ಸಾರಾಂಶ
ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಮಹೋತ್ಸವದ ಪ್ರಯುಕ್ತ ನಡೆಯುವ ಮಹಾರಥೋತ್ಸವಕ್ಕೆ ಸಕಲ ಸಿದ್ಧತೆ ಪ್ರಾರಂಭವಾಗಿದೆ. ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುವ ದೀಪಾವಳಿ ಮಹಾ ರಥೋತ್ಸವಕ್ಕೆ ನುರಿತ ಬೇಡಗಂಪಣ್ಣ ಅರ್ಚಕರು ಶಿಥಿಲಗುಂಡಿರುವ ತೇರನ್ನು ಹೊಸ ಬಿದಿರುಗಳಿಂದ ಅಚ್ಚೆಗಳ್ಳನ್ನು ತಯಾರಿಸಿ ನೂತನವಾಗಿ ನಿರ್ಮಾಣ ಮಾಡುವ ಕಾರ್ಯ ಪ್ರಾರಂಭಿಸಿದ್ದಾರೆ. ನ. 10 ರಿಂದ 14ರ ವರೆಗೆ ನಡೆಯುವ ದೀಪಾವಳಿ ಜಾತ್ರೆಯಲ್ಲಿ ಸಾಲೂರು ಮಠದ ಶ್ರೀಗಳ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕ ತಮ್ಮಡಿ ಮತ್ತು ತಂಡದವರಿಂದ ದೊಡ್ಡ ತೇರಿನ ಉತ್ಸವ ನಡೆಯಲಿದೆ. ನ. 10ರಂದು ಶುಕ್ರವಾರ ವಿಶೇಷ ಪೂಜೆ ಪ್ರಾರಂಭಗೊಳ್ಳಲಿದ್ದು, ನ. 11 ಶನಿವಾರ ಮಾದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ವಿಶೇಷ ಪೂಜೆ, ನ.12 ರಂದು ನರಕ ಚತುರ್ಥಿ ವಿಶೇಷ ಉತ್ಸವಗಳು, ನ. 13 ರಂದು ಹಾಲಾರವಿ ಅಮಾವಾಸ್ಯೆ ಪೂಜೆ ಸಾಲೂರು ಬ್ರಾಹ್ಮಠದ ಸಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ನಡೆಯಲಿದೆ. 14 ರಂದು ಮಂಗಳವಾರ ಬೆಳಿಗ್ಗೆ 8 ಗಂಟೆ 50 ನಿಮಿಷದಿಂದ 9 ಗಂಟೆ 10 ನಿಮಿಷದವರೆಗೆ ದೀಪಾವಳಿ ಮಹಾ ರಥೋತ್ಸವದ ಅಂಗವಾಗಿ ವಿಶೇಷ ಪೂಜೆಗಳು ಜರುಗಲಿವೆ.
-----------------9ಸಿಎಚ್‌ಎನ್52
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಜಾತ್ರಾ ಮಹೋತ್ಸವಕ್ಕೆ ದೊಡ್ಡ ತೇರು ಸಿದ್ದಗೊಳ್ಳುತ್ತಿರುವುದು.--------------9ಸಿಎಚ್‌ಎನ್53
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದಂದು ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಿದ್ಧಗೊಂಡಿರುವ ಮಹದೇಶ್ವರ ದೇವಸ್ಥಾನ.;Resize=(128,128))
;Resize=(128,128))
;Resize=(128,128))
;Resize=(128,128))