‘ವಿದ್ಯಾರ್ಥಿಗಳೇ ಸಾಧಿಸಿ, ನಿರ್ಗತಿಕರಿಗೆ ಸ್ಪಂದಿಸಿ’
KannadaprabhaNewsNetwork | Published : Oct 10 2023, 01:02 AM IST
‘ವಿದ್ಯಾರ್ಥಿಗಳೇ ಸಾಧಿಸಿ, ನಿರ್ಗತಿಕರಿಗೆ ಸ್ಪಂದಿಸಿ’
ಸಾರಾಂಶ
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಶಿಸ್ತು, ಶ್ರದ್ಧೆ ಹಾಗೂ ಶ್ರಮವನ್ನು ಮೈಗೂಡಿಸಿಕೊಳ್ಳುವ ಮನೋಭಾವವನ್ನು ಬೆಳಸಿಕೊಂಡಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ತುಮಕೂರು ಹಿರೇಮಠದ ಪೀಠಾಧಿಪತಿ ಡಾ.ಶಿವಾನಂದ ಶಿವಾಚಾರ್ಯಸ್ವಾಮೀಜಿ ತಿಳಿಸಿದರು.
ಭೀಮ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮ । ಹಿರೇಮಠದ ಡಾ. ಶಿವಾನಂದಶ್ರೀ ಕರೆ ಕನ್ನಡಪ್ರಭ ವಾರ್ತೆ ಕೊರಟಗೆರೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಶಿಸ್ತು, ಶ್ರದ್ಧೆ ಹಾಗೂ ಶ್ರಮವನ್ನು ಮೈಗೂಡಿಸಿಕೊಳ್ಳುವ ಮನೋಭಾವವನ್ನು ಬೆಳಸಿಕೊಂಡಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ತುಮಕೂರು ಹಿರೇಮಠದ ಪೀಠಾಧಿಪತಿ ಡಾ.ಶಿವಾನಂದ ಶಿವಾಚಾರ್ಯಸ್ವಾಮೀಜಿ ತಿಳಿಸಿದರು. ಕೊರಟಗೆರೆ ಭೀಮ್ ಗ್ರಾಮೀಣಾಭಿದ್ಧಿ ಸಂಸ್ಥೆ ಏರ್ಪಡಿಸಿದ್ದ, ರಾಷ್ಟ್ರಪ್ರಶಸ್ತಿ ವಿಜೇತರಾದ ಕೊರಟಗೆರೆ ತಾಲೂಕಿನ ಧಾರವಾಡ ಐಐಟಿ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಮಹದೇವ ಪ್ರಸನ್ನ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳು ವಿದ್ಯೆ ಕಲಿತು ಅತ್ಯುನ್ನತ ಸಾಧನೆಗೈದು ನಿರ್ಗತಿಕರಿಗಾಗಿ ಸ್ಪಂದಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಕೊರಟಗೆರೆ ತಾಲೂಕಿನ ಸೋಂಪುರ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡಿ ರಾಷ್ಟ್ರಪ್ರಶಸ್ತಿ ಪಡೆದ ಡಾ. ಮಹದೇವ ಪ್ರಸನ್ನ ಅವರು ನಿಮ್ಮೆಲ್ಲರಿಗೂ ಸ್ಫೂ ರ್ತಿಯಾಗಲಿ ಎಂದ ಶ್ರೀಗಳು, ಡಾ. ಮಹದೇವ ಪ್ರಸನ್ನ ಜಿಲ್ಲೆಗೆ ಕೀರ್ತಿಯ ಕಳಶವಾಗಿದ್ದಾರೆ ಎಂದು ತಿಳಿಸಿದರು. ತಾಲೂಕಿನಲ್ಲಿ ಭೀಮ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ನೀಡುತಿರುವ ಉಚಿತ ಕಂಪ್ಯೂಟರ್ ಶಿಕ್ಷಣ ಮತ್ತು ಹೊಲಿಗೆಯಂತಹ ಕೌಶಲ್ಯಾಧಾರಿತ ತರಬೇತಿಯನ್ನು ಮಹಿಳೆಯರು ಪಡೆದುಕೊಂಡು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಜೀವನ ನಡೆಸಬೇಕೆಂದು ಕರೆ ನೀಡಿದರು. ಭೀಮ್ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್ ಕಾರ್ಯವನ್ನು ಶ್ಲಾಘಿಸಿದರು. .ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಷ್ಟ್ರಪ್ರಶಸ್ತಿ ವಿಜೇತ ಹಾಗೂ ಧಾರವಾಡ ಐಐಟಿ ಸಂಸ್ಥೆಯ ಪ್ರಾಧ್ಯಾಪಕ ಡಾ. ಮಹದೇವಪ್ರಸನ್ನ, ವಿದ್ಯಾರ್ಥಿಗಳಿಗೆ ಮಾತೃ ಭಾಷೆಯಲ್ಲಿ ವಿದ್ಯಾಭ್ಯಾಸವಾದಾಗ ಮಾತ್ರ ಅವರಿಗೆ ಸಂಪೂರ್ಣ ಜ್ಞಾನದ ಅರಿವಾಗುತ್ತದೆ. ಮಾತೃ ಭಾಷೆಯೊಂದಿಗೆ ಹಿಂದಿ, ಇಂಗ್ಲೀಷ್ ಭಾಷೆಗಳನ್ನು ಉನ್ನತ ಶಿಕ್ಷಣಕ್ಕಾಗಿ ಅಭ್ಯಾಸ ಮಾಡಬೇಕು ಎಂದರು. ಇಂದಿನ ಅಧುನಿಕ ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಜ್ಞಾನವು ಅತ್ಯವಶ್ಯಕವಾಗಿದೆ. ಭೀಮ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಪ್ರಾರಂಭಿಸಿರುವ ವಿವಿಧ ಕೌಶಲ್ಯಾಧಾರಿತ ತರಬೇತಿ ಸೌಲಭ್ಯವನ್ನು ಯುವಜನತೆ ಸದುಪಯೋಗ ಪಡೆಯಬೇಕು ಎಂದರು. ಬೀಮ್ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್ ಅವರಿಗೆ ಅಭಿನಂದಿಸಿದರು. ತಂಗನಹಳ್ಳಿ ಸುಕ್ಷೇತ್ರ ಶ್ರೀಕಾಶಿ ಅನ್ನಪೂರ್ಣೇಶ್ವರಿ ಸಂಸ್ಥಾನ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯಾಧಾರಿತ ವಿದ್ಯೆ ಕಲಿತು ಸ್ವಯಂ ಉದ್ಯೋಗ ಪ್ರಾರಂಭಿಸಿ ನೂರಾರು ಮಂದಿಗೆ ಉದ್ಯೋಗ ನೀಡುವಂತ ವ್ಯಕ್ತಿಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಅಕ್ಕಿರಾಂಪುರ ಶಾಲೆಯ ಅಭಿವೃದ್ದಿಗೆ ಸೇವೆಸಲ್ಲಿಸಿ ನಿವೃತ್ತ ಮುಖ್ಯೋಪಾಧ್ಯಯ ಸಿದ್ದಲಿಂಗ ಆರಾಧ್ಯ ಮತ್ತು ಹಿರಿಯ ನಿವೃತ್ತ ಶಿಕ್ಷಕರಾದ ಕೆ.ಜಿ.ಓಂಕಾರಮೂರ್ತಿ ವೇದಿಕೆಯಲ್ಲಿ ಸನ್ಮಾನಿಸಿದರು. ಭೀಮ್ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಈರಣ್ಣ, ನಿವೃತ್ತ ಶಿಕ್ಷಕ ಕೆ.ಎಲ್.ನಾರಾಯಣ್, ಚಂದ್ರಯಶ್ರೇಷ್ಠಿ, ಶಿಕ್ಷಕರಾದ ಫಾತಿಮಾ ಸುಲ್ತಾನ್, ಶಿವಸ್ವಾಮಿ, ಶ್ರೀರಾಮಯ್ಯ, ಅಪ್ಪಾಜಿಗೌಡ, ಶ್ರೀದೇವಿ, ನಾಗಮಣಿ, ಫರ್ ಉನ್ನಿಸಾ, ಚೈತ್ರ ಸೇರಿದಂತೆ ತರಬೇತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. (ಚಿತ್ರ ಇದೆ) ಕೊರಟಗೆರೆ ರಾಷ್ಟ್ರಪ್ರಶಸ್ತಿ ಪಡೆದ ಡಾ. ಮಹದೇವ ಪ್ರಸನ್ನ ಅವರವನ್ನು ಸನ್ಮಾನಿಸಿದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬಸವಲಿಂಗಸ್ವಾಮೀಜಿ, ರವಿಕುಮಾರ್ ಸೇರಿದಂತೆ ಇದ್ದರು.