ಕೆಲಸ, ಸಾವು ಮತ್ತು ರೋಗ - ದಕ್ಷಿಣ ಅಮೆರಿಕದ ಇಂಡಿಯನ್ ಜನರಲ್ಲಿ ಒಂದು ಕಥೆ - ಲಿಯೋ ಟಾಲ್‌ಸ್ಟಾಯ್‌

| Published : Dec 15 2024, 11:53 AM IST

Sri lanka budget Travel in monsoon

ಸಾರಾಂಶ

ದೇವರು ಮನುಷ್ಯರನ್ನು ಕೆಲಸಮಾಡುವ ಆವಶ್ಯಕತೆಯೇ ಇಲ್ಲದಂತೆ ಸೃಷ್ಟಿಸಿದನು. ಅವರಿಗೆ ಮನೆಯಾಗಲಿ, ಬಟ್ಟೆಯಾಗಲಿ, ಆಹಾರವಾಗಲಿ ಬೇಕಾಗಿಯೇ ಇರಲಿಲ್ಲ.  

ಕೆಲಸ, ಸಾವು ಮತ್ತು ರೋಗ

-ಲಿಯೋ ಟಾಲ್‌ಸ್ಟಾಯ್‌

ದಕ್ಷಿಣ ಅಮೆರಿಕದ ಇಂಡಿಯನ್ ಜನರಲ್ಲಿ ಒಂದು ಕಥೆ ಪ್ರಚಾರದಲ್ಲಿದೆ.

ದೇವರು ಮನುಷ್ಯರನ್ನು ಕೆಲಸಮಾಡುವ ಆವಶ್ಯಕತೆಯೇ ಇಲ್ಲದಂತೆ ಸೃಷ್ಟಿಸಿದನು. ಅವರಿಗೆ ಮನೆಯಾಗಲಿ, ಬಟ್ಟೆಯಾಗಲಿ, ಆಹಾರವಾಗಲಿ ಬೇಕಾಗಿಯೇ ಇರಲಿಲ್ಲ. ನೂರು ವರ್ಷದವರೆಗೂ ಬದುಕುತ್ತಿದ್ದರು ; ರೋಗವೆಂದರೇನೆಂಬುದೇ ಅವರಿಗೆ ಗೊತ್ತಿರಲಿಲ್ಲ. ಕಾಲ ಕಳೆಯಿತು. ಈ ಮನುಷ್ಯರು ಹೇಗೆ ಜೀವಿಸುತ್ತಿರುವರೋ ತಿಳಿದುಕೊಳ್ಳಬೇಕೇಂದು ದೇವರು ಬಂದು ನೋಡಿದನು. ಆನಂದವಾಗಿ ಜೀವಿಸುವ ಬದಲು ಅವರು ಪ್ರತಿ ಯೊಬ್ಬರೂ ತಮ್ಮಷ್ಟಕ್ಕೆ ತಾವು ಬೇರೆಯಾಗಿ ಬಾಳುತ್ತ ಒಬ್ಬರೊಡ ನೊಬ್ಬರು ಜಗಳವಾಡುತ್ತಿದ್ದರು. ಜೀವನದಲ್ಲಿ ಆನಂದವನ್ನು ಕಾಣುವುದಕ್ಕೆ ಬದಲಾಗಿ ಅದೊಂದು ಕಂಟಕವೆಂದು ಭಾವಿಸುವ ಮಟ್ಟಿಗೆ ತಮ್ಮ ಜೀವನವನ್ನು ಹೊಲೆಗೆಡಿಸಿಬಿಟ್ಟಿದ್ದರು.

ಆಗ ದೇವರು ಇವರಲ್ಲಿ ಪ್ರತಿಯೊಬ್ಬನೂ ತನ್ನಷ್ಟಕ್ಕೆ ತಾನೇ ಬೇರೆ ಬೇರೆಯಾಗಿ ಜೀವಿಸುತ್ತಿರುವುದೇ ಅದಕ್ಕೆ ಕಾರಣವೆಂದೂ ಹಾಗಿರುವುದು ಸರಿಯಲ್ಲವೆಂದೂ ಯೋಚಿಸಿ ಮನುಷ್ಯರು ಕೆಲಸಮಾಡದಿದ್ದರೆ ಜೀವಿಸುವ ಸಂಭವವೇ ಇಲ್ಲದಂತೆ ಏರ್ಪಡಿಸಿದನು. ಚಳಿಯಿಂದಲೂ ಹಸಿವಿನಿಂದಲೂ ತೊಂದರೆಪಡದಿರುವುದಕ್ಕಾಗಿ ಅವರು ನೆಲವನ್ನು ಅಗೆದು, ಸಸ್ಯಗಳನ್ನು ಬೆಳೆದು ಕಾಳುಗಳನ್ನು ಕೂಡಿಹಾಕಲೇ ಬೇಕಾಯಿತು.

ದೇವರು, “ ಕೆಲಸವು ಇವರನ್ನು ಒಟ್ಟುಗೂಡಿಸುತ್ತದೆ. ಒಂಟಿ ಯಾಗಿ ತನ್ನಷ್ಟಕ್ಕೇ ತಾನಿರುವುದಾದರೆ ಮರದ ದಿಮ್ಮಿಗಳನ್ನು ಸಾಗಿಸಿ ಕೊಂಡು ಹೋಗುವುದಕ್ಕೂ ಮನೆ ಕಟ್ಟಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ. ಆಯುಧಗಳನ್ನೂ ಇತರ ಉಪಕರಣಗಳನ್ನೂ ನಿರ್ಮಿಸಿಕೊಂಡು, ಬಿತ್ತಿ, ಬೆಳೆದು, ಪೈರು ತೆಗೆದುಕೊಳ್ಳುವುದೂ ಒಂಟಿಯಾದವನಿಗೆ ಸಾಗದ ಕೆಲಸ. ನೂಎ ನೂತು, ನೆಯ್ದು ಒಟ್ಟೆಗಳನ್ನು ಹೊಲಿದುಕೊಳ್ಳುವುದೂ ಅಸಾಧ್ಯ. ಇದರಿಂದ ಒಬ್ಬರೊಡನೊಬ್ಬರು ಸ್ನೇಹದಿಂದ ಒಟ್ಟುಗೂಡಿ ಕೆಲಸಮಾಡಿದಷ್ಟೂ ಹೆಚ್ಚು ಹೆಚ್ಚು ಕಾರ್ಯಸಾಧನೆಯಾಗುವುದೆಂದು ತಿಳಿದುಕೊಂಡು ಒಂದುಗೂಡಿ ಸುಖಿಸುತ್ತಾರೆ'''' ಎಂದು ಯೋಚಿಸಿದನು.

ಮತ್ತೆ ಕೆಲವು ಕಾಲ ಕಳೆಯಿತು. ಮನುಷ್ಯರು ಹೇಗೆ ಜೀವಿಸು ತಿರುವರೋ ನೋಡಬೇಕೆಂದು ದೇವರು ಮತ್ತೊಂದು ಸಲ ಒಂದನು

ಮನುಷ್ಯರು ಮೊದಲಿಗಿಂತಲೂ ಕೀಳಾಗಿ ಜೀವಿಸುತ್ತಿದ್ದರು. ಒಟ್ಟು ಗೂಡಿ ಕೆಲಸವನ್ನೇನೋ ಮಾಡುತ್ತಿದ್ದರು. (ಹಾಗೆ ಮಾಡದಿರಲು ಸಾಧ್ಯವೇ ಇರಲಿಲ್ಲ.) ಆದರೆ ಎಲ್ಲರೂ ಒಂದಾಗಿ ಸೇರಿರಲಿಲ್ಲ ; ಸಣ್ಣ ಸಣ್ಣ ಗುಂಪುಗಳಾಗಿ ಸೇರಿಕೊಂಡಿದ್ದರು. ಪ್ರತಿಯೊಂದು ಗುಂಪಿನವರೂ ಉಳಿದ ವರಿಗೆಲ್ಲ ಕೆಲಸವಿಲ್ಲದಂತೆ ಮಾಡಲು ಹವಣಿಸುತ್ತಿದ್ದರು. ಒಬ್ಬರಿಗೊಬ್ಬರು ಅಡ್ಡ ಒಂದು ತಮ್ಮ ಕಾಲವನ್ನೂ ಶಕ್ತಿಯನ್ನೂ ಕಡಿದಾಟದಲ್ಲಿ ಕಳೆಯು ತಿದ್ದರು. ಹೀಗಾಗಿ ಅವರೆಲ್ಲರೂ ಸಂಕಟಪಡುತ್ತಿದ್ದರು.

ದೇವರು ಇದರಿಂದಲೂ ಒಳ್ಳೆಯದಾಗಲಿಲ್ಲವೆಂದು ತಿಳಿದು ಮನುಷ್ಯ ರಿಗೆ ಸಾವು ಯಾವಾಗ ಬರುವುದೆಂಬುದು ತಿಳಿಯದಂತೆಯೂ ಯಾವ ಕ್ಷಣದಲ್ಲಿ ಬೇಕಾದರೂ ಅವರು ಮರಣಹೊಂದುವ ಹಾಗಿರುವಂತೆಯೂ ಕಟ್ಟು ಮಾಡಿ, ಈ ಸಂಗತಿಯನ್ನು ಅವರೆಲ್ಲರಿಗೂ ತಿಳಿಯಪಡಿಸಿದನು.

" ಮರಣಕಾಲ ಸರಿಯಾಗಿ ತಿಳಿಯದೆ ಯಾವ ಕ್ಷಣದಲ್ಲಿ ಬೇಕಾ ದರೂ ಸಾಯುವಂತಿರುವ ಕಾರಣ ಈ ಪ್ರಾಣದ ಮೇಲಿನ ಆಸೆಯಿಂದಲಾ ದರೂ ಒಬ್ಬರನ್ನೊಬ್ಬರು ದ್ವೇಷಿಸಿ ಛಲ ಸಾಧಿಸುವುದಿಲ್ಲ. ಯಾವ ನಿಮಿಷ ದಲ್ಲಿ ಸಾಯಬೇಕಾಗುವುದೋ ಎಂಬ ಹೆದರಿಕೆಯಿಂದ ತಮಗೆ ದೊರೆತಿರು ವಷ್ಟು ಕಾಲವನ್ನೂ ಪರಸ್ಪರ ದ್ವೇಷದಲ್ಲಿ ವ್ಯರ್ಥವಾಗಿ ಹಾಳುಮಾಡಿಕೊಳ್ಳು ವುದಿಲ್ಲ" ಎಂದು ದೇವರು ಯೋಚಿಸಿದನು.

ಆದರೆ ನಡೆದದ್ದೇ ಬೇರೆ. ಮನುಷ್ಯರು ಈಗ ಹೇಗೆ ಜೀವಿಸುವರೋ ನೋಡಬೇಕೆಂದು ದೇವರು ಮತ್ತೆ ಬಂದು ನೋಡಿದಾಗ ಅವರ ಜೀವನದ ರೀತಿ ಸ್ವಲ್ಪವೂ ಉತ್ತಮವಾಗಿರಲಿಲ್ಲ.

ಇತರರಿಗಿಂತಲೂ ಶಕ್ತಿವಂತರಾದ ಜನರು ಮನುಷ್ಯರಿಗೆ ಯಾವ ಕ್ಷಣದಲ್ಲಿ ಬೇಕಾದರೂ ಸಾವು ಬರಬಹುದೆಂಬುದರಿಂದ ಧೈರ್ಯಗೊಂಡು ಕೆಲವರನ್ನು ಕೊಂದೂ, ಮತ್ತೆ ಕೆಲವರನ್ನು ಕೊಲ್ಲುವುದಾಗಿ ಹೆದರಿಸಿಯೂ ತಮಗಿಂತ ಶಕ್ತಿಯಲ್ಲಿ ಕಡಮೆಯಾದವರನ್ನೆಲ್ಲ ಗೆದ್ದು ಅಡಿಯಾಳುಗಳಾಗಿ ಮಾಡಿಕೊಂಡರು. ಇದರ ಫಲವಾಗಿ ಅವರ ಜೀವನದ ರೀತಿಯೇ ಬದಲಾ ಯಿಸಿತು. ಕೆಲವರು ಶಕ್ತಿವಂತರೂ, ಅವರ ಸಂತತಿಯವರೂ ಸ್ವಲ್ಪವೂ ಕೆಲಸಮಾಡುತ್ತಿರಲಿಲ್ಲ. ಇವರು ಮೈ ಬಗ್ಗಿಸದೆ ಸೋಮಾರಿತನದಿಂದ ಸಂಕಟಪಡುತ್ತಿದ್ದರು. ಶಕ್ತಿಹೀನರು ಮಿತಿಮೀರಿ ದುಡಿದು ದುಡಿದು ವಿಶ್ರಾಂತಿಯಿಲ್ಲದೆ ಒವಣೆಪಟ್ಟು ನಿರಾಸೆಯಿಂದ ನಲುಗಿ ಹೋಗಿದ್ದರು. ಈ ಎರಡು ಪಂಗಡಗಳೂ ಪರಸ್ಪರ ದ್ವೇಷಸಾಧನೆಯಲ್ಲಿ ತೊಡಗಿ ಯಾವಾ ಗಲೂ ಭಯದಿಂದ ನಡುಗುತ್ತಿದ್ದರು. ಹೀಗೆ ಮನುಷ್ಯರ ಜೀವನವು ಮತ್ತಷ್ಟು ದುಃಖಕರವಾಗಿ ಪರಿಣಮಿಸಿತು.

ಇದನ್ನು ಕಂಡು ದೇವರು ಈ ಅವ್ಯವಸ್ಥೆಯನ್ನು ಸರಿಪಡಿಸುವ ಅಪೇಕ್ಷೆಯಿಂದ ಕಟ್ಟ ಕಡೆಯ ಸಾಧನವನ್ನೇ ಉಪಯೋಗಿಸಿಬಿಡಬೇಕೆಂದು ನಿರ್ಧರಿಸಿದನು. ಹಾಗೆ ನಿರ್ಧರಿಸಿ ಬಗೆ ಬಗೆಯ ರೋಗಗಳನ್ನೆಲ್ಲ ಮನು ಷ್ಯರ ಮೇಲೆ ಬಿಟ್ಟು ಬಿಟ್ಟನು. ಮನುಷ್ಯರೆಲ್ಲರನ್ನೂ ರೋಗಕ್ಕೆ ಒಳಪಡಿಸಿ ದರೆ ಆರೋಗ್ಯವಾಗಿರುವವರು ತಮಗೆ ರೋಗ ಬಂದ ಕಾಲದಲ್ಲಿ ಸುತ್ತ ಮುತ್ತ ಇರುವ ಆರೋಗ್ಯಶಾಲಿಗಳು ತಮಗೆ ಉಪಚರಿಸಿ ಸಹಾಯಮಾಡ ಲೆಂಬ ಉದ್ದೇಶದಿಂದ ತಾವು ಕೂಡ ರೋಗದಲ್ಲಿ ನರಳುವವರಿಗೆ ಮರುಕ ದಿಂದ ಸಹಾಯಮಾಡುತ್ತಾರೆಂದು ಭಗವಂತನು ಭಾವಿಸಿದನು.

ಆಮೇಲೆ ದೇವರು ಮನುಷ್ಯರನ್ನು ಅವರ ಹಾಳತಕ್ಕೆ ಅವರನ್ನು ಬಿಟ್ಟು ಹೊರಟುಹೋದನು. ರೋಗಕ್ಕೆ ವಶಪಡಿಸಿದ ಬಳಿಕ ಅವರ ಬಾಳ್ವೆ ಹೇಗಿದೆಯೋ ನೋಡುವುದಕ್ಕೆಂದು ಮತ್ತೊಂದುಸಲ ಹಿಂದಿರುಗಿ ಬಂದಾಗ ಮನುಷ್ಯ ಜೀವನವು ಇನ್ನೂ ಮಿಗಿಲಾದ ಕೀಳುಗತಿಗೆ ಇಳಿದಿದ್ದಿತು.

ದೇವರು ಯೋಚಿಸಿದಂತೆ ಜನರನ್ನು ಪರಸ್ಪರ ಒಟ್ಟುಗೂಡಿಸಬೇಕಾ ಗಿದ್ದ ಆ ರೋಗಗಳೇ ಅವರನ್ನು ಇನ್ನೂ ಹೆಚ್ಚಾಗಿ ದೂರ ದೂರಮಾಡಿ ವಿಭಾಗಿಸಿದವು. ಇತರರೆಲ್ಲರನ್ನೂ ತಮಗೋಸ್ಕರ ಕೆಲಸಮಾಡುವಂತೆ ನಿರ್ಬಂ ಧಿಸಿದ್ದ ಆ ಶಕ್ತಿವಂತರು ಈಗ ತಾವು ರೋಗದಿಂದ ನರಳುವಾಗಲೂ ಶುಶೂಷೆ ಮಾಡುವಂತೆ ಆ ಬಡವರನ್ನು ಬಲಾತ್ಕರಿಸಿದರು. ತಾವ ಮಾತ್ರ ರೋಗಿಗಳಿಗಾಗಿ ಸ್ವಲ್ಪ ಯೋಚನೆಯನ್ನೂ ಇಟ್ಟುಕೊಳ್ಳುತ್ತಿರಲಿಲ್ಲ. ಆದರೆ ಇತರರಿಗಾಗಿ ದುಡಿಯುತ್ತಲೂ ಇತರ ರೋಗಿಗಳನ್ನು ಉಪಚರಿಸು ತಲೂ ನಿರ್ಬಂಧಕ್ಕೆ ಸಿಕ್ಕಿ ಪೇಚಾಡುತ್ತಿದ್ದವರಿಗೆ ತಮ್ಮ ಮನೆಯ ರೋಗಿಗಳನ್ನು ಉಪಚರಿಸಲು ಅವಕಾಶವೇ ಇಲ್ಲದೆ ಅವರನ್ನು ನಿಸ್ಸಹಾಯ ರಾಗಿ ಕೈಬಿಡುವ ಗತಿ ಬಂದಿದ್ದಿತು.

ಶ್ರೀಮಂತರು ಈ ರೋಗಿಗಳು ಕಣ್ಣಿಗೆ ಬೀಳುವಂತಿದ್ದರೆ ತಮ್ಮ ಸುಖಸಂತೋಷಗಳಿಗೆ ಕುಂದಾಗುವುದೆಂದು ಅವರಿಗೆಲ್ಲ ಬೇರೊಂದು ಮನೆ ಯನ್ನು ಕಲ್ಪಿಸಿದರು. ಅವರು ರೋಗದ ಯಾತನೆಯಿಂದ ನರಳಿ ನರಳಿ ತಮ್ಮಲ್ಲಿ ಮರುಕಗೊಂಡು ವಿಶ್ವಾಸದಿಂದ ನೋಡುವಂಧವರೊಬ್ಬರನ್ನೂ ಕಾಣದೆ, ಕೂಲಿಗಾಗಿ ಉಪಚರಿಸಲು ನಿಂತ ಅಪರಿಚಿತರ ಕೈಕೆಳಗೆ ಪ್ರಾಣ ಬಿಡಬೇಕಾಗಿದ್ದಿತು ಈ ಕೂಲಿಯ ಪರಿಚಾರಕರಿಗೆ ರೋಗಿಗಳಲ್ಲಿ ಮರುಕ ವಿಲ್ಲದ್ದು ಹಾಗಿರಲಿ, ಅವರನ್ನು ಅಸಹ್ಯದಿಂದ ಅಸಡ್ಡೆಯಾಗಿಯೂ ನೋಡು ತಿದ್ದರು. ಇದರ ಜೊತೆಗೆ ರೋಗಗಳಲ್ಲಿ ಮುಕ್ಕಾಲುಪಾಲು ಒಬ್ಬರಿಂದೊಬ್ಬ ರಿಗೆ ಹರಡುವ ಅಂಟು ರೋಗಗಳೆಂದು ತಿಳಿದು ಆ ಸುಂಕು ತಮಗೆಲ್ಲಿ ಅಂಟೀತೋ ಎಂಬ ಹೆದರಿಕೆಯಿಂದ ತಾವು ಅಂಥ ರೋಗಿಗಳ ಹತ್ತಿರಕ್ಕೆ ಸುಳಿಯುವುದನ್ನೂ ಬಿಟ್ಟಿದ್ದಲ್ಲದೆ ತಮ್ಮೊಡನೆ ಸೇರಬಂದವರ ಸಂಪರ್ಕದಿಂ ದಲೂ ತಪ್ಪಿಸಿಕೊಂಡು ದೂರ ಹೋಗಿ ಬೇರೆಯಾಗಿರುತ್ತಿದ್ದರು.

ಆಗ ದೇವರು "ಜನರಿಗೆ ಸುಖವೆಂದರೇನೆಂಬುದನ್ನು ತಿಳಿಸಲು ಇಷ್ಟು ಪ್ರಯತ್ನ ಪಟ್ಟೆ. ಅವರು ತಿಳಿದುಕೊಳ್ಳಲಿಲ್ಲ. ದುಃಖವನ್ನು ಅನುಭವಿಸಿ ಅನುಭವಿಸಿ ಅದರಿಂದಲೇ ಸುಖವೆಲ್ಲಿ ದೊರೆಯುವುದೆಂಬುದನ್ನು ತಾವಾ ಗಿಯೇ ತಿಳಿದುಕೊಳ್ಳಲಿ'''' ಎಂದು ಸುಮ್ಮನಾದನು.

ಆ ಬಳಿಕ ಮನುಷ್ಯರು ಯಾರ ತಂಟೆಯೂ ಇಲ್ಲದೆ ಬಹುಕಾಲ ಬಾಳಿದರು. ಅಷ್ಟು ಕಾಲ ಕಳೆದರೂ ತಾವು ಸುಖವಾಗಿರಬೇಕೆಂದಾಗಲಿ, ಸುಖವಾಗಿ ಬದುಕುವುದು ಸಾಧ್ಯವೆಂದಾಗಲಿ ತಿಳಿದುಕೊಳ್ಳಲೇ ಇಲ್ಲ. ಈಚೀಚೆಗೆ ಎಲ್ಲಿಯೋ ಕೆಲವರು ಮಾತ್ರ ತಿಳಿದುಕೊಳ್ಳುತ್ತಿದಾರೆ. '' ಕೆಲ ವರು ಕೆಲಸಮಾಡುವುದಕ್ಕೆ ಹೆದರಿ ನಡುಗುತ್ತ ಅದನ್ನು ತಪ್ಪಿಸಿಕೊಳ್ಳು ವುದೂ, ಉಳಿದವರು ನಿರ್ಬಂಧದ ಗುಲಾಮಗಿರಿಗೊಳಗಾಗಿ ದುಡಿದು ಹಣ್ಣಾಗುವುದೂ ತಪ್ಪು. ಎಂದಿಗೂ ಹೀಗಿರಬಾರದು. ಕೆಲಸಮಾಡು ವುದು ಸರ್ವಸಾಮಾನ್ಯವಾಗಿ ಆನಂದದಾಯಕವಾಗಿರಬೇಕು; ಜನರೆಲ್ಲ ರನ್ನೂ ಒಟ್ಟುಗೂಡಿಸುವಂತಿರಬೇಕು.'' ಎಂಬ ತತ್ವವನ್ನು ಅವರು ಈಗೀಗ ಅರಿತುಕೊಳ್ಳುತ್ತಿದ್ದಾರೆ.

ಪ್ರತಿಯೊಬ್ಬನನ್ನೂ ಗಳಿಗೆಗಳಿಗೆಗೂ ಮರಣ ಒಂದೀತೆಂಬ ಹೆದರಿ ಕೆಯು ಬಾಧಿಸುತ್ತಿರುವುದರಿಂದ ತಮ್ಮ ಪಾಲಿಗೆ ಒಂದಿರುವ ವರ್ಷ, ತಿಂಗಳು, ದಿನ, ಘಳಿಗೆ, ವಿಘಳಿಗೆಗಳನ್ನೆಲ್ಲ ಸೌಹಾರ್ದದಿಂದಲೂ ಪರಸ್ಪರ ಪ್ರೇಮ ದಿಂದಲೂ ಕಳೆಯಬೇಕೆಂಬುದು ಈಗೀಗ ಅವರಿಗೆ ಹೊಳೆಯುತ್ತಿದೆ. ರೋಗವು ಪರಸ್ಪರ ಅಗಲಿಕೆಗೆ ಕಾರಣವಾಗಬಾರದೆಂದೂ ಅದಕ್ಕೆ ಒದ ಲಾಗಿ ಪರಸ್ಪರ ಪ್ರೇಮದಿಂದ ಐಕ್ಯವನ್ನು ಸಾಧಿಸಲು ಇದು ದಾರಿ ಯಾಗಬೇಕೆಂದೂ ಮಂದಟ್ಟು ಮಾಡಿಕೊಳ್ಳುತ್ತಿದಾರೆ