₹1000 ಮುಖಬೆಲೆಯ ನೋಟು ಮತ್ತೆ ಜಾರಿ ಇಲ್ಲ: ಆರ್‌ಬಿಐ ಸ್ಪಷ್ಟನೆ
KannadaprabhaNewsNetwork | Published : Oct 26 2023, 01:00 AM IST
₹1000 ಮುಖಬೆಲೆಯ ನೋಟು ಮತ್ತೆ ಜಾರಿ ಇಲ್ಲ: ಆರ್‌ಬಿಐ ಸ್ಪಷ್ಟನೆ
ಸಾರಾಂಶ
ದೇಶದಲ್ಲಿ ಮರಳಿ 1000 ನೋಟುಗಳನ್ನು ತರಲಾಗುತ್ತದೆ ಎಂದು ಹರಿದಾಡುತ್ತಿದ್ದ ಸುದ್ದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿರಾಕರಿಸಿದೆ,
ಮುಂಬೈ: ದೇಶದಲ್ಲಿ ಮರಳಿ 1000 ನೋಟುಗಳನ್ನು ತರಲಾಗುತ್ತದೆ ಎಂದು ಹರಿದಾಡುತ್ತಿದ್ದ ಸುದ್ದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿರಾಕರಿಸಿದೆ,‘ದೇಶದಲ್ಲಿ ಮರಳಿ 1000 ರು. ಮುಖಬೆಲೆಯ ನೋಟುಗಳನ್ನು ತರುವ ಯಾವುದೇ ಪ್ರಸ್ತಾಪ ಆರ್‌ಬಿಐ ಹಾಗೂ ಕೇಂದ್ರ ಸರ್ಕಾರದ ಮುಂದಿಲ್ಲ. ಇಂಥ ಸುದ್ದಿಗಳಿಗೆ ಜನರು ಮರುಳಾಗಬೇಡಿ. ಜೊತೆಗೆ ಯಾವುದೇ ಆಧಾರರಹಿತ ಸುದ್ದಿಗಳನ್ನು ನಂಬಿ ಮೋಸ ಹೋಗಬೇಡಿ. ಈಗಾಗಲೇ 500 ರು. ನೋಟುಗಳ ಚಲಾವಣೆ ಸಾಕಷ್ಟಿದ್ದು, ಎಲ್ಲ ಅಗತ್ಯಗಳನ್ನು ಪೂರೈಸುತ್ತಿವೆ’ ಎಂದಿದೆ. ಆರ್‌ಬಿಐ 2000 ರು. ಮುಖಬೆಲೆಯ ನೋಟುಗಳನ್ನು ಹಿಂಪಡೆದಿರುವ ಕಾರಣ 1000 ರು. ಮುಖಬೆಲೆಯ ನೋಟುಗಳು ಮರಳಿ ಬರಲಿವೆ ಎಂಬ ಸುದ್ದಿ ಹರಡಿತ್ತು.