ಕೆಂಗೇರಿ ಹೋಬಳಿ ಶ್ರೀಕ್ಷೇತ್ರ ಆನೆಪಾಳ್ಯದಲ್ಲಿ ಶನೈಶ್ಚರ ಸ್ವಾಮಿ ಜಾತ್ರಾ ಮಹೋತ್ಸವ ಸಂಪನ್ನ

| N/A | Published : Mar 23 2025, 01:33 AM IST / Updated: Mar 23 2025, 07:15 AM IST

ಸಾರಾಂಶ

ಕೆಂಗೇರಿ ಹೋಬಳಿ ಶ್ರೀಕ್ಷೇತ್ರ ಆನೆಪಾಳ್ಯದಲ್ಲಿ ಶನೈಶ್ಚರ ಸ್ವಾಮಿ ದೇವಾಲಯ ಟ್ರಸ್ಟ್‌ನಿಂದ ಆಯೋಜಿಸಿದ್ದ 37ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

  ಕೆಂಗೇರಿ : ಕೆಂಗೇರಿ ಹೋಬಳಿ ಶ್ರೀಕ್ಷೇತ್ರ ಆನೆಪಾಳ್ಯದಲ್ಲಿ ಶನೈಶ್ಚರ ಸ್ವಾಮಿ ದೇವಾಲಯ ಟ್ರಸ್ಟ್‌ನಿಂದ ಆಯೋಜಿಸಿದ್ದ 37ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಈ ವೇಳೆ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಆರ್.ಶಿವಮಾದಯ್ಯ ಅವರು ಮಾತನಾಡಿ, ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಇತಿಹಾಸದ ಭಾಗವಾಗಿರುವ ಧಾರ್ಮಿಕ ಆಚರಣೆಗಳು ಸಮುದಾಯಗಳ ನಡುವೆ ಪ್ರೀತಿ, ವಿಶ್ವಾಸ, ಬಾಂಧವ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ ಎಂದು ತಿಳಿಸಿದರು.

ಧರ್ಮದರ್ಶಿ ಎಂ.ರಾಮಪ್ಪ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಹಲವು ವರ್ಷಗಳಿಂದ ಪೂಜಾ ಕೈಂಕರ್ಯ ನಡೆಸಿಕೊಂಡು ಬರಲಾಗುತ್ತಿದ್ದು, ಕ್ಷೇತ್ರವು ಗ್ರಾಮದ ಸುತ್ತಮುತ್ತಲ ಬಡಾವಣೆಗಳ ನಾಗರಿಕರು, ಭಕ್ತಾದಿಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ ಎಂದು ಹೇಳಿದರು. ಎಚ್.ಗೊಲ್ಲಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಈರಯ್ಯ, ಕಾಂಗ್ರೆಸ್ ಮುಖಂಡ ಅಮೃತ್ ಗೌಡ, ಸಮಾಜ ಸೇವಕ ದೊಡ್ಡಿಪಾಳ್ಯ ಕೃಷ್ಣಪ್ಪ, ಮುನಿರಾಜು ಗಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕೆಂಗೇರಿ ಹೋಬಳಿ ಶ್ರೀಕ್ಷೇತ್ರ ಆನೆಪಾಳ್ಯದಲ್ಲಿ ಶನೈಶ್ಚರ ಸ್ವಾಮಿ ದೇವಾಲಯ ಟ್ರಸ್ಟ್‌ನಿಂದ ಆಯೋಜಿಸಿದ್ದ 37ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.