ಸಾರಾಂಶ
ನವದೆಹಲಿ: ರಾಹುಲ್ ರಾಜಕೀಯಕ್ಕೆ ತಕ್ಕ ವ್ಯಕ್ತಿಯಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹೇಳಿದ್ದರು ಎಂಬುದು ಅವರ ಪುತ್ರಿ ಶರ್ಮಿಷ್ಠಾ ಅವರು ಬರೆದಿರುವ ಪುಸ್ತಕದಿಂದ ತಿಳಿದುಬಂದಿದೆ.
ನವದೆಹಲಿ: ರಾಹುಲ್ ರಾಜಕೀಯಕ್ಕೆ ತಕ್ಕ ವ್ಯಕ್ತಿಯಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹೇಳಿದ್ದರು ಎಂಬುದು ಅವರ ಪುತ್ರಿ ಶರ್ಮಿಷ್ಠಾ ಅವರು ಬರೆದಿರುವ ಪುಸ್ತಕದಿಂದ ತಿಳಿದುಬಂದಿದೆ. ರಾಹುಲ್ ಗಾಂಧಿ ಅವರು ಸುಗ್ರೀವಾಜ್ಞೆಯ ಪ್ರತಿ ಹರಿದಿರುವುದನ್ನು ತಮ್ಮ ಡೈರಿಯಲ್ಲಿ ಉಲ್ಲೇಖಿಸಿರುವ ಪ್ರಣಬ್ ಮುಖರ್ಜಿ, ನೆಹರು ಅವರ ಕುಟುಂಬಕ್ಕಿದ್ದ ಗರ್ವ ರಾಹುಲ್‌ಗಾಂಧಿ ಅವರಲ್ಲೂ ಕಂಡು ಬರುತ್ತದೆ. ಆದರೆ ಅವರಲ್ಲಿದ್ದ ರಾಜಕೀಯ ಇವರಲ್ಲಿಲ್ಲ. ಇವರ ನೆಹರು ಕುಟುಂಬದ ರಾಜಕೀಯಕ್ಕೆ ಕೊನೆಯ ಮೊಳೆ ಎಂದು ಹೇಳಿದ್ದಾರೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.