ಸಾರಾಂಶ
ಮಿಜೋರಂ ಗಡಿ ಹೊಂದಿರುವ ಮ್ಯಾನ್ಮಾರ್‌ನಲ್ಲಿ ಭಾನುವಾರ ಸಂಜೆಯಿಂದ ನಡೆಯುತ್ತಿರುವ ಗುಂಡಿನ ದಾಳಿಯಲ್ಲಿ 2000ಕ್ಕೂ ಹೆಚ್ಚಿನ ಆ ದೇಶದ ಪ್ರಜೆಗಳು ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ
ಐಜ್ವಾಲ್: ಮಿಜೋರಂ ಗಡಿ ಹೊಂದಿರುವ ಮ್ಯಾನ್ಮಾರ್‌ನಲ್ಲಿ ಭಾನುವಾರ ಸಂಜೆಯಿಂದ ನಡೆಯುತ್ತಿರುವ ಗುಂಡಿನ ದಾಳಿಯಲ್ಲಿ 2000ಕ್ಕೂ ಹೆಚ್ಚಿನ ಆ ದೇಶದ ಪ್ರಜೆಗಳು ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ. ಭಾನುವಾರ ಸಂಜೆ ಪ್ರಾಂತ್ಯದ ಖಾವ್ಮಾವಿ ಹಾಗೂ ರಿಖಾವ್ದಾರ್‌ನಲ್ಲಿ ಪೀಪಲ್ಸ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ಆಡಳಿತ ಜುಂಟಾ ಪಡೆಗಳು ಹಾಗೂ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ಅಲ್ಲಿನ ಜನರು ಅಂತಾರಾಷ್ಟ್ರೀಯ ಗಡಿ ದಾಟಿ ಮಿಜೋರಂನ ಚಂಪಾಯ್ ಪ್ರಾಂತ್ಯದ ಝೊಖಾವ್ಥಾರ್‌ಗೆ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪ್ರಸ್ತುತ ಮಿಜೋರಂನಲ್ಲಿ 31364 ಮತ್ತು ಗಡಿ ಪ್ರದೇಶದಲ್ಲಿ 6000 ಮ್ಯಾನ್ಮಾರ್ ಪ್ರಜೆಗಳು ವಾಸವಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ. ಮಿಜೋರಂ 510 ಕಿ.ಮಿ. ವ್ಯಾಪ್ತಿಯ ಮಾಯನ್ಮಾರ್ ಗಡಿ ಹೊಂದಿದೆ.