ಸಾರಾಂಶ
ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ಮಾಲೆ ತೊಡಿಸಿದರು ಎಂಬ ಕಾರಣಕ್ಕೆ, ತಮ್ಮ ಬುಡಕಟ್ಟಿನಿಂದ ಬಹಿಷ್ಕಾರಕ್ಕೆ ತುತ್ತಾಗಿ, ನೆಹರು ಅವರ ‘ಬುಡಕಟ್ಟು ಪತ್ನಿ’ ಎಂದೇ ಖ್ಯಾತರಾಗಿದ್ದ ಬುಧನಿ ಮಾಂಝಿಯೈನ್ ಇತ್ತೀಚೆಗೆ ನಿಧನರಾಗಿದ್ದಾರೆ.
1959ರಲ್ಲಿ ಬುಧನಿಗೆ ಮಾಲೆ ಹಾಕಿದ್ದ ನೆಹರು
ಇದಕ್ಕಾಗಿ ಸಂತಾಲಿ ಬುಡಕಟ್ಟಿನಿಂದ ಬಹಿಷ್ಕಾರಕ್ಕೊಳಪಟ್ಟಿದ್ದ ಮಹಿಳೆಧನಾಬಾದ್: ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ಮಾಲೆ ತೊಡಿಸಿದರು ಎಂಬ ಕಾರಣಕ್ಕೆ, ತಮ್ಮ ಬುಡಕಟ್ಟಿನಿಂದ ಬಹಿಷ್ಕಾರಕ್ಕೆ ತುತ್ತಾಗಿ, ನೆಹರು ಅವರ ‘ಬುಡಕಟ್ಟು ಪತ್ನಿ’ ಎಂದೇ ಖ್ಯಾತರಾಗಿದ್ದ ಬುಧನಿ ಮಾಂಝಿಯೈನ್ ಇತ್ತೀಚೆಗೆ ನಿಧನರಾಗಿದ್ದಾರೆ.
ಪುತ್ರಿ ರತ್ನಾ ಅವರೊಂದಿಗೆ ವಾಸಿಸುತ್ತಿದ್ದ ಬುಧನಿ ವಯೋಸಹಜ ಸಮಸ್ಯೆಗಳಿಂದ ನಿಧನರಾದರು. 1959ರಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಅಂದಿನ ಬಿಹಾರ ರಾಜ್ಯದ ಭಾಗವಾಗಿದ್ದ ಧನಾಬಾದ್‌ಗೆ ನೆಹರು ಅವರು ಹೋಗಿದ್ದಾಗ, ಅಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಬುಧನಿ ಅವರಿಗೆ ಮಾಲೆ ತೊಡಿಸಿದ್ದರು. ಇದರಿಂದ ಸಿಟ್ಟಾಗಿದ್ದ ಸಂತಾಲಿ ಬುಡಕಟ್ಟಿನ ಮುಖಂಡರು ಬುಧನಿ ಅವರನ್ನು ಊರಿನಿಂದ ಹೊರಹಾಕಿದ್ದಲ್ಲದೆ, ಮತ್ತೆ ಊರಿಗೆ ಬರದಂತೆ ನಿಷೇಧ ಹೇರಿದ್ದರು. ಇದಾದ ಬಳಿಕ ಬುಧನಿ ಜಾರ್ಖಂಡ್‌ಗೆ ತೆರಳಿ ಅಲ್ಲಿನ ಸರ್ಕಾರಿ ಸ್ವಾಮ್ಯದ ಗಣಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬುಧನಿ, ನಮ್ಮ ಬುಡಕಟ್ಟಿನ ನಿಯಮಗಳ ಪ್ರಕಾರ ಮಾಲೆ ತೊಡಿಸಿದರೆ ಮದುವೆಯಾದಂತೆ. ಹೀಗಾಗಿ ನನ್ನನ್ನು ನೆಹರು ಅವರ ಪತ್ನಿ ಎಂದು ಹೇಳಿ ಊರಿನಿಂದ ಬಹಿಷ್ಕಾರ ಹಾಕಿದ್ದರು ಎಂದು ಹೇಳಿದ್ದರು. ಬುಧನಿ ಅವರ ಸಾವಿಗೆ ಹಲವಾರು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಸ್ಥಳೀಯ ನಾಯಕರು ಅವರ ಅಂತ್ಯಸಂಸ್ಕರಾದಲ್ಲಿ ಭಾಗಿಯಾಗಿದ್ದಾರೆ.