ಬಚ್ಚನ್‌ರ ಕರೋಡ್‌ಪತಿಯಲ್ಲಿ 1 ಕೋಟಿ ರು.ಬಹುಮಾನ ಗೆದ್ದು14ರ ಬಾಲಕ ದಾಖಲೆ

| Published : Dec 02 2023, 12:45 AM IST

ಬಚ್ಚನ್‌ರ ಕರೋಡ್‌ಪತಿಯಲ್ಲಿ 1 ಕೋಟಿ ರು.ಬಹುಮಾನ ಗೆದ್ದು14ರ ಬಾಲಕ ದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ 14 ವರ್ಷದ ಬಾಲಕ ಮಯಾಂಕ್‌ ಎಂಬಾತ 1 ಕೋಟಿ ರು. ಗೆದ್ದಿದ್ದಾನೆ.

ನವದೆಹಲಿ: ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ 14 ವರ್ಷದ ಬಾಲಕ ಮಯಾಂಕ್‌ ಎಂಬಾತ 1 ಕೋಟಿ ರು. ಗೆದ್ದಿದ್ದಾನೆ. ಈ ಮೂಲಕ ಈವರೆಗೆ ಕಾರ್ಯಕ್ರಮದಲ್ಲಿ 1 ಕೋಟಿ ರು. ಗೆದ್ದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ದಾಖಲೆ ನಿರ್ಮಿಸಿದ್ದಾನೆ. ಅಮಿತಾಭ್‌ ಬಚ್ಚನ್‌ ನಿರೂಪಿಸಿ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದ 15ನೇ ಆವೃತ್ತಿಗೆ ಸ್ಫರ್ಧಿ ಆಗಿ ಆಗಮಿಸಿದ್ದ ಹರಿಯಾಣದ ಮಹೇಂದ್ರಗಢ್‌ದ 8 ನೇ ತರಗತಿಯ ವಿದ್ಯಾರ್ಥಿ ಮಯಾಂಕ್, 16 ಸುತ್ತಿನ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ 1 ಕೋಟಿ ರು. ತನ್ನದಾಗಿಸಿಕೊಂಡಿದ್ದಾನೆ.