ಸಾರಾಂಶ
ಚಿಕ್ಕೋಡಿ : ಜ್ಯೋತಿಪ್ರಸಾದ ಜೊಲ್ಲೆ ಜನ್ಮದಿನದ ನಿಮಿತ್ತ ಡಿ. 27, 28 ರಂದು ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಪ್ರೇರಣಾ ಉತ್ಸವ ಆಯೋಜಿಸಲಾಗಿದೆ. ಡಿ.27 ರಂದು ಜೋತಿಬಾ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಉತ್ಸವ ಆರಂಭವಾಗಲಿದೆ. ಶ್ರೀ ಜ್ಯೋತಿಬಾ ದೇವಸ್ಥಾನದಲ್ಲಿ ಮಹಾಪ್ರಸಾದ ಆಯೋಜಿಸಲಾಗಿದೆ. 2 ದಿನಗಳ ಪ್ರೇರಣಾ ಉತ್ಸವದಲ್ಲಿ ಜೊಲ್ಲೆ ಶಿಕ್ಷಣ ಸಂಸ್ಥೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ. 28 ರಂದು ನನದಿ ಜೊಲ್ಲೆ ಕ್ಯಾಂಪಸ್ ಮೈದಾನದಲ್ಲಿ ಪ್ರೇರಣಾ ಪುರಸ್ಕಾರ ಹಾಗೂ ಜ್ಯೋತಿಪ್ರಸಾದ ಜೊಲ್ಲೆ ಜನ್ಮದಿನಾಚರಣೆ ಸಮಾರಂಭದ ನಡೆಯಲಿದೆ. ವಿಕಲಚೇತನರಿಗೆ ನೀಡುವ ಪ್ರೇರಣಾ ಪ್ರಶಸ್ತಿ ಸ್ವೀಕರಿಸುವವರ ಹೆಸರು ಶಿಘ್ರದಲ್ಲಿ ಪ್ರಕಟಿಸಲಾಗುವುದು. ಸಾಮೂಹಿಕ ಗುಗ್ಗಳೋತ್ಸವದಲ್ಲಿ ಭಾಗವಹಿಸಲು ಬಯಸುವವರು ಡಿ.22 ಕೊನೆ ದಿನ. ಮಾಹಿತಿಗೆ ಜೊಲ್ಲೆ ಗ್ರೂಪ್ ಕಚೇರಿ ಅಥವಾ ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಜೊಲ್ಲೆ ಗ್ರೂಪ್‌ನ ಸಂಸ್ಥಾಪಕ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.
14ಸಿಕೆಡಿ1ಅಣ್ಣಾಸಾಹೇಬ ಜೊಲ್ಲೆ