ಮೈಸೂರು ದಸರಾ:ಗಮನಸೆಳೆದ ಚಾಮರಾಜನಗರ ಜಿಲ್ಲೆಯ ಸ್ತಬ್ಧಚಿತ್ರ

| Published : Oct 25 2023, 01:15 AM IST

ಮೈಸೂರು ದಸರಾ:ಗಮನಸೆಳೆದ ಚಾಮರಾಜನಗರ ಜಿಲ್ಲೆಯ ಸ್ತಬ್ಧಚಿತ್ರ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾದ ಜಂಬುಸವಾರಿಯಲ್ಲಿ ಗಡಿಜಿಲ್ಲೆ ಚಾಮರಾಜನಗರದಿಂದ ಜಾನಪದ, ಅರಣ್ಯ ಸಂಪತ್ತು, ಧಾರ್ಮಿಕ ಪರಂಪರೆ ಬಿಂಬಿಸುವ ಸ್ತಬ್ಧಚಿತ್ರ ಗಮನ ಸೆಳೆಯಿತು.ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕೈಗಾರಿಕೆ ಇಲಾಖೆಯ ಉಸ್ತುವಾರಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ನಡೆದಿದ್ದು " ''''ಜಾನಪದ ಭಕ್ತಿಯ ಬೀಡು- ಹುಲಿ ಆನೆಗಳ ಸಂತೃಪ್ತಿಯ ಕಾಡು'''' ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ಸ್ತಬ್ಧಚಿತ್ರ ರೂಪಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬುಸವಾರಿಯಲ್ಲಿ ಗಡಿಜಿಲ್ಲೆ ಚಾಮರಾಜನಗರದಿಂದ ಜಾನಪದ, ಅರಣ್ಯ ಸಂಪತ್ತು, ಧಾರ್ಮಿಕ ಪರಂಪರೆ ಬಿಂಬಿಸುವ ಸ್ತಬ್ಧಚಿತ್ರ ಗಮನ ಸೆಳೆಯಿತು.ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕೈಗಾರಿಕೆ ಇಲಾಖೆಯ ಉಸ್ತುವಾರಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ನಡೆದಿದ್ದು " ''''''''ಜಾನಪದ ಭಕ್ತಿಯ ಬೀಡು- ಹುಲಿ ಆನೆಗಳ ಸಂತೃಪ್ತಿಯ ಕಾಡು'''''''' ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ಸ್ತಬ್ಧಚಿತ್ರ ರೂಪಿಸಲಾಗಿತ್ತು.ಜಿಲ್ಲೆಯ ವಿಶಿಷ್ಟ ಜಾನಪದ ಕಲೆ ಗೊರವರ ಕುಣಿತವನ್ನು ಸ್ತಬ್ಧಚಿತ್ರದಲ್ಲಿ ಪ್ರಮುಖವಾಗಿ ಬಿಂಬಿಸಲಾಗುಗಿತ್ತು. ಗೊರವರ ಕುಣಿತದ ಕಲಾವಿದರ ಮುಖದ ಬೃಹತ್‌ ಪ್ರತಿಕೃತಿ ಸ್ತಬ್ಧಚಿತ್ರದ ಮುಂಭಾಗದಲ್ಲಿ ಅಳವಡಿಸಲಾಗಿತ್ತು. ಇದಲ್ಲದೆ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಮಲೆ ಮಹದೇಶ್ವರ ಸ್ವಾಮಿಯು ಹುಲಿಯ ಮೇಲೆ ಕುಳಿತಿರುವ 108 ಅಡಿ ಎತ್ತರ ಪ್ರತಿಮೆಯ ಪ್ರತಿಕೃತಿ, ಮಹದೇಶ್ವರ ಬೆಟ್ಟದ ದೇವಾಲಯದ ಪ್ರತಿಕೃತಿಗಳನ್ನೂ ಸ್ತಬ್ಧಚಿತ್ರ ಒಳಗೊಂಡಿತ್ತು. ಜಿಲ್ಲೆಯ ಪ್ರಕೃತಿ ಸಂಪತ್ತು, ಆನೆ, ಹುಲಿಗಳ ಕಾರಿಡಾರ್‌, ಜೀವನದಿ ಕಾವೇರಿ, ಭರಚುಕ್ಕಿ, ಹೊಗೆನಕಲ್‌ ಜಲಪಾತದ ಚಿತ್ರಣ ಕೂಡ ಸ್ತಬ್ಧಚಿತ್ರದಲ್ಲಿ ಗಮನ ಸೆಳೆಯಿತು. ---- 24ಸಿಎಚ್‌ಎನ್‌23 ಮೈಸೂರು ದಸರೆಯ ಬಂಜೂಸವಾರಿಯಲ್ಲಿ ಗಮನ ಸೆಳೆದ ''''''''ಜಾನಪದ ಭಕ್ತಿಯ ಬೀಡು- ಹುಲಿ ಆನೆಗಳ ಸಂತೃಪ್ತಿಯ ಕಾಡು'''''''' ಎಂಬ ಚಾಮರಾಜನಗರ ಸ್ತಬ್ಧಚಿತ್ರ.