ದೆಹಲಿ ಗಣರಾಜೋತ್ಸವಕ್ಕೆ ಪಿಎಂ ಸ್ವನಿಧಿ ಯೋಜನೆ ಪಲಾನುಭವಿ ಆಯ್ಕೆ
KannadaprabhaNewsNetwork | Published : Oct 21 2023, 12:30 AM IST
ದೆಹಲಿ ಗಣರಾಜೋತ್ಸವಕ್ಕೆ ಪಿಎಂ ಸ್ವನಿಧಿ ಯೋಜನೆ ಪಲಾನುಭವಿ ಆಯ್ಕೆ
ಸಾರಾಂಶ
ದೆಹಲಿ ಗಣರಾಜ್ಯೋತ್ಸವಕ್ಕೆ ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದಲೂ ಕೂಡ ಒಬ್ಬ ಪ್ರತಿನಿಧಿ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ. ದೇಶದ ಚಾಯ್ ವಾಲಾನ ಭೇಟಿಗೆ ಚಾಮರಾಜನಗರದ ಚಾಯ್ ವಾಲಾ ಕಾತುರನಾಗಿದ್ದು, ಮೋದಿಗೂ ಕೂಡ ಚಾನ್ಸ್ ಸಿಕ್ಕಿದ್ರೆ ಟೀ ಕುಡಿಸ್ತೀನಿ ಅಂತಿದ್ದಾರೆ. 2024ರ ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಚಾಮರಾಜನಗರದ ಬೀದಿ ಬದಿ ಟೀ ಅಂಗಡಿ ವ್ಯಾಪಾರಿಯೊಬ್ಬರು ಆಯ್ಕೆಯಾಗಿದ್ದಾರೆ.
ಪ್ರತಿ ಜಿಲ್ಲೆಯಿಂದಲೂ ಒಬ್ಬ ಪಲಾನುಭವಿ ಆಯ್ಕೆ । ದೇಶದ ಚಾಯ್ ವಾಲಾನ ಭೇಟಿ ಮಾಡಲು ಹೋಗ್ತಿನಿ: ಸಮಿವುಲ್ಲಾ ಸಂತಸ ಕನ್ನಡಪ್ರಭ ವಾರ್ತೆ, ಚಾಮರಾಜನಗರ ದೆಹಲಿ ಗಣರಾಜ್ಯೋತ್ಸವಕ್ಕೆ ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದಲೂ ಕೂಡ ಒಬ್ಬ ಪ್ರತಿನಿಧಿ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ. ದೇಶದ ಚಾಯ್ ವಾಲಾನ ಭೇಟಿಗೆ ಚಾಮರಾಜನಗರದ ಚಾಯ್ ವಾಲಾ ಕಾತುರನಾಗಿದ್ದು, ಮೋದಿಗೂ ಕೂಡ ಚಾನ್ಸ್ ಸಿಕ್ಕಿದ್ರೆ ಟೀ ಕುಡಿಸ್ತೀನಿ ಅಂತಿದ್ದಾರೆ. 2024ರ ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಚಾಮರಾಜನಗರದ ಬೀದಿ ಬದಿ ಟೀ ಅಂಗಡಿ ವ್ಯಾಪಾರಿಯೊಬ್ಬರು ಆಯ್ಕೆಯಾಗಿದ್ದಾರೆ. ಚಾಮರಾಜನಗರದ ಸಮೀವುಲ್ಲಾ ಎಂಬುವವರು ಆಯ್ಕೆಯಾದ ಬೀದಿಬದಿ ಚಾಯ್ ವಾಲಾ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪಿಎಂ ಸ್ವನಿಧಿ ಯೋಜನೆಯಲ್ಲಿ ಕಿರುಸಾಲ ಪಡೆದು ಮರುಪಾವತಿ ಮಾಡಿರುವ ಈ ಫಲಾನುಭವಿಯನ್ನು ಪರಿಗಣಿಸಲಾಗಿದೆ. ಅಲ್ಲದೇ ಡೇ ನಲ್ಮ್ ಆರ್ಹರ ಹೆಸರು ಆಯ್ಕೆ ಮಾಡಿದ್ದಾರೆ. ಕೋವಿಡ್ ವೇಳೆ ಬೀದಿ ಬದಿ ವ್ಯಾಪಾರಿಗಳು ಅಕ್ಷರಶಃ ನಲುಗಿ ಹೋಗಿದ್ದರು. ಇನ್ನೂ ಲೇವಾದೇವಿಗಾರರು ಬಡ್ಡಿ ಹೆಚ್ಚಿಸಿ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ಕೊಡುತ್ತಿದ್ದರು. ಇದನ್ನೆಲ್ಲ ತಪ್ಪಿಸಲು ಸ್ಥಳೀಯ ಸಂಸ್ಥೆ ಹಾಗೂ ಡೇ ನಲ್ಮ್ ಮೂಲಕ ಸಾಲ ಕೊಡಲಾಗಿದೆ. ಅದರಂತೆ ಮೊದಲಿಗೆ 10 ಸಾವಿರ ರು, ನಂತರ 20 ಸಾವಿರ ರು, ತದನಂತರ 50 ಸಾವಿರ ರು. ಸಾಲದ ಸೌಲಭ್ಯ ಕೊಡಲಾಗುತ್ತದೆ. ಸಾಲ ಪಡೆದವರು ಮರುಪಾವತಿ ಮಾಡಿದರಷ್ಟೇ ಸಾಲ ಕೊಡುವ ಪ್ರಕ್ರಿಯೆ ಮುಂದುವರೆಯುತ್ತದೆ. ಆದರೆ ಸಾಲ ಪಡೆದ ಬಹುತೇಕ ಜನರು ಅದನ್ನು ಮರುಪಾವತಿಸುವ ಗೋಜಿಗೆ ಹೋಗುವುದೇ ಇಲ್ಲ. ಆದರೆ, ಈ ಸ್ಕೀಂ ನಲ್ಲಿ ಸಾಲ ಪಡೆದ ಸಮೀವುಲ್ಲಾ ಟೀ ಅಂಗಡಿ ಮಾಡಿ ಸಾಲ ಮರುಪಾವತಿಸಿದ್ದಾರೆ. ಯೋಜನೆಯಿಂದ ಆರ್ಥಿಕ ಸಬಲರಾಗಿದ್ದಾರೆ. ಚಾಯ್ ವಾಲಾ ಆಯ್ಕೆ: ಚಾಮರಾಜನಗರದ ಹಳೇ ಆರ್‌ಟಿಓ ಕಚೇರಿ ರಸ್ತೆಯ ಬೀದಿ ಬದಿಯಲ್ಲಿ ಟೀ ಮಾರಾಟ ಮಾಡುವ ಸಮೀವುಲ್ಲಾ ಹೆಸರನ್ನು ಜಿಲ್ಲೆಯಿಂದ ಆಯ್ಕೆ ಮಾಡಿ ಇಲ್ಲಿನ ಅಧಿಕಾರಿಗಳು ರಾಷ್ಟ್ರೀಯ ಜೀವನೋಪಾಯ ಅಭಿಯಾನಕ್ಕೆ ಶಿಫಾರಸ್ಸು ಮಾಡಿದ್ದಾರೆ. ಚಾಮರಾಜನಗರದ ಚಾಯ್ ವಾಲಾನೊಬ್ಬ ‘ದೇಶದ ಚಾಯ್ ವಾಲಾನ ಭೇಟಿ ಮಾಡಲೂ ಹೋಗ್ತಿನಿ’ ಅಂತಾ ಸಂತಸ ಪಟ್ಟಿದ್ದಾರೆ. ಹೆಮ್ಮೆಯ ವಿಚಾರ: ಚಾಮರಾಜನಗರದ ಒಬ್ಬ ಮುಸ್ಲಿಂ ಟೀ ವ್ಯಾಪಾರಿ ದೇಶದ ಪ್ರಧಾನಿ ಭಾಗವಹಿಸುವ ದೆಹಲಿ ಗಣರಾಜ್ಯೋತ್ಸವಕ್ಕೆ ಚಾಮರಾಜನಗರದಿಂದ ಆಯ್ಕೆಯಾಗಿರುವುದು ಎಲ್ಲರೂ ಹೆಮ್ಮೆ ಪಡುವ ವಿಚಾರ. ಹಾಗು ಚಾಮರಾಜನಗರಕ್ಕೆ ಸಿಕ್ಕ ಗೌರವ ಸಮೀವುಲ್ಲಾ ಒಬ್ಬರ ಬಳಿಯೂ ಕೂಡ ಸಾಲ ಪಡೆಯಲ್ಲ. ಸಾಲ ಮಾಡಿದರೂ ಕೂಡ ಅದನ್ನು ತೀರಿಸುವ ಇಚ್ಚೆ ಹೊಂದಿದ್ದಾರೆ. ಅವರ ಹಾಗೆ ಪ್ರತಿಯೊಬ್ಬರು ಯಾವುದೇ ಬ್ಯಾಂಕ್ ಹಾಗು ಕೆಂದ್ರ ಹಾಗು ರಾಜ್ಯ ಸರ್ಕಾರಗಳ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮರುಪಾವತಿ ಮಾಡಿ ಬೇರೆಯವರಿಗೆ ಮಾದರಿಯಾಗಬೇಕು. ಪ್ರತಿ ಜಿಲ್ಲೆಯಿಂದಲೂ ಕೂಡ ಬೀದಿ ಬದಿ ವ್ಯಾಪಾರಿಗಳನ್ನು ದೆಹಲಿಯ ಗಣರಾಜ್ಯೋತ್ಸವಕ್ಕೆ ಆಯ್ಕೆ ಮಾಡಿದ್ದು, ಚಾಮರಾಜನಗರದ ಚಾಯ್ ವಾಲಾ ಆಯ್ಕೆ ದೇಶದ ಚೌಕಿದಾರನಿಗೆ ಟೀ ಕುಡಿಸುವ ಆಸೆ ಹೊಂದಿದ್ದಾರೆ. ----------- ಬಾಕ್ಸ್.... ನಾನು ಪಡೆದ ಸಾಲವನ್ನು ಪ್ರಮಾಣಿಕವಾಗಿ ಕಟ್ಟಿದ್ದರಿಂದ ನನಗೆ ದೆಹಲಿ ಗಣರಾಜೋತ್ಸವಕ್ಕೆ ಭಾಗವಹಿಸುವ ಅವಕಾಶ ಸಿಕ್ಕಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದ್ದು, ಪ್ರತಿಯೊಬ್ಬರು ಪಿಎಂ ಸ್ವನಿಧಿ ಯೋಜನೆ ಸದ್ಬಳಕೆ ಮಾಡಿಕೊಂಡು ಪ್ರಮಾಣಿಕವಾಗಿ ಸಾಲಕಟ್ಟುವ ಮೂಲಕ ಜೀವನ ಕಟ್ಟಿಕೊಳ್ಳಲು ಮುಂದಾಗಬೇಕು. ಸಮೀವುಲ್ಲಾ, ಮುಸ್ಲಿಂ ಟೀ ವ್ಯಾಪಾರಿ, ಚಾಮರಾಜನಗರ ---------- 20ಸಿಎಚ್ಎನ್8 ದೆಹಲಿ ಗಣರಾಜೋತ್ಸವಕ್ಕೆ ಭಾಗವಹಿಸಲು ಆಯ್ಕೆಯಾಗಿರುವ ಪಿಎಂ ಸ್ವನಿಧಿ ಯೋಜನೆ ಪಲಾನುಭವಿ ಚಾಮರಾಜನಗರದ ಟೀ ವ್ಯಾಪಾರಿ ಸಮೀವುಲ್ಲಾ.