‘ವೈಕೋಮ್‌ ಪೊರಾಟ್ಟಂ’ಕನ್ನಡ ಅನುವಾದ ಕೃತಿ ಬಿಡುಗಡೆ ಮಾಡಿದ ಸ್ಟಾಲಿನ್‌

| Published : Nov 30 2023, 01:15 AM IST

‘ವೈಕೋಮ್‌ ಪೊರಾಟ್ಟಂ’ಕನ್ನಡ ಅನುವಾದ ಕೃತಿ ಬಿಡುಗಡೆ ಮಾಡಿದ ಸ್ಟಾಲಿನ್‌
Share this Article
  • FB
  • TW
  • Linkdin
  • Email

ಸಾರಾಂಶ

ನವದೆಹಲಿ: ಮುಂಬರುವ ಸಂಸತ್‌ ಅಧಿವೇಶನಕ್ಕೆ ಲೋಕಸಭಾ ಸಚಿವಾಲಯ 18 ಮಸೂದೆಗಳನ್ನು ಪಟ್ಟಿ ಮಾಡಿದ್ದು, ಡಿ.4ರಿಂದ ಆರಂಭವಾಗುವ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ. ಮಸೂದೆಗಳ ಪೈಕಿ ಪ್ರಮುಖವಾಗಿ ಮಹಿಳಾ ಮಸೂದೆಯನ್ನು ಜಮ್ಮು-ಕಾಶ್ಮೀರ ಮತ್ತು ಪಾಂಡಿಚೆರಿಗೂ ವಿಸ್ತರಿಸುವ ಕುರಿತಾಗಿ 2, ಅಪರಾಧ ಕಾನೂನುಗಳ ಕುರಿತಾಗಿ 3 ಮತ್ತು ಜಮ್ಮು ಕಾಶ್ಮೀರದ ವಿಧಾನಸಭೆಯ ಸಂಖ್ಯಾಬಲವನ್ನು 114ಕ್ಕೆ ಹೆಚ್ಚಳ ಮಾಡಿ ಕಾಶ್ಮೀರಿ ವಲಸಿಗರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಸ್ಥಳಾಂತರಗೊಂಡವರು ಹಾಗೂ ಬುಡಕಟ್ಟು ಜನಾಂಗದವರಿಗೆ ಮೀಸಲಾತಿ ಕಲ್ಪಿಸುವ ಕುರಿತಂತೆ 4, ಚುನಾವಣಾ ಆಯುಕ್ತರನ್ನು ನೇಮಿಸಲು ಪ್ರಧಾನಮಂತ್ರಿ ನೇತೃತ್ವದಲ್ಲಿ ಸಮಿತಿ ರಚಿಸುವ ಕುರಿತಂತೆ 1, ಹಾಗೆಯೇ ಅಂಚೆ, ಪತ್ರಿಕೆ, ದೆಹಲಿ, ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ವಕೀಲರಿಗೆ ಸಂಬಂಧಿಸಿದ ಮಸೂದೆಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ.

ಚೆನ್ನೈ: ಅಸ್ಪೃಶ್ಯತೆ ಮತ್ತು ಜಾತಿ ಆಧಾರಿತ ತಾರತಮ್ಯದ ವಿರುದ್ಧ ನಡೆದ ಹೋರಾಟವನ್ನು ತಿಳಿಸುವ ‘ವೈಕೋಮ್‌ ಪೊರಟ್ಟಂ’ ಕೃತಿಯ ಕನ್ನಡ ಭಾಷಾಂತರ ಪುಸ್ತಕವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಬುಧವಾರ ಬಿಡುಗಡೆ ಮಾಡಿದರು.

ಪಾಜ್ಹಾ ಅತಿಯಮ್‌ ಅವರು ತಮಿಳಿನಲ್ಲಿ ಬರೆದಿರುವ ಕೃತಿಯನ್ನು ಸೆಲ್ವ ಕುಮಾರ್‌ ಅವರು ಪ್ರೊ.ಶ್ರೀಧರ ಅವರ ಮಾರ್ಗದರ್ಶನದಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಅನುವಾದಗೊಂಡಿರುವ ಪುಸ್ತಕದ ಮೊದಲ ಪ್ರತಿಯನ್ನು ದ್ರಾವಿಡ ಕಳಗಂ ಮುಖ್ಯಸ್ಥ ಕೆ.ವೀರಮಣಿ ಅವರಿಗೆ ನೀಡಲಾಯಿತು. ವೈಕೋಮ್ ಸತ್ಯಾಗ್ರಹದಲ್ಲಿ ಪೆರಿಯಾರ್‌ ವಿ.ರಾಮಸ್ವಾಮಿ ಅವರ ನಾಯಕತ್ವದ ಪಾತ್ರವನ್ನು ಈ ಪುಸ್ತಕ ವಿವರಿಸುತ್ತದೆ.