ಸಾರಾಂಶ
ಹೆಚ್ಚಿನ ಪ್ರಯಾಣ ಮಾಡಿದ್ದರಿಂದ ಹೆರಿಗೆಗೆ ಅಡ್ಡಿಯಾಗುವಂತ ‘ಸೆಂಟ್ರಲ್ ಪ್ಲಾಸೆಂಟಾ ಪ್ರಿವಿಯಾ’ ಗರ್ಭಾಶಯ ಸಮಸ್ಯೆ ತಂದುಕೊಂಡು ತೀವ್ರ ನೋವು ಅನುಭವಿಸುತ್ತಿದ್ದ ಗರ್ಭಿಣಿಗೆ ನಗರದ ವಾಸವಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ತಾಯಿ, ಮಗುವಿನ ಜೀವ ಉಳಿಸಿದ್ದಾರೆ.
ಬೆಂಗಳೂರು : ಹೆಚ್ಚಿನ ಪ್ರಯಾಣ ಮಾಡಿದ್ದರಿಂದ ಹೆರಿಗೆಗೆ ಅಡ್ಡಿಯಾಗುವಂತ ‘ಸೆಂಟ್ರಲ್ ಪ್ಲಾಸೆಂಟಾ ಪ್ರಿವಿಯಾ’ ಗರ್ಭಾಶಯ ಸಮಸ್ಯೆ ತಂದುಕೊಂಡು ತೀವ್ರ ನೋವು ಅನುಭವಿಸುತ್ತಿದ್ದ ಗರ್ಭಿಣಿಗೆ ನಗರದ ವಾಸವಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ತಾಯಿ, ಮಗುವಿನ ಜೀವ ಉಳಿಸಿದ್ದಾರೆ.
28 ವಾರ ಪೂರೈಸಿದ ಹಾಗೂ ಈಗಾಗಲೇ ಎರಡು ಬಾರಿ ಸಿಸೇರಿಯನ್‌ಗೆ ಒಳಗಾದ ಮಹಿಳೆಯೊಬ್ಬರು ಕಲಬುರಗಿಯಿಂದ ಬೆಂಗಳೂರಿಗೆ ಸುಮಾರು 600 ಕಿ.ಮೀ. ಪ್ರಯಾಣ ಮಾಡಿದ್ದರು. ವಾಸವಿ ವೈದ್ಯರು ರಕ್ತದ ವ್ಯವಸ್ಥೆ ಮಾಡಿ ತುರ್ತು ಶಸ್ತ್ರಚಿಕಿತ್ಸೆ ಕೈಗೊಂಡಿದ್ದೆವು.
ಈ ಹಂತದಲ್ಲಿ ಐದು ನಿಮಿಷ ತಡವಾದರೂ ಕೂಡ ತಾಯಿ ಮಗುವಿನ ಜೀವಕ್ಕೆ ಅಪಾಯವಿತ್ತು. 1.25 ಕೇಜಿ ತೂಕವಿದ್ದ ಮಗುವಿಗೆ ಮಹಿಳೆ ಜನ್ಮ ನೀಡಿದರು. ಆರಂಭದಲ್ಲಿ ಮಗುವಿಗೆ ಅಗತ್ಯ ವೈದ್ಯಕೀಯ ನೆರವು ನೀಡಲಾಯಿತು. ತಾಯಿ ಮತ್ತು ಮಗು ಇಬ್ಬರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದ ಹಿನ್ನೆಲೆ ಮೂರು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆಸ್ಪತ್ರೆಯ ಡಾ। ನಿಶಾ ತಿಳಿಸಿದರು.