ಭಾರತದ ಮುಂಚೂಣಿ ಕಾರು ಮತ್ತು ಎಸ್‌ಯುವಿಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ., (ಟಿಎಂಪಿವಿ) ಹೆಚ್ಚು ವೇಗ, ಹೆಚ್ಚು ಸ್ಮಾರ್ಟ್ ಹೊಂದಿರುವ ಹೊಸ ಟಾಟಾ ‘ಪಂಚ್‌ ಕಮಾಂಡ್ ಮ್ಯಾಕ್ಸ್’ ಎಂಬ ಹೆಸರಿನ ಕಾರು ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ದಾವೂದ್‌ಸಾಬ್‌ ನದಾಫ್‌

ಕನ್ನಡಪ್ರಭ ವಾರ್ತೆ ಮುಂಬೈ

ಭಾರತದ ಮುಂಚೂಣಿ ಕಾರು ಮತ್ತು ಎಸ್‌ಯುವಿಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ., (ಟಿಎಂಪಿವಿ) ಹೆಚ್ಚು ವೇಗ, ಹೆಚ್ಚು ಸ್ಮಾರ್ಟ್ ಹೊಂದಿರುವ ಹೊಸ ಟಾಟಾ ‘ಪಂಚ್‌ ಕಮಾಂಡ್ ಮ್ಯಾಕ್ಸ್’ ಎಂಬ ಹೆಸರಿನ ಕಾರು ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಮುಂಬೈನ ಬಿಕೆಸಿ, ಲೋಟಸ್ ಬಾಲ್ ರೂಂ, ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಬುಧವಾರ ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ.,ನ ಎಂಡಿ ಮತ್ತು ಸಿಇಒ ಶೈಲೇಶ್ ಚಂದ್ರ, ನೀಲಿ, ಹಳದಿ, ಬಿಳಿ, ಕೆಂಪು ಬಣ್ಣ ಹೊಂದಿರುವ ನಾಲ್ಕು ಕಾರುಗಳನ್ನು ಬಿಡುಗಡೆ ಮಾಡಿ, ಅಕ್ಟೋಬರ್ 2021ದಲ್ಲಿ ಪ್ರಾರಂಭಿಸಿದ ತನ್ನ ಸಬ್‌ ಕಾಂಪ್ಯಾಕ್ಟ್ ಎಸ್‌ಯುವಿ ವರ್ಗದಲ್ಲಿ ಅಗ್ರಮಾನ್ಯವಾದೆ. ಈಗಾಗಲೇ 700,000 ಗ್ರಾಹಕರ ನಂಬಿಕೆ ಪಡೆದುಕೊಂಡಿರುವ ಹೊಸ ಟಾಟಾ ಪಂಚ್ ಎರಡು ಅತ್ಯಾಧುನಿಕ ಪವರ್ ಟ್ರೇನ್ ಆಯ್ಕೆ ಪರಿಚಯಿಸುವ ಮೂಲಕ ಉದ್ದಿಮೆ ಮಾನದಂಡಗಳಲ್ಲಿ ತನ್ನ ಪರಂಪರೆ ಮುಂದಕ್ಕೆ ಕೊಂಡೊಯ್ಯುತ್ತಿದೆ ಎಂದರು.

ಹೊಸ ಟಾಟಾ ಪಂಚ್ ‘ಕಮಾಂಡ್ ಮ್ಯಾಕ್ಸ್’, ಸರಿಸಾಟಿಯಿಲ್ಲದ ಶಕ್ತಿ, ಅತ್ಯುತ್ಕೃಷ್ಟ ಆರಾಮ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಮತ್ತು ತನ್ನ ವಿಶಿಷ್ಟವಾದ ಸಿಗ್ನೇಚರ್ ಅಡಿ ಸ್ಟೈಲಿಂಗ್ ಆಗಿ ಸಂಯೋಜಿಸಿದ್ದು, ಇದು ಕೇವಲ ₹5.59 ಲಕ್ಷದ (ದೆಹಲಿ ಶೋರೂಮ್ ಆಚೆ) ಪರಿಚಯ ಬೆಲೆಯಲ್ಲಿ ಲಭ್ಯವಿದೆ ಎಂದರು.

ಕಮಾಂಡ್ ಮ್ಯಾಕ್ಸ್ ಕಾರಿನ ವಿಶೇಷತೆ:

ಈ ಕಾರು ಶಕ್ತಿಶಾಲಿಯಾದ 1.2ಎಲ್‌ ಟರ್ಬೋ ಚಾರ್ಜ್ಡ್, ಐ ಟರ್ಬೊ ರೆವೊಟ್ರಾನ್ ಇಂಜಿನ್‌ ಹೊಂದಿದೆ. ಪವರ್-ಟು-ವೇಯ್ಟ್ ರೇಶಿಯೋ (ಪಿಡಬ್ಲೂಆರ್‌) ಒದಗಿಸುತ್ತದೆ. ಎಎಂಟಿ ಗೇರ್ ಬಾಕ್ಸ್ ಜೊತೆಗೂಡಿದ ಟ್ವಿನ್-ಸಿಲಿಂಡರ್ (ಐಸಿಎನ್‌ಜಿ) ತಂತ್ರಜ್ಞಾನದ ಯೋಜನೆ ಅಳಡಿಸಲಾಗಿದೆ.

ಹೊಸ ಪಂಚ್, ಸಬ್‍ ಕಾಂಪ್ಯಾಕ್ಟ್- ಎಸ್‌ಯುವಿ ವಿಭಾಗದಲ್ಲಿ ಶಕ್ತಿ, ನಾಜೂಕು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಅಡಚಣೆರಹಿತ ಸಂಯೋಜನೆಯೊಂದಿಗೆ ತನ್ನ ಪ್ರಾಬಲ್ಯ ಸ್ಥಾಪಿಸಿದೆ. ರಗ್ಡ್ 3ಡಿ ಮುಂಭಾಗದ ಗ್ರಿಲ್, ಬುಲ್ ಗಾರ್ಡ್ ಬಂಪರ್, ಪವರ್ ಸೈಟ್ ಎಲ್ಇಡಿ, ಹೆಡ್‌ಲ್ಯಾಂಪ್ಸ್ ಹಾಗೂ ಇನ್ಫಿನಿಟಿ ಗ್ಲೋ ಲ್ಇಡಿ ಕನೆಕ್ಟೆಡ್ ಟೇಲ್ ಲ್ಯಾಂಪ್ಸ್ ಹೊಂದಿದೆ. ವಿಂಡ್‌ ಸ್ಕ್ರೀನ್‌ಗೆ ಅಂಟಿಕೊಂಡಿರುವ ದೊಡ್ಡ ರೆಕ್ಕೆ, ಆಕರ್ಷಕ ಅಲಾಯ್ ಚಕ್ರಗಳು ಪ್ರತಿಯೊಂದು ಕೋನದಿಂದಲೂ ಅದರ ಭವ್ಯವಾದ ಅಸ್ತಿತ್ವವನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಒಳಭಾಗದಲ್ಲಿ ವಿಶಾಲ ಕ್ಯಾಬಿನ್, ಬಲಿಷ್ಟ ಡ್ಯಾಶ್‌ಬೋರ್ಡ್, ಪ್ರೀಮಿಯಂ ಇನ್ಫೋಟೈನ್‌ಮೆಂಟ್ ಮತ್ತು ಆಂಬಿಯಂಟ್ ಬೆಳಕಿನ ವ್ಯವಸ್ಥೆಯೊಂದಿದೆ. ದೀರ್ಘ ಪ್ರಯಾಣಕ್ಕೆ, ವಿಶ್ರಾಂತಿ ಪಡೆಯಲು ಅನುಕೂಲಕರವಾದ ಸೀಟುಗಳು ಇದ್ದು, 65-ವಾಟ್ ಮುಂಭಾಗ ಟೈಪ್-ಸಿ ಯುಎಸ್‌ಬಿ ಚಾರ್ಜಿಂಗ್ ಸೌಲಭ್ಯ ಇದೆ.

ಮಳೆಯಿಂದ ರಕ್ಷಣೆಗೆ ವೈಪರ್ಸ್, ಅಲ್ಟ್ರಾ ವ್ಯೂ 26.03 ಸೆಂ.ಮೀ ಎಚ್‌.ಡಿ. ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅತ್ಯುತ್ತಮ ರೆಸಲ್ಯೂಶನ್, ಸ್ಪಷ್ಟತೆ ಮತ್ತು ಬಳಕೆದಾರ ಸ್ನೇಹಿ ಇಂಟರ್‌ ಫೇಸ್‌ನೊಂದಿಗೆ ಪ್ರತಿಯೊಂದು ಸಂವಹನ ಸರಳಗೊಳಿಸುತ್ತದೆ.

ಸ್ವಯಂ ಚಾಲಿತವಾಗಿರುವ ಒಳ, ಹಿಂಬದಿಯ ಕನ್ನಡಿಗಳು, ಕಾರಿನ ಸುತ್ತ ಕ್ಯಾಮೆರಾ, ತಾಪಮಾನ ನಿಯಂತ್ರಣ, ಸಂಯೋಜಿತ ಏರ್ ಪ್ಯೂರಿಫೈಯರ್, ಸ್ಮಾರ್ಟ್ ಡಿಜಿಟಲ್ ಸ್ಟೀರಿಂಗ್, ಪವರ್‌ ಸ್ಟೇರಿಂಗ್‌, ಎಲ್ಇಡಿ ಹೆಡ್‌ಲ್ಯಾಂಪ್ಸ್, ನಾಲ್ಕು ಸ್ಪೀಕರ್‌ಗಳ ಸೆಟ್, ನಾಲ್ಕು ವೂಫರ್‌ಗಳನ್ನು ಹೊಂದಿದ್ದು, ಪ್ರೀಮಿಯಂ ಆಡಿಯೋ ಸಿಸ್ಟಮ್ ಇದೆ.

360° ರಕ್ಷಣಾ ಕವಚ:

ಆಲ್ಫಾ-ಆರ್ಕ್ ಆರ್ಕಿಟೆಕ್ಚರ್ ಮೇಲೆ ನಿರ್ಮಿಸಲ್ಪಟ್ಟಿದೆ. ಇದು ಸಂಪ್ರದಾಯಿಕ ಸುರಕ್ಷತಾ ಮಾನದಂಡ ಮೀರಿಸುವಂತೆ ಎಂಜಿನಿಯರ್ ಮಾಡಲಾದ 360° ರಕ್ಷಣಾ ಕವಚ. 95+ಕ್ಕೂ ಹೆಚ್ಚು ಆಕ್ಟಿವ್ ಮತ್ತು ಪ್ಯಾಸಿವ್ ಸುರಕ್ಷತಾ ವೈಶಿಷ್ಟ್ಯ ಹೊಂದಿದೆ. ಪೆಲ್ವಿಸ್-ಥೋರಾಕ್ಸ್ ಸೈಡ್ ಏರ್‌ಬ್ಯಾಗ್‌ ಒಳಗೊಂಡಂತೆ ಆರು ಏರ್‌ಬ್ಯಾಗ್‌ಗಳು ಸ್ಟ್ಯಾಂಡರ್ಡ್ ಆಗಿ ಲಭ್ಯವಿದೆ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಮ್ (ಇಎಸ್‌ಪಿ) ನಿಯಂತ್ರಣ ಮಾಡುತ್ತದೆ. ಎಲ್ಲಾ ಆಸನಗಳಿಗೂ ರಿಮೈಂಡರ್‌ಗಳೊಂದಿಗೆ 3-ಪಾಯಿಂಟ್ ಇಎಲ್‌ಆರ್‌ ಸೀಟ್‌ಬೆಲ್ಟ್‌ಗಳನ್ನು ನೀಡಿದೆ. ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಹಿಲ್ ಡೆಸೆಂಟ್ ಕಂಟ್ರೋಲ್ ಜೊತೆಗೆ ಹಿಂಭಾಗದ ಡಿಫಾಗರ್, ಹಿಂಬದಿಯ ವೈಪರ್ ಮತ್ತು ವಾಶ್‌ಗಳ ಅನುಕೂಲತೆ ಇದೆ.

ಮುಖ್ಯಾಂಶ

- ಶಕ್ತಿಶಾಲಿ ಐ ಟರ್ಬೊ ಇಂಜಿನ್‌

- ಎಎಂಟಿ ಇರುವ ಟ್ವಿನ್-ಸಿಲಿಂಡರ್, ಐ ಸಿಎನ್‌ಜಿಟಿ ತಂತ್ರಜ್ಞಾನ

- ಕೇವಲ ₹ 5.59 ಲಕ್ಷದಿಂದ ಆರಂಭ

- ನಾಲ್ಕು ಬಣ್ಣದಲ್ಲಿ ಕಾರು ಲಭ್ಯ