ಸಾರಾಂಶ
ಕನ್ನಡಪ್ರಭವಾರ್ತೆ
ಮೊದಲು ಪರಿಸರ ಕಲುಷಿತವಾಯಿತು. ಆಮೇಲೆ ನೀರು ಕಲುಷಿತವಾಯಿತು. ಅದಕ್ಕೆ ಅಂತಲೇ ವಾಟರ್ ಪ್ಯೂರಿಫೈಯರ್ ಗಳು ಬಂದುವು. ಇದೀಗ ಗಾಳಿ ಕಲುಷಿತವಾಗಿದೆ ಎಂಬ ಸುದ್ದಿ ಎಲ್ಲಾ ಕಡೆ ಬರುತ್ತಿರುವುದನ್ನು ನೀವು ಓದಿರಬಹುದು. ಅಲ್ಲದೇ ನಗರಗಳಲ್ಲಿ ಟ್ರಾಫಿಕ್ ಹೆಚ್ಚಳ, ನಗರೀಕರಣ ಇತ್ಯಾದಿಗಳ ಕಾರಣದಿಂದ ವಾತಾವರಣದಲ್ಲಿ ಧೂಳು ಆವರಿಸುತ್ತಿರುತ್ತದೆ. ಹಾಗಾಗಿಯೇ ಇದೀಗ ಏರ್ ಪ್ಯೂರಿಫೈಯರ್ ಗಳು ಬಿಡುಗಡೆಯಾಗುತ್ತಿದೆ.ಈ ಏರ್ ಪ್ಯೂರಿಫೈಯರ್ ಗಳ ಸಾಲಿನಲ್ಲಿ ಇದೀಗ ಆಕರ್ಷಕವಾಗಿ ಕಾಣಿಸುತ್ತಿರುವುದು ಕ್ಯೂನೆಟ್ ಕಂಪನಿಯ ಹೋಮ್‌ಪ್ಯೂರ್ ಜೇನ್ ಏರ್ ಪ್ಯೂರಿಫೈಯರ್.ವಿಶೇಷ ಎಂದರೆ ಹೋಮ್‌ಪ್ಯೂರ್ ಜೇನ್ ಏರ್ ಪ್ಯೂರಿಫೈಯರ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ವಿನ್ಯಾಸಗೊಳಿಸಲ್ಪಟ್ಟು, ದಕ್ಷಿಣ ಕೊರಿಯಾದಲ್ಲಿ ತಯಾರಾದ ಉತ್ಪನ್ನವಾಗಿದೆ. ಅಲ್ಲದೇ ಇದು ಯೂರೋಪಿಯನ್ ಸೆಂಟರ್ ಫಾರ್ ಅಲರ್ಜಿ ರಿಸರ್ಚ್ ಫೌಂಡೇಷನ್ ಪ್ರಮಾಣೀಕರಣವನ್ನು ಹೊಂದಿದೆ.ಶುದ್ಧ ಗಾಳಿ ಇದ್ದರೆ ಹಸಿರು ಬೆಳಕು
ಇದೊಂದು ಪುಟ್ಟ ಉಪಕರಣ. ಅದರ ಬಾಕ್ಸ್ ನಲ್ಲಿ ಏರ್ ಪ್ಯೂರಿಪೈಯರ್, ಅದಪ ಸ್ಟಾಂಡ್ ಮತ್ತು ಪವರ್ ಕೇಬಲ್ ಇರುತ್ತದೆ. ಜೊತೆಗೊಂದು ಡೆಬಿಟ್ ಕಾರ್ಡ್ ರೂಪದ ಒಂದು ಕಾರ್ಡ್ ಇರುತ್ತದೆ. ನೀವು ಏರ್ ಪ್ಯೂರಿಫೈಯರ್ ಅನ್ನು ಹೊರತೆಗೆದು ಅದನ್ನು ಮಧ್ಯದಲ್ಲಿ ಬೇರ್ಪಡಿಸಬೇಕು. ಆಗ ನಿಮಗೊಂದು ಕಾರ್ಡ್ ಕೂರಿಸುವ ಜಾಗ ಕಾಣಿಸುತ್ತದೆ. ಅಲ್ಲಿ ಕಾರ್ಡ್ ಕೂರಿಸಿದರೆ ಈ ಏರ್ ಪ್ಯೂರಿಫೈಯರ್ ಕಾರ್ಯ ನಿರ್ವಹಿಸುತ್ತದೆ. ಅದಕ್ಕೂ ಮೊದಲು ನೀವು ಪವರ್ ಪಾಯಿಂಟ್ ಗೆ ಕನೆಕ್ಟ್ ಮಾಡಬೇಕು.ಏರ್ ಪ್ಯೂರಿಫೈಯರ್ ನ ಮೇಲ್ಭಾಗದಲ್ಲಿ ಆನ್ ಆಫ್ ಬಟನ್ ಇದೆ. ಜೊತೆಗೆ ಐಯನ್ ಬಟನ್, ಯುವಿ ಬಟನ್, ಫ್ಯಾನ್ ಸ್ಪೀಡ್, ನೈಟ್ ಮೋಡ್ ಮತ್ತು ಚೈಲ್ಡ್ ಲಾಕ್ ಇತ್ಯಾದಿ ಬಟನ್ ಗಳು ಲಭ್ಯವಿದೆ. ಮೆತ್ತಗೆ ಒತ್ತಿದರೆ ಸಾಕು. ನೀವು ಅಟೋ ಆಯ್ಕೆ ಒತ್ತಿದ್ದರೆ ಫ್ಯಾನ್ ಅಡ್ಜಸ್ಟ್ ಮಾಡುವುದು ಬೇಕಾಗಿಲ್ಲ. ಒಮ್ಮೆ ನೀವು ಇದನ್ನು ಆನ್ ಮಾಡಿದರೆ ಇದು ಗಾಳಿಯನ್ನು ಒಳಗೆಳೆದುಕೊಂಡು ಗಾಳಿ ಶುದ್ಧವಾಗಿದೆಯೇ, ಕಲುಷಿತವಾಗಿದೆಯೇ ಎಂಬುದನ್ನು ನೋಡಿಕೊಂಡು ಶುದ್ಧವಾಗಿದ್ದರೆ ಹಸಿರು ಬಣ್ಣ ತೋರಿಸುತ್ತದೆ, ಕಲುಷಿತವಾಗಿದ್ದರೆ ಕೆಂಪು ಬಣ್ಣ ತೋರಿಸುತ್ತದೆ. ಗಾಳಿ ಶುದ್ಧವಾದ ಕೂಡಲೇ ಮತ್ತೆ ಹಸಿರು ಬಣ್ಣಕ್ಕೆ ತಿರುಗುತ್ತದೆ.
ಏರ್ ಪ್ಯೂರಿಫೈಯರ್ ಕಾರ್ಯನಿರ್ವಹಿಸುವಾಗ ಸಣ್ಣಗೆ ಸದ್ದು ಬರುತ್ತಿರುತ್ತದೆ. ಹಾಗಾಗಿ ರಾತ್ರಿ ಹೊತ್ತು ನೀವು ಬಳಸುತ್ತಿದ್ದರೆ ನೈಟ್ ಮೋಡ್ ಆನ್ ಮಾಡಿದರೆ ಸದ್ದು ಕಾಡುವುದಿಲ್ಲ. ಇದನ್ನು ಕೆಳಗೆ ಇಡಬೇಕಾದ್ದರಿಂದ ಚೈಲ್ಡ್ ಲಾಕ್ ಹಾಕಿಟ್ಟರೆ ಪುಟ್ಟ ಮಕ್ಕಳು ಮನೆಯಲ್ಲಿದ್ದರೂ ತೊಂದರೆ ಇರುವುದಿಲ್ಲ.ಈ ಉಪಕರಣವು ಸುಮಾರು 390 ಚದರ ಅಡಿವರೆಗಿನ ಪ್ರದೇಶದ ಗಾಳಿಯನ್ನು ಶುದ್ಧ ಮಾಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಬೆಡ್ ರೂಮ್, ಲಿವಿಂಗ್ ರೂಮ್ ಅಥವಾ ಆಫೀಸ್ ಕೊಠಡಿಗಳಿಗೆ ಸೂಕ್ತವಾಗಿದೆ. ವಿಶೇಷವೆಂದರೆ ಇದರಲ್ಲಿ 6 ಹಂತದ ಶುದ್ಧೀಕರಣ ವ್ಯವಸ್ಥೆ ಇದೆ. ಆರು ಹಂತಗಳಲ್ಲಿ ಈ ಉತ್ಪನ್ನವು ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು, ವೈರಸ್ ಗಳು, ಬ್ಯಾಕ್ಟೀರಿಯಾಗಳು ಮತ್ತು ಕೆಟ್ಟ ವಾಸನೆಗಳನ್ನು ತೆಗೆದುಹಾಕುತ್ತದೆ. ಕಾರ್ಯನಿರ್ವಹಣೆಯ ಆರು ಹಂತಗಳು
1.ಪ್ರೀ-ಫಿಲ್ಟರ್: ದೊಡ್ಡ ಕಣಗಳಾದ ಧೂಳು, ಕೂದಲು ಮತ್ತಿತರ ಕಣಗಳನ್ನು ತಡೆಯುತ್ತದೆ. ಈ ಮೂಲಕ ಫಿಲ್ಟರ್‌ನ ಆಯುಷ್ಯ ರಕ್ಷಿಸುತ್ತದೆ.2.ಅಲ್ಟ್ರಾ-ಪ್ಲಾಸ್ಮಾ ಅಯಾನ್ ಫಿಲ್ಟರ್: ಶೇ.99ಕ್ಕಿಂತ ಹೆಚ್ಚು ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಜೀವಾಣುಗಳನ್ನು ರಾಸಾಯನಿಕವಾಗಿ ನಾಶಪಡಿಸುತ್ತದೆ. ಗಾಳಿಯನ್ನು ಆರೋಗ್ಯಕರವಾಗಿಡುತ್ತದೆ.
3.ಆಂಟಿ-ವೈರಲ್ ಮೆಶ್ ಫಿಲ್ಟರ್: ಶೇ.99.94ರಷ್ಟು ವೈರಲ್ ಕಣಗಳನ್ನು ತೆಗೆದುಹಾಕುತ್ತದೆ.4.ಎಚ್ ಪಿ ಪಿ+ ಎಲೆಕ್ಟ್ರೋಸ್ಟ್ಯಾಟಿಕ್ ಫಿಲ್ಮ್: 0.1 ಮೈಕ್ರಾನ್ ನಷ್ಟು ಸಣ್ಣ ಕಣಗಳು, ಶಿಲೀಂಧ್ರಗಳು ಮತ್ತು ಕೀಟಗಳನ್ನು ತಡೆಯುತ್ತದೆ.
5.ಯುವಿ ಲೈಟ್: ಗಾಳಿಯಲ್ಲಿರುವ ಜೀವಾಣುಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ, ಶುದ್ಧವಾದ ಗಾಳಿಯನ್ನು ಒದಗಿಸುತ್ತದೆ.6.ಆಕ್ಟಿವೇಟೆಡ್ ಕಾರ್ಬನ್ ಫಿಲ್ಟರ್: ಫಾರ್ಮಾಲ್ಡಿಹೈಡ್, ಕಾರ್ಬನ್ ಮೋನಾಕ್ಸೈಡ್ ಮತ್ತು ಕೆಟ್ಟ ವಾಸನೆಗಳನ್ನು ನಿವಾರಿಸುತ್ತದೆ.
ಇದು 7.8 ಕೆ.ಜಿ ತೂಕ ಹೊಂದಿದ್ದು, ಎಲ್ಲಿಗೆ ಬೇಕಾದರೂ ಎತ್ತಿಕೊಂಡು ಹೋಗಬಹುದು. ಇದರಲ್ಲಿ ಫಿಲ್ಟರ್ ಇದ್ದು, ಅದನ್ನು ಆರು ತಿಂಗಳಿಗೊಮ್ಮೆಯಾದರೂ ಬದಲಾಯಿಸಬೇಕು. ಮ್ಯಾಗ್ನೆಟಿಕ್ ಲಾಕ್ ವ್ಯವಸ್ಥೆ ಇರುವುದರಿಂದ ಫಿಲ್ಟರ್‌ಗಳನ್ನು ಬದಲಾಯಿಸುವುದು ತುಂಬಾ ಸುಲಭ. ಇದರ ಒಂದು ಕೊರತೆ ಎಂದರೆ ಸ್ಮಾರ್ಟ್‌ಫೋನ್ ಗೆ ಕನೆಕ್ಟ್ ಆಗಬಲ್ಲ ಆಪ್ ಇಲ್ಲ. ದೂರದಿಂದಲೇ ಇದನ್ನು ನಿಯಂತ್ರಿಸಲು ರಿಮೋಟ್ ಕಂಟ್ರೋಲ್ ಇದ್ದಿದ್ದರೆ ಒಳ್ಳೆಯದಿತ್ತು. ಇದರ ಬೆಲೆ ರೂ.69,950. ಶುದ್ಧ ಗಾಳಿ ಬಯಸುವವರು ಈ ಏರ್ ಪ್ಯೂರಿಫೈಯರ್ ಕಡೆ ಗಮನ ಹರಿಸಬಹುದು.