ಬಿಜೆಪಿ ಜಯದ ಎಫೆಕ್ಟ್: ಸೆನ್ಸೆಕ್ಸ್‌, ನಿಫ್ಟಿ ಸಾರ್ವಕಾಲಿಕ ದಾಖಲೆ

| Published : Dec 05 2023, 01:30 AM IST

ಬಿಜೆಪಿ ಜಯದ ಎಫೆಕ್ಟ್: ಸೆನ್ಸೆಕ್ಸ್‌, ನಿಫ್ಟಿ ಸಾರ್ವಕಾಲಿಕ ದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚರಾಜ್ಯ ಚುನಾವಣೆಯಲ್ಲಿ 3 ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಜಯ ಸಾಧಿಸಿದ ಕಾರಣ ರಾಜಕೀಯ ಸ್ಥಿರತೆ ಲಕ್ಷಣ ಗೋಚಿಸಿದೆ. ಇದು ಷೇರುಪೇಟೆ ಮೇಲೂ ಉತ್ತಮ ಪರಿಣಾಮ ಬೀರಿದ್ದು, ಸೋಮವಾರ ಬಾಂಬೆ ಷೇರುಪೇಟೆ ‘ಸೆನ್ಸೆಕ್ಸ್’ ಹಾಗೂ ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಸಾರ್ವಕಾಲಿಕ ದಾಖಲೆ ಸ್ಥಾಪಿಸಿವೆ.

ಸೆನ್ಸೆಕ್ಸ್‌ 1383, ನಿಫ್ಟಿ 418 ಅಂಕ ನೆಗೆತ

ಹೂಡಿಕೆದಾರರು ₹5.81 ಲಕ್ಷ ಕೋಟಿ ಶ್ರೀಮಂತ

ಮಾರುಕಟ್ಟೆ ಮೌಲ್ಯ ದಾಖಲೆಯ ₹343 ಲಕ್ಷ ಕೋಟಿಗೆ ಏರಿಕೆಮುಂಬೈ: ಪಂಚರಾಜ್ಯ ಚುನಾವಣೆಯಲ್ಲಿ 3 ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಜಯ ಸಾಧಿಸಿದ ಕಾರಣ ರಾಜಕೀಯ ಸ್ಥಿರತೆ ಲಕ್ಷಣ ಗೋಚಿಸಿದೆ. ಇದು ಷೇರುಪೇಟೆ ಮೇಲೂ ಉತ್ತಮ ಪರಿಣಾಮ ಬೀರಿದ್ದು, ಸೋಮವಾರ ಬಾಂಬೆ ಷೇರುಪೇಟೆ ‘ಸೆನ್ಸೆಕ್ಸ್’ ಹಾಗೂ ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಸಾರ್ವಕಾಲಿಕ ದಾಖಲೆ ಸ್ಥಾಪಿಸಿವೆ.ಸೆನ್ಸೆಕ್ಸ್‌ 1383 ಅಂಕ ಏರಿಕೆ ದಾಖಲೆಯ 68,865.12ರಲ್ಲಿ ಮುಕ್ತಾಯ ಕಂಡಿದೆ ಇನ್ನು ನಿಫ್ಟಿ 418 ಅಂಕ ಏರಿಕೆ ಕಂಡು 20,686.8ರಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್‌ ಮಧ್ಯಂತರದಲ್ಲಿ 68,918.22 ಅಂಕಕ್ಕೂ ಏರಿತ್ತು.ಇದರಿಂದಬಾಂಬೆ ಷೇರುಪೇಟೆಯಲ್ಲಿನ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 5.81 ಲಕ್ಷ ಕೋಟಿ ರು.ನಷ್ಟು ಹೆಚ್ಚಳ ಕಂಡಿದೆ. ಅಲ್ಲದೆ, ಬಾಂಬೆ ಷೇರುಪೇಟೆಯ ಮಾರುಕಟ್ಟೆ ಮೌಲ್ಯ ₹337.67 ಲಕ್ಷ ಕೋಟಿಯಿಂದ ಸಾರ್ವಕಾಲಿಕ ದಾಖಲೆ 343.48 ಲಕ್ಷ ಕೋಟಿ ರು.ಗೆ ಹೆಚ್ಚಿದೆ.