ವಿಜಯದಶಮಿ:ಮಲೆ ಮಹದೇಶ್ವರ ಬೆಟ್ಟದಲ್ಲಿ ಆಯುಧ ಪೂಜೆ
KannadaprabhaNewsNetwork | Published : Oct 25 2023, 01:16 AM IST
ವಿಜಯದಶಮಿ:ಮಲೆ ಮಹದೇಶ್ವರ ಬೆಟ್ಟದಲ್ಲಿ ಆಯುಧ ಪೂಜೆ
ಸಾರಾಂಶ
ಮಲೆ ಮಹದೇಶ್ವರ ಬೆಟ್ಟದಲ್ಲಿ ಆಯುಧ ಪೂಜೆ, ವಿಜಯದಶಮಿ ಪ್ರಯುಕ್ತ ಸ್ವಾಮಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳು ನಡೆದವು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ಆಯುಧ ಪೂಜೆ ಪ್ರಯುಕ್ತ ವೀರಭದ್ರ ಸ್ವಾಮಿಗೆ ಮೈಸೂರು ಮಹಾರಾಜರು ನೀಡಿದಂತಹ ಕಿರೀಟ ಮತ್ತು ಆಭರಣಗಳನ್ನು ತೊಡಿಸಿ ವಿಶೇಷ ಸಲ್ಲಿಸಿ,ಬಳಿಕ ಮೆರವಣಿಗೆ ಮಾಡಲಾಯಿತು.
ಮಹದೇಶ್ವರ ಬೆಟ್ಟದಲ್ಲಿ ದಸರಾ ಸಂಭ್ರಮ । ಪಾರ್ವತಿ ಪರಮೇಶ್ವರರ ಉತ್ಸವ ಮೂರ್ತಿ ಮೆರವಣಿಗೆ । ಲಕ್ಷಾಂತರ ಭಕ್ತರಿಂದ ಸ್ವಾಮಿಯ ದರ್ಶನ ಕನ್ನಡಪ್ರಭ ವಾರ್ತೆ ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ಆಯುಧ ಪೂಜೆ, ವಿಜಯದಶಮಿ ಪ್ರಯುಕ್ತ ಸ್ವಾಮಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳು ನಡೆದವು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ಆಯುಧ ಪೂಜೆ ಪ್ರಯುಕ್ತ ವೀರಭದ್ರ ಸ್ವಾಮಿಗೆ ಮೈಸೂರು ಮಹಾರಾಜರು ನೀಡಿದಂತಹ ಕಿರೀಟ ಮತ್ತು ಆಭರಣಗಳನ್ನು ತೊಡಿಸಿ ವಿಶೇಷ ಸಲ್ಲಿಸಿ,ಬಳಿಕ ಮೆರವಣಿಗೆ ಮಾಡಲಾಯಿತು. ಪಾರ್ವತಿ ಪರಮೇಶ್ವರ ಉತ್ಸವ ಮೂರ್ತಿ ಮೆರವಣಿಗೆ: ಮಲೆ ಮಹದೇಶ್ವರ ಸ್ವಾಮಿಗೆ ಕೃಷ್ಣರಾಜ ಒಡೆಯರು ಅರ್ಪಿಸಿದ ರತ್ನ ಖಚಿತ ಕಿರೀಟ, ದೊಡ್ಡ ಮುತ್ತಿನ ಪದಕ, ಗಂಡುಬೇರುಂಡ ಪದಕ, ಮುತ್ತಿನ ಹಾರ ಹಾಗೂ ಮೋಹನ ಮಾಲೆಗಳಿಂದ ಆಯುಧ ಪೂಜೆಯಂದು ಸಿಂಗರಿಸಲಾಗಿತ್ತು. ಮಹಾಸ್ವಾಮಿಗೆ ಪೂಜಾ ಕಾರ್ಯಕ್ರಮವನ್ನು ಸಾಲೂರು ಮಠದ ಶ್ರೀಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬೇಡಗಂಪಣ ಅರ್ಚಕರು ಪೂಜೆಯನ್ನು ಸಲ್ಲಿಸಿದರು. ತುಂಬಿ ತುಳುಕಿದ ವಸತಿಗೃಹಗಳು: ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ನಾನಾ ಭಾಗಗಳಿಂದ ಬಂದ ಲಕ್ಷಾಂತರ ಭಕ್ತರು ಸ್ವಾಮಿಯ ದರ್ಶನಕ್ಕಾಗಿ ನೆರೆದಿದ್ದರಿಂದ ವಸತಿಗೃಹಗಳು ತುಂಬಿತುಳಿಕಿದ್ದವು. ಬಾಕ್ಸ್.. ವಿಶೇಷ ವಿದ್ಯುತ್ ದೀಪಾಲಂಕಾರ: ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವಾಲಯ, ಗೋಪುರ ಮತ್ತು ರಾಜಗೋಪುರ ದೇವಾಲಯದ ಸುತ್ತಲೂ ವಿಶೇಷ ವಿದ್ಯುತ್ ದೀಪಾಲಂಕಾರ, ತಳಿರು ತೋರಣ ಹಾಗೂ ವಿವಿಧ ಹೂಗಳ ಅಲಂಕಾರ ನೋಡುಗರ ಕಣ್ಮನ ಸೆಳೆಯುವಂತಿತ್ತು. ಬಾಕ್ಸ್.... ಆಯುಧ ಪೂಜೆ : ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸತ್ತಿಗೆ, ಸುರಪಾನ ಕತ್ತಿ ಹಾಗೂ ವಿವಿಧ ಉತ್ಸವ ಮೂರ್ತಿಗಳು ಸೇರಿದಂತೆ ವಾಹನಗಳಿಗೆ ಮಲೆ ಸಾಲೂರು ಮಠದ ಶ್ರೀಗಳ ನೇತೃತ್ವದಲ್ಲಿ ಹಾಗೂ ಕಾರ್ಯದರ್ಶಿ ಸರಸ್ವತಿ ಮತ್ತು ನೆರೆದಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಲೆ ಮಹದೇಶ್ವರನಿಗೆ ಮಹಾಮಂಗಳಾರತಿಯೊಂದಿಗೆ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು.ಹರಕೆ ಹೊತ್ತು ಮಲೆ ಮಹದೇಶ್ವರನ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಬಂದು ಮಲೆ ಮಾದೇಶ್ವರನಿಗೆ ಹುಲಿ ವಾಹನ ಉತ್ಸವ, ಬಸವ ರುದ್ರಾಕ್ಷಿ ಮಂಟಪೋತ್ಸವ, ಬೆಳ್ಳಿ ರಥೋತ್ಸವ ಹಾಗೂ ರಾತ್ರಿ 7:00ಗೆ ನಡೆಯುವ ಚಿನ್ನದ ರಥೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪೂಜಾ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. -- 24ಸಿಎಚ್‌ಎನ್14 ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಜಯದಶಮಿ ಆಯುಧ ಪೂಜೆ ಪ್ರಯುಕ್ತ ವೀರಭದ್ರ ಸ್ವಾಮಿಗೆ ವಿವಿಧ ಅಲಂಕಾರ ಪೂಜೆ ಸಲ್ಲಿಸಲಾಯಿತು. -- 24ಸಿಎಚ್‌ಎನ್15 ಹನೂರು ಮಲೆ ಮಾದೇಶ್ವರ ಬೆಟ್ಟದಲ್ಲಿ ಪಾರ್ವತಿ ಪರಮೇಶ್ವರ ಉತ್ಸವಮೂರ್ತಿಗೆ ವಿಶೇಷ ಪೂಜೆ ನಡೆಯಿತು. -- 24ಸಿಎಚ್‌ಎನ್18 ಮಲೆ ಮಹದೇಶ್ವರ ಬೆಟ್ಟದಲ್ಲಿ ವಿವಿಧ ಉತ್ಸವ ಪೂಜಾ ಕಾರ್ಯಕ್ರಮವು ಶಾಂತ ಮಲ್ಲಿಕಾರ್ಜುನಸ್ವಾಮಿ ನೇತೃತ್ವದಲ್ಲಿ ನಡೆಯಿತು. ಕಾರ್ಯದರ್ಶಿ ಸರಸ್ವತಿ, ಬೇಡರ ಅರ್ಚಕರು ಇದ್ದರು. -- 27ಸಿಚ್‌ಎನ್16 ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಜಯದಶಮಿ ಅಂಗವಾಗಿ ಆಯುಧ ಪೂಜೆ ನಡೆಯಿತು. -- 24ಸಿಎಚ್ಎನ್17 ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ವಿವಿಧ ಉತ್ಸವ ಪೂಜಾ ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತ ಸಮೂಹ.