ಯಮಹಾ ಮೋಟಾರ್, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ತನ್ನ ಜನಪ್ರಿಯ ಬೈಕ್ ಮತ್ತು ಹೈಬ್ರಿಡ್ ಸ್ಕೂಟರ್ ಶ್ರೇಣಿಯ ಮೇಲೆ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಸಿದ್ಧ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಇಂಡಿಯಾ ಯಮಹಾ ಮೋಟಾರ್, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ತನ್ನ ಜನಪ್ರಿಯ ಬೈಕ್ ಮತ್ತು ಹೈಬ್ರಿಡ್ ಸ್ಕೂಟರ್ ಶ್ರೇಣಿಯ ಮೇಲೆ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಆಕರ್ಷಕ ವಿಮಾ ಪ್ರಯೋಜನಗಳು, ಸುಲಭ ಫೈನಾನ್ಸ್ ಯೋಜನೆಗಳು ಹಾಗೂ ಅತಿ ಕಡಿಮೆ ಡೌನ್‌ಪೇಮೆಂಟ್ ಸೌಲಭ್ಯಗಳನ್ನು ಸಂಸ್ಥೆ ಪರಿಚಯಿಸಿದೆ.ಕಂಪನಿಯ 125ಸಿಸಿ ಹೈಬ್ರಿಡ್ ಸ್ಕೂಟರ್‌ಗಳಾದ ಫ್ಯಾಸಿನೊ 125 ಹಾಗೂ ರೇ-ಝಡ್‌ಆರ್ 125 ವಾಹನಗಳ ಖರೀದಿಯ ಮೇಲೆ ₹3,399 ವಿಮಾ ಪ್ರಯೋಜನ ಹಾಗೂ ₹2,499ರಷ್ಟು ಕಡಿಮೆ ಡೌನ್‌ಪೇಮೆಂಟ್ ಸೌಲಭ್ಯ ಕಲ್ಪಿಸಲಾಗಿದೆ. ಜನಪ್ರಿಯ ಎಫ್‌ಝಡ್ ಸರಣಿಯ ಎಫ್‌ಝಡ್-ಎಸ್ ಮತ್ತು ಎಫ್‌ಝಡ್ ಮಾದರಿಗಳ ಮೇಲೆ ₹5,999 ವಿಮಾ ರಿಯಾಯಿತಿ ಜತೆಗೆ ₹3,900 ಡೌನ್‌ಪೇಮೆಂಟ್ ಅವಕಾಶ ನೀಡಲಾಗಿದೆ.
ಇನ್ನು ಪ್ರೀಮಿಯಂ 155ಸಿಸಿ ವಿಭಾಗದ ಎಕ್ಸ್‌ಎಸ್‌ಆರ್ 155 ಬೈಕ್‌ಗೆ ₹5,555 ವಿಮಾ ಪ್ರಯೋಜನ ಮತ್ತು ₹4,999 ಡೌನ್‌ಪೇಮೆಂಟ್ ನಿಗದಿಪಡಿಸಲಾಗಿದೆ. ಕ್ರೀಡಾ ಪ್ರಿಯರ ನೆಚ್ಚಿನ ಆರ್15 ಹಾಗೂ ಎಂಟಿ-15 ಬೈಕ್‌ಗಳು ಕೇವಲ ₹4,999 ಆರಂಭಿಕ ಡೌನ್‌ಪೇಮೆಂಟ್‌ನಲ್ಲಿ ಲಭ್ಯವಿರಲಿವೆ.ತಮಿಳುನಾಡು ಮತ್ತು ಕೇರಳ ರಾಜ್ಯಗಳನ್ನು ಹೊರತುಪಡಿಸಿ ದೇಶಾದ್ಯಂತ ಇರುವ ಎಲ್ಲಾ ಅಧಿಕೃತ ಯಮಹಾ ಡೀಲರ್‌ಶಿಪ್‌ಗಳಲ್ಲಿ ಈ ಸೀಮಿತ ಅವಧಿಯ ಹಬ್ಬದ ಆಫರ್ ಅನ್ವಯವಾಗಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.