ಸಾರಾಂಶ
ಭುವನೇಶ್ವರ್: ಬಂಗಾಳಕೊಲ್ಲಿಯ ಆಳವಾದ ವಾಯುಭಾರ ಕುಸಿತವು ಭಾನುವಾರ ‘ಮೈಚಾಂಗ್’ ಚಂಡಮಾರುತವಾಗಿ ಪರಿವರ್ತನೆಗೊಂಡಿದೆ.
ಭುವನೇಶ್ವರ್: ಬಂಗಾಳಕೊಲ್ಲಿಯ ಆಳವಾದ ವಾಯುಭಾರ ಕುಸಿತವು ಭಾನುವಾರ ‘ಮೈಚಾಂಗ್’ ಚಂಡಮಾರುತವಾಗಿ ಪರಿವರ್ತನೆಗೊಂಡಿದೆ.
ಹೀಗಾಗಿ ಡಿ.5ರ ಮಂಗಳವಾರ ಮುಂಜಾನೆ ಆಂಧ್ರ ಪ್ರದೇಶದ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಗಂಟೆಗೆ 80 ರಿಂದ 90 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.ಅಲ್ಲದೇ ಈ ವೇಳೆ ಒಡಿಶಾದ ಕರಾವಳಿ ಪ್ರದೇಶ ಹಾಗೂ ರಾಜ್ಯದ ಹಲವೆಡೆಯಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ. ಮ್ಯಾನ್ಮಾರ್ ಎಂಬ ಮೂಲ ಹೆಸರಿನಿಂದ ಚಂಡಮಾರುತಕ್ಕೆ ಮೈಚಾಂಗ್ ಎಂದು ಹೆಸರಿಸಲಾಗಿದ್ದು ಶಕ್ತಿ ಅಥವಾ ಸ್ಥಿತಿಸ್ಥಾಪಕತ್ವ ಎಂಬುದು ಇದರ ಅರ್ಥವಾಗಿದೆ. ಇನ್ನು ಕಳೆದ ಆರು ಗಂಟೆಗಳಲ್ಲಿ ವಾಯುವ್ಯಕ್ಕೆ 5 ಕಿಮೀ ವೇಗದಲ್ಲಿ ಚಲಿಸಿದ ಗಾಳಿಯು ಚಂಡಮಾರುತವಾಗಿ ತೀವ್ರಗೊಂಡಿದ್ದು ಇದು ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. ಬಳಿಕ ಮತ್ತಷ್ಟು ತೀವ್ರಗೊಂಡು ದಕ್ಷಿಣ ಆಂಧ್ರಪ್ರದೇಶ ಮತ್ತು ಉತ್ತರ ತಮಿಳುನಾಡು ಕರಾವಳಿಯ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯನ್ನು ಡಿಸೆಂಬರ್ 4 ರ ಮುಂಜಾನೆ ತಲುಪುವ ಸಾಧ್ಯತೆಯಿದೆ.ಎಂದು ಐಎಂಡಿ ತಿಳಿಸಿದೆ.