ಸಾರಾಂಶ
ವೆಲ್ಲಿಂಗ್ಟನ್: ಇಂಗ್ಲೆಂಡ್ ಕ್ರಿಕೆಟ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. 147 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ 5 ಲಕ್ಷ ರನ್ ಪೂರೈಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಈ ಮೈಲುಗಲ್ಲು ಸಾಧಿಸಿತು.
51ನೇ ಓವರ್‌ನಲ್ಲಿ ವಿಲಿಯಮ್ ರೂರ್ಕೆ ಎಸೆತದಲ್ಲಿ ಬ್ರೂಕ್ 2 ರನ್ ಗಳಿಸಿದರು. ಇದು ಇಂಗ್ಲೆಂಡ್ ತಂಡ ಟೆಸ್ಟ್‌ನಲ್ಲಿ ಕಲೆಹಾಕಿದ ಒಟ್ಟಾರೆ 500000ನೇ ರನ್. ದಿನದಂತ್ಯಕ್ಕೆ ತಂಡ 500126 ರನ್ ಗಳಿಸಿದೆ.
ತಂಡ 1082ನೇ ಟೆಸ್ಟ್ ಆಡುತ್ತಿದ್ದು, ಒಟ್ಟು 717 ಆಟಗಾರರು ಈ ವರೆಗೂ ತಂಡವನ್ನು ಪ್ರತಿನಿಧಿಸಿದ್ದಾರೆ.ಇನ್ನು, ಆಸ್ಟ್ರೇಲಿಯಾ 868 ಪಂದ್ಯಗಳಲ್ಲಿ 428,000 ರನ್ ಕಲೆಹಾಕಿದ್ದು, ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಭಾರತ 586 ಟೆಸ್ಟ್ ಪಂದ್ಯಗಳಲ್ಲಿ 278751 ರನ್ ಗಳಿಸಿ 3ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಆಟಗಾರರು ಒಟ್ಟಾರೆ 929 ಶತಕ ಬಾರಿಸಿದ್ದು, ಆಸ್ಟ್ರೇಲಿಯಾ 893, ಭಾರತ 552, ವೆಸ್ಟ್‌ಇಂಡೀಸ್ 502, ಪಾಕಿಸ್ತಾನ 433 ಶತಕ ಸಿಡಿಸಿವೆ.
ಟೆಸ್ಟ್‌ನಲ್ಲಿ 100 ಬಾರಿ 50+ ಸ್ಕೋರ್: ಜೋ ರೂಟ್ ದಾಖಲೆ
ವೆಲ್ಲಿಂಗ್ಟನ್: ಇಂಗ್ಲೆಂಡ್‌ನ ತಾರಾ ಬ್ಯಾಟರ್ ಜೋ ರೂಟ್ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 100ನೇ ಬಾರಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದು, ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಮೊದಲಿಗ, ಒಟ್ಟಾರೆ ವಿಶ್ವದ 4ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಅವರು ಈ ಮೈಲುಗಲ್ಲು ಸಾಧಿಸಿದರು. ಇನ್ನಿಂಗ್ಸ್‌ನಲ್ಲಿ ಅವರು ಅರ್ಧಶತಕ ಬಾರಿಸಿದರು. ಇದು ಅವರ 65ನೇ ಅರ್ಧಶತಕ. ಉಳಿದಂತೆ 35 ಶತಕಗಳನ್ನೂ ಸಿಡಿಸಿದ್ದಾರೆ. ರೂಟ್‌ಗೂ ಮೊದಲು ಸಚಿನ್ ತೆಂಡುಲ್ಕರ್ 119, ದ.ಆಫ್ರಿಕಾದ ಜ್ಯಾಕ್ ಕ್ಯಾಲಿಸ್ ಹಾಗೂ ಆಸ್ಟ್ರೇಲಿಯಾ ರಿಕಿ ಪಾಂಟಿಂಗ್ ತಲಾ 103 ಬಾರಿ ಟೆಸ್ಟ್‌ನಲ್ಲಿ 50+ ರನ್ ಗಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))