ಸಾರಾಂಶ
ಬೆಂಗಳೂರು : ಯಶವಂತಪುರ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಏಪ್ರಿಲ್ 3ರಿಂದ ಏ.11ರವರೆಗೆ ವಿವಿಧ ಸಾಪ್ತಾಹಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ ನೈಋತ್ಯ ರೈಲ್ವೆ ತಿಳಿಸಿದೆ.
ಏ.4ರಂದು ಯಶವಂತಪುರ-ಡಾ। ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ (12291), ಏ.5ರಂದು ಡಾ। ಎಂಜಿಆರ್ ಚೆನ್ನೈ ಸೆಂಟ್ರಲ್-ಯಶವಂತಪುರ ಎಕ್ಸ್‌ಪ್ರೆಸ್ (12292), ಏ.4ರಂದು ಯಶವಂತಪುರ-ಪುದುಚೇರಿ ಎಕ್ಸ್‌ಪ್ರೆಸ್ (16573), ಏ.5ರಂದು ಪುದುಚೇರಿ-ಯಶವಂತಪುರ ಎಕ್ಸ್‌ಪ್ರೆಸ್ (16574), ಏ.5ರಂದು ಯಶವಂತಪುರ-ಬೀದರ್ ಎಕ್ಸ್‌ಪ್ರೆಸ್ (16577), ಏ.6ರಂದು ಬೀದರ್-ಯಶವಂತಪುರ ಎಕ್ಸ್‌ಪ್ರೆಸ್ (16578), ಏ.3, ಏ.10 ರಂದು ಯಶವಂತಪುರ-ಪಂಢರಪುರ ಎಕ್ಸ್‌ಪ್ರೆಸ್ (16541), ಏ.4 ಮತ್ತು 11ರಂದು ಪಂಢರಪುರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು (16542) ಸಂಚಾರ ರದ್ದುಪಡಿಸಿರುವುದಾಗಿ ತಿಳಿಸಿದೆ.
ಕಣ್ಣೂರು-ಬೆಂಗಳೂರು ರೈಲು ಟರ್ಮಿನಲ್, ಮಾರ್ಗ ಬದಲು
ಕೆಎಸ್ಆರ್ ಬೆಂಗಳೂರು- ಕಣ್ಣೂರು- ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಟರ್ಮಿನಲ್ ಮತ್ತು ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲು (16511) ಬೆಂಗಳೂರಿನ ಎಸ್‌ಎಂವಿಟಿಯಿಂದ ರಾತ್ರಿ 8 ಗಂಟೆಗೆ ಹೊರಟು, ಬಾಣಸವಾಡಿ, ಹೆಬ್ಬಾಳ ಮತ್ತು ಚಿಕ್ಕಬಾಣಾವರ ಮಾರ್ಗದ ಮೂಲಕ ಸಂಚರಿಸಲಿದೆ.
ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (16512) ಚಿಕ್ಕಬಾಣಾವರ, ಹೆಬ್ಬಾಳ, ಬಾಣಸವಾಡಿ ಮಾರ್ಗದ ಮೂಲಕ ಬೆಂಗಳೂರಿನ ಎಸ್‌ಎಂವಿಟಿ ಟರ್ಮಿನಲ್ ತಲುಪಲಿದೆ. ಈ ರೈಲು ಕೆಎಸ್ಆರ್ ಬೆಂಗಳೂರಿನ ಬದಲು ಎಸ್ಎಂವಿಟಿಗೆ ಬೆಳಗ್ಗೆ 7:45ಕ್ಕೆ ಆಗಮಿಸಿ ಇಲ್ಲಿಯೇ ಸಂಚಾರ ಕೊನೆಗೊಳಿಸಲಿದೆ.