ಸಾರಾಂಶ
ಮೈಸೂರು : ಸೃಷ್ಟಿ ಪಬ್ವಿಕೇಷನ್ಸ್ ಫ್ರೆಂಚ್ ಲೇಖಕ, ತತ್ವಜ್ಞಾನಿ. ಇತಿಹಾಸಕಾರ, ಮಾನವತಾವಾದಿ ಮತ್ತು ಸಮಾಜ ಸುಧಾರಕ ವೋಲ್ಟೇರ್ ಅವರ ಕ್ಯಾಂಡೀಡ್ ಕಾದಂಬರಿಯ ಅನುವಾದವನ್ನು ಪ್ರಕಟಿಸಿದೆ. ಕರ್ನಾಟಕ ಕೇಂದ್ರೀಯ ವಿವಿಯ ಕನ್ನಡ ಸಹ ಪ್ರಾಧ್ಯಾಪಕ ರಾಜಣ್ಣ ತಗ್ಗಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಭವ್ಯವಾದ ಕೋಟೆಯಲ್ಲಿ ಕ್ಯಾಂಡೀಡ್ ಬೆಳೆದದ್ದು ಮತ್ತು ಅಲ್ಲಿಂದ ಹೊರದಬ್ಬಿಸಿಕೊಂಡದ್ದು, ಬಲ್ಗೇರಿಯನ್ನರ ಸೈನ್ಯಕ್ಕೆ ಸೇರ್ಪಡೆ, ಬಲ್ಗೇರಿಯನ್ನರಿಂದ ತಪ್ಪಿಸಿಕೊಂಡದ್ದು ನಂತರ ಸಂಭವಿಸಿದ್ದು, ತನ್ನ ಗುರುವನ್ನು ಸಂಧಿಸಿದ್ದು, ನಂತರ ನಡೆದದ್ದು,ಬಿರುಗಾಳಿ, ನೌಕಾಘಾತ, ಭೂಕಂಪಗಳ ಜೊತೆ ಪಾಂಗ್ಲೋಸ್, ಕ್ಯಾಂಡೀಡ್ ಮತ್ತು ಜೇಮ್ಸರ ಹೆಣಗಾಟ, ಭವಿಷ್ಯದ ಭೂಕಂಪನವನ್ನು ತಡೆಯಲು ಪೋರ್ಚುಗೀಸರ ಕೊಡುಗೆ ಮತ್ತು ಕ್ಯಾಂಡೀಡ್ ಪ್ರೀತ್ಯಾದರಗಳಿಗೆ ಒಳಗಾದುದು, ಕ್ಯಾಂಡೀಡ್‌ಗೆ ಮುದುಕಿಯ ಉಪಚಾರ ಮತ್ತು ಆತನ ಪ್ರೇಮಪಕ್ಷಿಯನ್ನು ಕಂಡು ಹಿಡಿದದ್ದು, ಕ್ಯುನೆಗೊಂಡ್‌ಳ ವ್ಯಥಾ ಕಥನ, ಕ್ಯುನೆಗೊಂಡ್, ಕ್ಯಾಂಡೀಡ್, ಮುದುಕಿ ಹಾಗೂ ಯಹೂದಿ, ಧರ್ಮಾಧಿಕಾರಿಗಳ ನಡುವಿನ ಸಂಘರ್ಷ, ಕ್ಯಾಂಡೀಡ್, ಕ್ಯುನೆಗೊಂಡ್ ಮತ್ತು ಮುದುಕಿ ಕೇಡಿಜ್ ನಗರಕ್ಕೆ ಆಗಮಿಸಿದ್ದು, ಮುದುಕಿಯ ವ್ಯಥಾಗಾಥೆ, ಆಕೆಯ ಸಾಹಸಗಾಥೆ ಮುಂದುವರಿಕೆ, ಕ್ಯಾಂಡೀಡ್, ಕ್ಯುನೆಗೊಂಡ್ ಮತ್ತು ಮುದುಕಿಯ ಪರಾರಿ, ಪರಾಗ್ವೆಯಲ್ಲಿ ಕ್ಯಾಂಡೀಡ್ ಮತ್ತು ಜೆನ್ಯೂಟ್‌ರ ಭೇಟಿ, ಕ್ಯುನೆಗೊಂಡ್ ಸಹೋದರನ ಸಾಹಸಗಾಥೆ ಮತ್ತು ಅವನ ಹತ್ಯೆ,
ಇಬ್ಬರು ಹುಡುಗಿಯರೊಂದಿಗೆ ಕೋತಿಗಳ ಪ್ರೇಮ ಪ್ರಕರಣ, ಕ್ಯಾಂಡೀಡ್ ಮತ್ತು ಅವರ ಪರಿಚಾರಕ ಎಲ್ಡೊರಾಡೊಗೆ ಆಗಮನ, ಎಲ್ಡೊರಾಡೊ ಎಂಬ ಅದ್ಭುತ ಲೋಕ, ಸೂರಿನಮ್‌ನ ಪ್ರವೇಶ ಮತ್ತು ಕ್ಯಾಂಡೀಡ್ ಮಾರ್ಟಿನ್‌ರ ಪರಿಚಯ, ತಾತ್ವಿಕ ಚರ್ಚೆ, ಅವರಿಬ್ಬರಿಗೆ ಫ್ರಾನ್ಸ್‌ನಲ್ಲಿ ನಡೆದಿದ್ದು, ನಂತರ ಅವರು ಇಂಗ್ಲೆಡ್ ತೀರಕ್ಕೆ ಹೋಗಿದ್ದು, ಅಲ್ಲಿ ನಡೆದ ಘೋರ ಕೃತ್ಯ, ಅವರಿಬ್ಬರ ಕೊಕೋಕ್ಯುರೆಂಟಿಯ ಭೇಟಿ, ಪಕ್ವೆಟ್ ಮತ್ತು ಸನ್ಯಾಸಿ ಜಿರೊಫ್ಲಿ, ಆರು ಮಂದಿ ನತದೃಷ್ಟ ರಾಜರ ವೃಥಾಗಾಥೆ, ಕಾನ್ ಸ್ಟಾಂಟಿನೋಪಲ್ ಕಡೆಗೆ ಕ್ಯಾಂಡೀಡ್ ಪಯಣ, ಕ್ಯುನೆಗೊಂಡ್ ಸಹೋದರ ಮತ್ತು ಪಾಂಗ್ಲೊಸ್‌ರ ವೃಥಾಗಾಥೆ, ಕ್ಯುನೆಗೊಂಡ್ ಮತ್ತು ಮುದುಕಿಯನ್ನು ಕ್ಯಾಂಡೀಡ್ ಬಿಡಿಸಿದ್ದು- ಈ ಅಧ್ಯಾಯಗಳ ಮೂಲಕ ಅಸಂಬಂದ್ಧವಾದ ಅತಿ ಆಶಾವಾದ ಪ್ರಯೋಜನಕಾರಿಯಲ್ಲ. ಅಂತೆಯೇ ಪ್ರಪಂಚದಲ್ಲಿನ ಎಲ್ಲವೂ ಉತ್ತಮವಾದುದಲ್ಲ ಎಂಬ ಸಂದೇಶವನ್ನು ಈ ಕಾದಂಬರಿ ಸಾರುತ್ತದೆ. ಎಲ್ಲಾ 30 ಅಧ್ಯಾಯಗಳಲ್ಲಿರುವ ರೇಖಾಚಿತ್ರಗಳು ಓದುಗರ ಗಮನ ಸೆಳೆಯುತ್ತದೆ. ಅವು ಕಾದಂಬರಿಯ ಅಂದವನ್ನು ಕೂಡ ಹೆಚ್ಚಿಸಿವೆ. ಇದು ಮನುಷ್ಯರ ವೈಚಾರಿಕತೆಗೆ ಸಾಣ ಹಿಡಿಯುವ ಮತ್ತು ತಾರ್ಕಿಕ ಅನುಭೂತಿಯನ್ನು ಕೊಡಬಲ್ಲ ಕಾದಂಬರಿ ಎಂದು ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅಭಿಪ್ರಾಯಪಟ್ಟಿದ್ದಾರೆ.
ಆಸಕ್ತರು ಸೃಷ್ಟಿ ನಾಗೇಶ್, ಮೊ. 98450 96668 ಸಂಪರ್ಕಿಸಬಹುದು.