ಸಾರಾಂಶ
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕಾಗಿ 3ನೇ ರೈಲಿನ ಮೂರು ಬೋಗಿಗಳನ್ನು ಬುಧವಾರ ಕೋಲ್ಕತ್ತಾದ ತೀತಾಘರ್ ರೈಲ್ ಸಿಸ್ಟಂ ಬೆಂಗಳೂರಿಗೆ ರವಾನಿಸಿದ್ದು, ಉಳಿದ ಮೂರು ಬೋಗಿಗಳು ಮೇ 2ರಂದು ಕಳಿಸಲಿದೆ.
ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕಾಗಿ 3ನೇ ರೈಲಿನ ಮೂರು ಬೋಗಿಗಳನ್ನು ಬುಧವಾರ ಕೋಲ್ಕತ್ತಾದ ತೀತಾಘರ್ ರೈಲ್ ಸಿಸ್ಟಂ ಬೆಂಗಳೂರಿಗೆ ರವಾನಿಸಿದ್ದು, ಉಳಿದ ಮೂರು ಬೋಗಿಗಳು ಮೇ 2ರಂದು ಕಳಿಸಲಿದೆ.
ರವಾನಿಸಲಾದ ಬೋಗಿಗಳು ಮೇ 15ರೊಳಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಅಷ್ಟು ಬೋಗಿಗಳ ಬಂದ ಬಳಿಕ ಹೆಬ್ಬಗೋಡಿ ಡಿಪೋದಲ್ಲಿ ಜೋಡಿಸಲಾಗುವುದು. ಬಳಿಕ ವಿವಿಧ ತಪಾಸಣೆಗೆ ಒಳಪಡಿಸಿ ಯಶಸ್ವಿಯಾದ ಬಳಿಕ ಮಾರ್ಗದಲ್ಲಿ ಪ್ರಯೋಗಿಕ ಸಂಚಾರ ಆಗಲಿದೆ.
ಸದ್ಯ ಕಳೆದ ವರ್ಷ ಫೆಬ್ರವರಿಯಲ್ಲಿ ಚೀನಾದಿಂದ ಬಂದ ಚಾಲಕ ರಹಿತ ರೈಲು ಹಾಗೂ ಈ ವರ್ಷ ಕೋಲ್ಕತ್ತಾ ಕಳಿಸಿದ್ದ ರೈಲು ಸೇರಿ ಎರಡು ರೈಲುಗಳು ಹಳದಿ ಮಾರ್ಗಕ್ಕಿದೆ. ಇದೀಗ ಮೂರನೇ ರೈಲು ಸೇರ್ಪಡೆ ಬಳಿಕ ಹಳದಿ ಆರ್.ವಿ.ರಸ್ತೆ- ಬೊಮ್ಮಸಂದ್ರ ನಡುವಿನ (19.15 ಕಿಮೀ) ಹಳದಿ ಮಾರ್ಗವನ್ನು ಆರಂಭಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ. ಹಳದಿ ಮಾರ್ಗವನ್ನು ಸಾಧ್ಯವಾದಷ್ಟು ಬೇಗ ಸೇವೆಗೆ ತರಲು ಪ್ರಯತ್ನ ಮಾಡಲಾಗುತ್ತಿದೆ. ಇದು ನಗರ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.