ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಯ ವಾರ್ಡ್‌ ವಿಂಗಡಣೆ ಅಂತಿಮಗೊಳಿಸಿದ್ದ ರಾಜ್ಯ ಸರ್ಕಾರ ಮಂಗಳವಾರ 13 ವಾರ್ಡ್‌ ಹೆಸರು ಹಾಗೂ 6 ವಾರ್ಡ್‌ಗಳ ಗಡಿ ಪುನರ್‌ ಪರಿಷ್ಕರಿಸಿ ರಾಜ್ಯ ಪತ್ರ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಯ ವಾರ್ಡ್‌ ವಿಂಗಡಣೆ ಅಂತಿಮಗೊಳಿಸಿದ್ದ ರಾಜ್ಯ ಸರ್ಕಾರ ಮಂಗಳವಾರ 13 ವಾರ್ಡ್‌ ಹೆಸರು ಹಾಗೂ 6 ವಾರ್ಡ್‌ಗಳ ಗಡಿ ಪುನರ್‌ ಪರಿಷ್ಕರಿಸಿ ರಾಜ್ಯ ಪತ್ರ ಹೊರಡಿಸಿದೆ.

ಅಂತಿಮ ಅಧಿಸೂಚನೆಯಲ್ಲಿ ಕೆಲವು ನ್ಯೂನತೆ ಕಂಡು ಬಂದ ಹಿನ್ನೆಲೆ ವಾರ್ಡ್‌ ಪುನರ್‌ ವಿಂಗಡಣಾ ಆಯೋಗ ನ.29 ರಂದು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯನ್ನು ಅಂಗೀಕರಿಸಿ ಮಂಗಳವಾರ ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿದೆ.

ಈ ಪೈಕಿ ತೀವ್ರ ವಿವಾದಕ್ಕೆಡೆ ಮಾಡಿಕೊಟ್ಟಿದ್ದ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ ಒಂದಕ್ಕೆ ‘ಆಕಾಶ್'''' ಎಂದು ಹೆಸರಿಟ್ಟಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ಪುತ್ರನ ಹೆಸರು ಆಕಾಶ್ ಆಗಿರುವುದರಿಂದ ವಾರ್ಡ್‌ಗೆ ಆಕಾಶ್‌ ಎಂದು ಹೆಸರಿಡಲಾಗಿದೆ ಎಂದು ಆರೋಪಿಸಿದ್ದರು. ಇದೀಗ, ಆಕಾಶ್‌ ವಾರ್ಡ್‌ ಹೆಸರನ್ನು ‘ಏರೋ ಸಿಟಿ ವಾರ್ಡ್‌’ ಎಂದು ಬದಲಾಯಿಸಲಾಗಿದೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ‘ಕುಮಾರಸ್ವಾಮಿ ಲೇಔಟ್‌’ ಹೆಸರಿನ ವಾರ್ಡ್ ಅನ್ನು ‘ಯಾರಬ್‌ ವಾರ್ಡ್‌’ ಎಂದು ಬದಲಾಯಿಸಲಾಗಿದೆ.

ಬೆಂಗಳೂರು ಪೂರ್ವ ನಗರ ಪಾಲಿಕೆಯ ಆರು ವಾರ್ಡ್‌, ಪಶ್ಚಿಮ ನಗರ ಪಾಲಿಕೆಯ ಮೂರು ವಾರ್ಡ್‌, ಬೆಂಗಳೂರು ಉತ್ತರ ನಗರ ಪಾಲಿಕೆಯ ನಾಲ್ಕು ವಾರ್ಡ್‌ ಹೆಸರು ಬದಲಾವಣೆ ಮಾಡಲಾಗಿದೆ. ಉಳಿದಂತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಒಂದು ವಾರ್ಡ್‌ ಹೆಸರು ಬದಲಾವಣೆ ಹಾಗೂ ನಾಲ್ಕು ವಾರ್ಡ್‌ ಗಡಿ ಬದಲಾವಣೆ ಮಾಡಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಎರಡು ವಾರ್ಡ್‌ ಗಡಿ ಪರಿಷ್ಕರಣೆ ಮಾಡಲಾಗಿದೆ.

---ಬಾಕ್ಸ್‌--

ಪೂರ್ವ ನಗರ ಪಾಲಿಕೆವಾರು ವಾರ್ಡ್‌ ಹೆಸರು ಬದಲಾವಣೆ ವಿವರ

ವಾರ್ಡ್‌ ಹೆಸರು ಮತ್ತು ಸಂಖ್ಯೆಹೊಸ ಹೆಸರು ಮತ್ತು ಸಂಖ್ಯೆ

ಟಿ.ಸಿ.ಪಾಳ್ಯ-8ಆನಂದಪುರ-8

ಮೇಡಹಳ್ಳಿ-10ಬಸವನಪುರ-10

ಬಸವನಪುರ-11ಕೃಷ್ಣನಗರ-11

ಚಿಕ್ಕದೇವಸಂದ್ರ-12ದೇವಸಂದ್ರ-12

ದೇವಸಂದ್ರ-13ರಾಜೇಶ್ವರಿ ದೇವಸ್ಥಾನ-13

ಶಿವನಸಮುದ್ರ-49ದೊಡ್ಡಕನ್ನೆಲ್ಲಿ-49

---ಬಾಕ್ಸ್‌--ಪಶ್ಚಿಮ ನಗರ ಪಾಲಿಕೆವಾರು ವಾರ್ಡ್‌ ಹೆಸರು ಬದಲಾವಣೆ ವಿವರವಾರ್ಡ್‌ ಹೆಸರು ಮತ್ತು ಸಂಖ್ಯೆಹೊಸ ಹೆಸರು ಮತ್ತು ಸಂಖ್ಯೆ

ಕೆಂಗೇರಿ-19ಶಿವನಪಾಳ್ಯ-19

ಹೆಮ್ಮಿಗೆಪುರ-20ಕೆಂಗೇರಿ ಕೋಟೆ-20

ಮೈಲಸಂದ್ರ-21ಕೆಂಗೇರಿ-21

--ಬಾಕ್ಸ್‌--ಉತ್ತರ ನಗರ ಪಾಲಿಕೆವಾರು ವಾರ್ಡ್‌ ಹೆಸರು ಬದಲಾವಣೆ ವಿವರವಾರ್ಡ್‌ ಹೆಸರು ಮತ್ತು ಸಂಖ್ಯೆಹೊಸ ಹೆಸರು ಮತ್ತು ಸಂಖ್ಯೆ

ರಾಜಾಕೆಂಪೇಗೌಡ-3ಚೌಡೇಶ್ವರಿ-3

ಆಕಾಶ್-2ಏರೋಸಿಟಿ-2

ಯಲಹಂಕ ಒಲ್ಡ್‌ ಸಿಟಿ-1ರಾಜಾಕೆಂಪೇಗೌಡ-1

ಕಲ್ಯಾಣ ನಗರ-31ಕಲ್ಯಾಣ ನಗರ-31--ಬಾಕ್ಸ್‌--ದಕ್ಷಿಣ ನಗರ ಪಾಲಿಕೆವಾರು ವಾರ್ಡ್‌ ಹೆಸರು ಬದಲಾವಣೆ ವಿವರವಾರ್ಡ್‌ ಹೆಸರು ಮತ್ತು ಸಂಖ್ಯೆಹೊಸ ಹೆಸರು ಮತ್ತು ಸಂಖ್ಯೆ

ಕುಮಾರಸ್ವಾಮಿ ಲೇಔಟ್‌-03ಯಾರಬ್‌ ನಗರ-03

--ಬಾಕ್ಸ್‌--ವಾರ್ಡ್‌ ಗಡಿ ಬದಲಾವಣೆ ವಿವರದಕ್ಷಿಣ ನಗರ ಪಾಲಿಕೆಯ ದೊರೆಸಾನಿಪಾಳ್ಯ-56, ಬಿಳೇಕಹಳ್ಳಿ-60, ಗಾರ್ವೆಬಾವಿ ಪಾಳ್ಯ-65, ಸಿಂಗಸಂದ್ರ-66 ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಇಂದಿರಾ ನಗರ-15 ಮತ್ತು ನ್ಯೂತಿಪ್ಪಸಂದ್ರ-16 ವಾರ್ಡ್‌ಗಳ ಗಡಿ ಪರಿಷ್ಕರಣೆ ಮಾಡಲಾಗಿದೆ.