ಸಾರಾಂಶ
ಬೆಂಗಳೂರು : ಬೆಂಗಳೂರಿನಲ್ಲಿರುವ ಕಾಮಿಕ್, ಮಂಗಾ, ಅನಿಮೆ ಮತ್ತು ಸೂಪರ್ ಹೀರೋ ಸಿನಿಮಾ ಅಭಿಮಾನಿಗಳಿಗಾಗಿಯೇ ಜ.18 ಮತ್ತು 19 ರಂದು ಎರಡು ದಿನಗಳ ಕಾಲ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಕೆಟಿಪಿಓ ಸಭಾಂಗಣದಲ್ಲಿ 12ನೇ ವರ್ಷದ ಕಾಮಿಕ್ ಕಾನ್ ಇಂಡಿಯಾ ಆಯೋಜನೆಗೊಂಡಿದೆ.
ಆಸಕ್ತ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.ಈ ವರ್ಷ ಬೆಂಗಳೂರು ಕಾಮಿಕ್ ಕಾನ್ ನಲ್ಲಿ ಭಾಗವಹಿಸುವವರು ಪ್ರವೇಶಿಸುವ ಸಂದರ್ಭದಲ್ಲಿಯೇ ಇಮೇಜ್ ಕಾಮಿಕ್ಸ್ ನ ರೇಡಿಯಂಟ್ ಬ್ಲ್ಯಾಕ್ ನ ನಂ. 1 ಸಂಚಿಕೆಯನ್ನು ಮತ್ತು ಯೆನ್ ಪ್ರೆಸ್ ನ ವಿಶೇಷ ಸೋಲೋ ಲೆವೆಲಿಂಗ್ ಪೋಸ್ಟರ್ ಅನ್ನು ಪಡೆಯಲಿದ್ದಾರೆ.
ಕಾಮಿಕ್ ಕಾನ್ ಇಂಡಿಯಾ ಬ್ಯಾಗ್ ಅನ್ನು ಹೊಂದಬಹುದು ಅನ್ನುವುದು ವಿಶೇಷ. ಅಭಿಮಾನಿಗಳ ಸಲುವಾಗಿಯೇ ಕಾಮಿಕ್ ಕಾನ್ ಇಂಡಿಯಾ ಸೀಮಿತ ಆವೃತ್ತಿಯ ಬಾಕ್ಸ್ ಸೆಟ್ ಅನ್ನು ಸಿದ್ಧಪಡಿಸಿದ್ದು, ಇದರಲ್ಲಿ ಮಾರ್ವೆಲ್‌ನ ಡಾ ಡೂಮ್ ಬಸ್ಟ್ ಗಳು, ಡೆಡ್ ಪೂಲ್-ವೊಲ್ವೆರಿನ್ ಟಿ-ಶರ್ಟ್‌ಗಳು ಮತ್ತು ಕೀಚೈನ್ ಗಳು, ಕಾಮಿಕ್ ಕಾನ್ ಇಂಡಿಯಾ ಪಜಲ್ಸ್ ಇತ್ಯಾದಿ ಆಸಕ್ತಿಕರ ವಸ್ತುಗಳು ದೊರೆಯಲಿವೆ.
ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ಪ್ರಕಾಶನ ಸಂಸ್ಥೆಗಳು, ಸೆಲೆಬ್ರಿಟಿಗಳು, ಕಲಾವಿದರು, ಸ್ಟಾಂಡಪ್ ಕಲಾವಿದರು ಭಾಗವಹಿಸಲಿದ್ದಾರೆ. ಅದರಲ್ಲೂ ವಿಶೇಷವಾಗಿ ಬ್ಯಾಟ್‌ಮ್ಯಾನ್/ಏಲಿಯೆನ್ಸ್, ಡಿಸಿ ವರ್ಸಸ್ ಮಾರ್ವೆಲ್, ಗ್ರೀನ್ ಲ್ಯಾಂಟರ್ನ್, ಸಿಲ್ವರ್ ಸರ್ಫರ್ ಮತ್ತು ವಿಚ್‌ಬ್ಲೇಡ್ ನಂತಹ ಕೃತಿಗಳ ಕೃರ್ತ ಹೆಸರಾಂತ ಅಮೇರಿಕನ್ ಕಾಮಿಕ್ ಪುಸ್ತಕ ಬರಹಗಾರ ರಾನ್ ಮಾರ್ಜ್ ಅವರು ಬರಲಿದ್ದಾರೆ.
ಸೂಪರ್‌ಗರ್ಲ್, ಫೈರ್‌ಸ್ಟಾರ್ಮ್, ಮೊಲ್ಲಿ ಡೇಂಜರ್ ಮತ್ತು ದಿ ರಾಂಗ್ ಅರ್ಥ್ ಕೃತಿಗಳನ್ನು ಕೊಟ್ಟ ನ್ಯೂಯಾರ್ಕ್ ಟೈಮ್ಸ್ ನ ಬೆಸ್ಟ್ ಸೆಲ್ಲರ್ ಬರಹಗಾರ ಜಮಾಲ್ ಇಗ್ಲೆ ಕೂಡ ಇರುತ್ತಾರೆ.ಆಸಕ್ತರು ಈ ಕುರಿತ ಹೆಚ್ಚಿನ ಮಾಹಿತಿಗೆ ಕಾಮಿಕ್ ಕಾನ್ ಇಂಡಿಯಾದ ವೆಬ್ ಸೈಟ್ ನೋಡಬಹುದು.