಾಕಾಲ ನೆನೆಯಬೇಕು. ಸೋದರ ಭಾಷೆಗಳನ್ನು ಗೌರವಿಸುವ ವಿಶಾಲ ಭಾವನೆ ನಮ್ಮೆಲ್ಲರದ್ದಾಗಿದೆ. ಕನ್ನಡ ಸಾರಸ್ವತ ಲೋಕವು ೮ ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವುದು ಈ ಭಾಷೆಯ ಉತ್ಕೃಷ್ಟತೆ ಹಾಗೂ ಗರಿಮೆಯನ್ನು ಬಿಂಬಿಸುತ್ತದೆ ಎಂದರು.ಪ್ರ. ಪ್ರಾಂಶುಪಾಲ ನಾರಾಯಣಸ್ವಾಮಿ ಮಾತನಾಡಿ, ಪ್ರತಿಯೊಬ್ಬ ಹೆಮ್ಮೆಯ ಕನ್ನಡಿಗರಿಗೆ ಬದುಕು ನೀಡಿದ ಪಾವನ ಭೂಮಿ ನಮ್ಮ ಕನ್ನಡನಾಡು. ಕನ್ನಡಾಭಿಮಾನ ಎಂಬುದು ಕೇವಲ ನವೆಂಬರ್ ಗೆ ಮಾತ್ರ ಸೀಮಿತವಲ್ಲ. ಬದುಕಿನ ಪ್ರತಿಕ್ಷಣದಲ್ಲೂ ಕನ್ನಡತನವನ್ನೇ ಉಸಿರಾಡೋಣ ಎಂದರು.ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಂಜುನಾಥ, ಮಣಿಕಂಠ, ರಾಜೇಂದ್ರ, ಪುಷ್ಪಲತಾ, ಪಲ್ಲವಿ, ಜೋಸೆಫ್, ಸಿಬ್ಬಂದಿಗಳು, ಪೋಷಕರು ಹಾಗು ವಿದ್ಯಾರ್ಥಿಗಳಿದ್ದರು.----

6 ಸಿಎಚ್‌ಎನ್‌17

ಚಾಮರಾಜನಗರ ತಾಲೂಕಿನ ಕುದೇರಿನ ಸರ್ಕಾರಿ ಎಂ ಸಂಗಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಜೆ ಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ ''''''''ಕನ್ನಡ ಮಾಸಾಚರಣೆ ೨೦೨೩'''''''' ಕಾರ್ಯಕ್ರಮದಲ್ಲಿ ಉಪನ್ಯಾಸಕ ಮಹದೇವಪ್ರಭು ಮಾತನಾಡಿದರು.