ಸಮಾಜಕ್ಕೆ ನಮ್ಮ ಕೊಡುಗೆ ಏನೆಂಬುವುದನ್ನು ಅರಿಯಬೇಕು

| Published : Oct 06 2023, 01:09 AM IST / Updated: Oct 06 2023, 01:10 AM IST

ಸಮಾಜಕ್ಕೆ ನಮ್ಮ ಕೊಡುಗೆ ಏನೆಂಬುವುದನ್ನು ಅರಿಯಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು ಆ ಮೂಲಕ ನಮ್ಮಿಂದ ಆಗುವ ಸಹಾಯವನ್ನು ಸಮಾಜಕ್ಕೆ ಕೊಡುವುದರ ಮೂಲಕ ನಮ್ಮ ಬದುಕನ್ನ ಹಸನು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಔಷಧ ವಿತರಕರ ಸಂಘದ ಅಧ್ಯಕ್ಷ ಅಂಕಿತ ಮೆಡಿಕಲ್ಸ್ ನ ಶಿವರಾಮಯ್ಯ ತಿಳಿಸಿದರು .
ಶಿವರಾಮಯ್ಯ ಅಭಿಮತ । ದ್ವಾರಕಾಮಯಿ ವೃದ್ಧಾಶ್ರಮದಲ್ಲಿ ಔಷಧಿ ತಜ್ಞರ ದಿನಾಚರಣೆ ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು ಆ ಮೂಲಕ ನಮ್ಮಿಂದ ಆಗುವ ಸಹಾಯವನ್ನು ಸಮಾಜಕ್ಕೆ ಕೊಡುವುದರ ಮೂಲಕ ನಮ್ಮ ಬದುಕನ್ನ ಹಸನು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಔಷಧ ವಿತರಕರ ಸಂಘದ ಅಧ್ಯಕ್ಷ ಅಂಕಿತ ಮೆಡಿಕಲ್ಸ್ ನ ಶಿವರಾಮಯ್ಯ ತಿಳಿಸಿದರು . ತಾಲೂಕಿನ ಸುಲ್ತಾನ್ ಪೇಟೆ ದ್ವಾರಕಾಮಯಿ ವೃದ್ಧಾಶ್ರಮದಲ್ಲಿ ನಡೆದ ವಿಶ್ವ ಔಷಧ ತಜ್ಞರ ದಿನಾಚರಣೆಯನ್ನು ಆಚರಣೆಯಲ್ಲಿ ಮಾತನಾಡಿ, ಪೋಷಕರು ಕಲಿಸಿದ ಸಂಸ್ಕಾರವೇ ಮಕ್ಕಳು ಉನ್ನತ ಸ್ಥಾನಕ್ಕೇ ಏರಲು ಕಾರಣ. ಸಂಸ್ಕಾರ ಮರೆತ ಮಕ್ಕಳಿಂದ ಇಂದು ವೃದ್ದಾಶ್ರಮಗಳು ಹೆಚ್ಚಾಗಲು ಕಾರಣವಾಗಿದೆ.ವಯೋ ವೃದ್ದರನ್ನು ತಂದೆ ತಾಯಿಯಂತೆ ಭಾವಿಸಿ ಅವರನ್ನು ಗೌರವಯುತವಾಗಿ ನಡೆಸಿಕೊಂಡಾಗ ಮಾತ್ರ ಅಂತಹ ಸಮಾಜ ಪರಿಪೂರ್ಣ ಸಮಾಜವಾಗುತ್ತದೆ. ಆಧುನಿಕತೆಯ ಜೀವನ ಶೈಲಿ ಕುಟುಂಬಗಳು ಮತ್ತು ಸಂಬಂಧಗಳ ನಡುವೆ ಬಿರುಕುಂಟು ಮಾಡುತ್ತಿದೆ. ಸಂಸ್ಕಾರಯುತ ಮನಸ್ಸುಗಳು ಎಂದೆಂದಿಗೂ ವಯೋ- ವೃದ್ದರಾದ ತಂದೆತಾಯಿಗಳನ್ನು ಅರ್ಥ ಮಾಡಿಕೊಂಡು ಅವರನ್ನು ಸಂಧ್ಯಾ ಕಾಲದಲ್ಲಿ ಗೌರವಯುತವಾಗಿ ನಡೆಸಿಕೊಂಡು ನೆಮ್ಮದಿಯಿಂದ ಇರುತ್ತವೆ ಎಂದು ಹೇಳಿದರು. ಚಿಕ್ಕಬಳ್ಳಾಪುರದ ಉಪ ಔಷಧ ನಿಯಂತ್ರಕ ವೆಂಕಟೇಶ್ ಮಾತನಾಡಿ, ಔಷಧಗಳ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿ ಬಳಸುವ ಬಗ್ಗೆ ಜನರಿಗೆ ತಿಳಿ ಹೇಳುವ ಕೆಲಸವು ಸಹ ನಿಮ್ಮಿಂದ ಆಗಬೇಕು. ಔಷಧಿಗಳ ಉಪಯೋಗ ಹಾಗೂ ಅದರ ಮಹತ್ವದ ಬಗ್ಗೆ ಪ್ರತಿಯೊಬ್ಬರು ತಿಳಿವಳಿಕೆ ಮೂಡಿಸಿಕೊಳ್ಳಬೇಕು ಎಂದರು. ಸಂಘದ ಕಾರ್ಯದರ್ಶಿ ಚಂದ್ರಕುಮಾರ್ ಕೆ ಮಾತನಾಡಿ, ವೈದ್ಯರ ಸಲಹಾ ಚೀಟಿ ಇಲ್ಲದೆ ಯಾವುದೇ ಕಾರಣಕ್ಕೂ ನಾವು ಔಷಧಿಗಳನ್ನ ವಿತರಣೆ ಮಾಡಬಾರದು, ಇದು ಅಪಾಯಕಾರಿ ಮತ್ತು ಅಪರಾಧವು ಹೌದು ನಮ್ಮ ವೃತ್ತಿಗೆ ದ್ರೋಹ ಬಗೆಯದೇ ವೃತ್ತಿ ಪಾವಿತ್ರತೆಯನ್ನ ಕಾಪಾಡಿಕೊಂಡು ಮುನ್ನಡೆಯುವುದು ಸೂಕ್ತ ಎಂದು ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ತಾಲೂಕಿನ ಔಷಧ ವಿತರಕರ ಸಂಘದ ಪದಾಧಿಕಾರಿಗಳು ಒಂದೆಡೆ ಸೇರಿ ದ್ವಾರಕಾಮಯಿ ವೃದ್ಧಾಶ್ರಮದ ವೃದ್ಧರೊಂದಿಗೆ ಸಹ ಭೋಜನ ಸೇವಿಸುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು, ಸಂಘದ ವತಿಯಿಂದ ಹಾಗೂ ಇತರರು ವೈಯುಕ್ತಿಕವಾಗಿ ವೃದ್ದಾಶ್ರಮಕ್ಕೆ ದೇಣಿಗೆ ನೀಡಿದರು. ಈ ವೇಳೆ ಹಿರಿಯ ಔಷಧ ತಜ್ಞರಾದ ರಾಜೇಶ್‌, ನಾಗರಾಜ್‌,ಓಲೇಟಿ ರಾಘವೇಂದ್ರರಿಗೆ ಸನ್ಮಾನ ಮತ್ತು ಎಸ್‌.ಎಸ್.ಎಲ್.ಸಿ, ಪಿಯುಸಿ, ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ಔಷಧ ತಜ್ಞರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಿರಿಯ ಔಷಧ ತಜ್ಞ ಮೋಹನ್‌ ರಾಜ್‌ ನಡೆಸಿ ಕೊಟ್ಟ ಮ್ಯಾಜಿಕ್‌ ಶೋ ಎಲ್ಲರನ್ನು ರಂಜಿಸಿತು. ಈ ಸಂದರ್ಭದಲ್ಲಿ ದ್ವಾರಕಾಮಯಿ ವೃದ್ಧಾಶ್ರಮದ ಮೇಲ್ವಿಚಾರಕ ಮುರುಳಿ, ಔಷಧ ವಿತರಕರ ಸಂಘದ ಪದಾಧಿಕಾರಿಗಳಾದ ವಾಸವಿ ಮೆಡಿಕಲ್ಸ್ ನ ಕೆ. ಚಂದ್ರಕುಮಾರ್, ಗೋಕುಲ್ ಮೆಡಿಕಲ್ಸ್ ನ ಮಹೇಶ್ ಕುಮಾರ್, ನಂದೀಶ್ವರ ಮೆಡಿಕಲ್ಸ್ ನ ನವೀನ್ ಕುಮಾರ್ ಸದಸ್ಯರುಗಳಾದ ಓಲೇಟಿ ರಾಘವೇಂದ್ರ ಗುಪ್ತ, ಶ್ರೀಕಾಂತ, ಶೇಷಾದ್ರಿ, ತ್ರಿಲೋಕ್, ಹರಿಕೃಷ್ಣ, ಸೇರಿದಂತೆ ಔಷಧಿ ವಿತರಕರ ಕುಟುಂಬ ವರ್ಗದವರು , ಮತ್ತಿತರರು ಇದ್ದರು.