ದಸರಾ ವೈಭವ ಬಿಂಬಿಸುವ ಬೊಂಬೆಗಳ ಪ್ರದರ್ಶನ

| Published : Oct 17 2023, 12:46 AM IST

ಸಾರಾಂಶ

ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯ ನಾಗರತ್ನಮ್ಮ ನಾರಾಯಣ ಭಟ್ಟ ಜ್ಞಾನ ಮಂದಿರದಲ್ಲಿ ನವರಾತ್ರಿ ಮಹತ್ವ ಸಾರುವ ಮಾದರಿಯಲ್ಲಿ ದಸರಾ ವೈಭವ ಬಿಂಬಿಸುವ ಬೊಂಬೆಗಳ ಪ್ರದರ್ಶನ ನಡೆಯುತ್ತಿದೆ.ಪಟ್ಟಣದ ಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಭಟ್ ಮತ್ತು ಮಂಗಳ ದಂಪತಿಗಳು ನವರಾತ್ರಿ ಅಂಗವಾಗಿ ಏರ್ಪಡಿಸಿರುವ ಸಾವಿರಾರು ಬೊಂಬೆಗಳ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯುತ್ತಿವೆ. ಬೊಂಬೆಗಳನ್ನು ಸಾರ್ವಜನಿಕರು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಜ್ಞಾನ ಮಂದಿರದಲ್ಲಿ ನವರಾತ್ರಿ ಮಹತ್ವ ಸಾರುವ ಕಾರ್ಯ ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯ ನಾಗರತ್ನಮ್ಮ ನಾರಾಯಣ ಭಟ್ಟ ಜ್ಞಾನ ಮಂದಿರದಲ್ಲಿ ನವರಾತ್ರಿ ಮಹತ್ವ ಸಾರುವ ಮಾದರಿಯಲ್ಲಿ ದಸರಾ ವೈಭವ ಬಿಂಬಿಸುವ ಬೊಂಬೆಗಳ ಪ್ರದರ್ಶನ ನಡೆಯುತ್ತಿದೆ. ಪಟ್ಟಣದ ಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಭಟ್ ಮತ್ತು ಮಂಗಳ ದಂಪತಿಗಳು ನವರಾತ್ರಿ ಅಂಗವಾಗಿ ಏರ್ಪಡಿಸಿರುವ ಸಾವಿರಾರು ಬೊಂಬೆಗಳ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯುತ್ತಿವೆ. ಬೊಂಬೆಗಳನ್ನು ಸಾರ್ವಜನಿಕರು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಾಜರ ಕಾಲದ ಆಳ್ವಿಕೆ, ಪುರಾತನ ಕಾಲದ ಸಂಸ್ಕೃತಿ, ಉಡುಗೆ-ತೊಡುಗೆಗಳನ್ನು ಬಿಂಬಿಸುವ ಬೊಂಬೆಗಳಿಗೆ ವಿಶೇಷ ಉಡುಗೆ ತೊಡುಗೆಗಳ ಮೂಲಕ ಬೊಂಬೆಗಳು ಇತಿಹಾಸ ಮರುಕಳಿಸುವಂತೆ ಮಾಡಿವೆ. ಈ ಬೊಂಬೆ ಪ್ರದರ್ಶನದಲ್ಲಿ ಜಂಬೂ ಸವಾರಿ, ರಾಜ ಪರಿವಾರ, ನವ ದುರ್ಗೆಯರು, ಮೈಸೂರಿನ ಗರುಡೋತ್ಸವ, ಗಣಪತಿ ವಾದ್ಯ ಮೇಳ, ಸಪ್ತ ಮಾತೃಕೆಯರು, ಸಪ್ತ ಋಷಿಗಳು, ನವಧಾನ್ಯಗಳು ಸೇರಿದಂತೆ ವಿವಿಧ ರೀತಿಯ ಬೊಂಬೆಗಳು ನೋಡುಗರ ಗಮನ ಸೆಳೆಯುತ್ತಿವೆ. ಜೊತೆಗೆ ದೇವಾಲಯ, ಯಾಗಶಾಲೆ, ಉಷ್ಣ ಅಂಗಡಿ, ಚಿನ್ನಾಭರಣ ಅಂಗಡಿ, ಕನ್ನೆಯರ ಜಲಕ್ರೀಡೆ, ಕಿರಾಣಿ ಅಂಗಡಿ, ಗ್ರಾಮೀಣ ಭಾರತ, ವಿದೇಶಿ ಪ್ರವಾಸಿಗರು ಹಾಗೂ ಜಾನಪದ ಕಲೆಗಳಿಗೆ ಜೀವತುಂಬಿ ಬೊಂಬೆಗಳನ್ನು ಮಾದರಿಯನ್ನಾಗಿ ಇಡಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಮಾದರಿ, ಕ್ರಿಕೆಟ್ ಆಟ ಸೇರಿದಂತೆ ಪುರಾತನ ಕಾಲದ ಆಚಾರ ವಿಚಾರಗಳನ್ನೊಳಗೊಂಡ ಚಿತ್ರಣಗಳನ್ನು ಗೊಂಬೆಗಳ ಮೂಲಕ ಅನಾವರಣ ಮಾಡಲಾಗಿದೆ. ಕಳೆದ 10 ವರ್ಷಗಳಿಂದ ಈ ದಂಪತಿಗಳು ಬೊಂಬೆಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡುತ್ತಾ ಬಂದಿದ್ದಾರೆ. ನವರಾತ್ರಿ ಆರಂಭದ ದಿನದಿಂದ ಮುಂದಿನ ೧೫ ದಿನಗಳ ವರೆಗೆ ಬೊಂಬೆಗಳ ಪ್ರದರ್ಶನದಕ್ಕೆ ಇಡಲಾಗಿರುತ್ತದೆ. ಪ್ರತೀನಿತ್ಯ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಬೊಂಬೆಗಳನ್ನು ನೋಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ನಶಿಸಿ ಹೋಗುತ್ತಿರುವ ಪರಂಪರೆ ಮತ್ತು ಪೂರ್ವಿಕರ ಆಚಾರ ವಿಚಾರಗಳ ಅನುಕರಣೆಗೆ ಈ ಬೊಂಬೆಗಳ ಪ್ರದರ್ಶನ ಸಹಕಾರಿಯಾಗಲಿದೆ. ಅಲ್ಲದೆ ಬೊಂಬೆಗಳ ವೀಕ್ಷಣೆಗೆ ಬರುವ ಪ್ರತಿಯೊಬ್ಬರಿಗೆ ಪ್ರಸಾದ ವಿತರಿಸಲಾಗುತ್ತಿದೆ. ಒಮ್ಮೆ ಮಂದಿರದ ಒಳಗೆ ಪ್ರವೇಶಿಸಿದರೆ ಮತ್ತೆ ವಾಪಸ್ ಹಿಂದಿರುಗಿ ಹೋಗಲು ಮನಸ್ಸೆ ಬರುವುದಿಲ್ಲ ಎನ್ನುತ್ತಾರೆ ಬೊಂಬೆ ಪ್ರಿಯರು. ------------- 16ಕೆಎಂಎನ್ ಡಿ12,13,14,15 ಶ್ರೀರಂಗಪಟ್ಟಣ ಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಭಟ್ ಮತ್ತು ಮಂಗಳ ದಂಪತಿಗಳು ಬೊಂಬೆಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದು. ಸಾವಿರಾರು ಬೊಂಬೆಗಳ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯುತ್ತಿವೆ. ಕೃಷ್ಣಭಟ್ ಮತ್ತು ಮಂಗಳ ದಂಪತಿ