ಸಾರಾಂಶ
ಬೆಂಗಳೂರು: ಸೈಕಲ್ ಪ್ಯೂರ್ ಅಗರಬತ್ತಿಯು 12 ನೇ ಆವೃತ್ತಿಯ ಟೈಗರ್ ಕಪ್ 2024 ಅನ್ನು ಆಯೋಜಿಸುತ್ತಿದೆ. ಈ ಸ್ಪರ್ಧೆಯು ಬೆಂಗಳೂರಿನಲ್ಲಿ ಏಪ್ರಿಲ್ 22 ರಿಂದ ಮೇ 13 ರವರೆಗೆ ನಡೆಯಲಿದೆ. 12 ವರ್ಷದೊಳಗಿನವರು, 14 ವರ್ಷದೊಳಗಿನವರು ಮತ್ತು 16 ವರ್ಷದೊಳಗಿನವರ ವಿಭಾಗಗಳಲ್ಲಿ ನಡೆಯುವ ಈ ಕ್ರಿಕೆಟ್ ಪಂದ್ಯಾವಳಿಯು ಈ ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ. ರಾಜರಾಜೇಶ್ವರಿ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ಚನ್ನಸಂದ್ರದ ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿ, ಪಟ್ಟಣಗೆರೆಯ ಸತ್ವ ಗ್ಲೋಬಲ್ ಸಿಟಿ ಮತ್ತು ಬೊಮ್ಮಸಂದ್ರದ ಬಿ ಕೆ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.
ಯುವ ಕ್ರಿಕೆಟ್ ಪ್ರತಿಭೆಗಳನ್ನು ಪೋಷಿಸುವ ಮತ್ತು ಈ ಪ್ರದೇಶದಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಪಂದ್ಯಾವಳಿಯಲ್ಲಿ ಹುಬ್ಬಳ್ಳಿ, ಮೈಸೂರು ಮತ್ತು ಕೇರಳದ ತಂಡಗಳು ಭಾಗವಹಿಸಲಿವೆ. ಹಲವು ವರ್ಷಗಳಿಂದ ಟೈಗರ್ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಅನೇಕ ಉದಯೋನ್ಮುಖ ಕ್ರಿಕೆಟಿಗರು ಕರ್ನಾಟಕ ಅಂಡರ್ 14, ಅಂಡರ್ 16 ಮತ್ತು ಅಂಡರ್ 19 ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿದ್ದಾರೆ.
ಖ್ಯಾತ ಕ್ರಿಕೆಟ್ ಆಟಗಾರರಾದ ಸಂದೀಪ್ ಪಾಟೀಲ್, ಹರ್ಭಜನ್ ಸಿಂಗ್ ಮತ್ತು ಯೂಸುಫ್ ಪಠಾಣ್ ಅವರಿಂದ ಸೃಷ್ಟಿಸಲ್ಪಟ್ಟ ಟೈಗರ್ ಕಪ್ ಪಂದ್ಯಾವಳಿಯಲ್ಲಿ ಭಾರತದಾದ್ಯಂತ ಇರುವ 900ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳುತ್ತಾರೆ. ಬಹು ನಿರೀಕ್ಷಿತ ಪಂದ್ಯಾವಳಿಗಳಲ್ಲಿ ಇದು ಒಂದಾಗಿದ್ದು, 56 ಪ್ರತಿಭಾವಂತ ತಂಡಗಳು ಭಾಗವಹಿಸಲಿವೆ.
12ನೇ ಆವೃತ್ತಿಯ ಟೈಗರ್ ಕಪ್ 2024 ವನ್ಯಜೀವಿಗಳನ್ನು ಸಂರಕ್ಷಿಸುವ ಮಹತ್ವದ ಕುರಿತು ಜಾಗೃತಿ ಮೂಡಿಸಲು ಸಮರ್ಪಿತವಾಗಿದೆ. ಈ ಪಂದ್ಯಾವಳಿಯಿಂದ ಬರುವ ಆದಾಯವನ್ನು ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಅರಣ್ಯ ಕಾಲಾಳುಗಳಿಗೆ ಬೆಂಬಲ ಸೂಚಿಸಲು ದೇಣಿಗೆ ನೀಡಲಾಗುತ್ತದೆ.ವಾರ್ಷಿಕವಾಗಿ ನಡೆಯುವ ಈ ಪಂದ್ಯಾವಳಿಯು ಯುವ ಪ್ರತಿಭಾವಂತ ಆಟಗಾರರ ಸಂಭ್ರಮಿಸುವ ಉದ್ದೇಶ ಹೊಂದಿರುವುದರ ಜೊತೆಗೆ ಸೈಕಲ್ ಪ್ಯೂರ್ ಅಗರಬತ್ತಿಯ ಸಹಭಾಗಿತ್ವದ ಮೂಲಕ ಅರಣ್ಯ ಸಿಬ್ಬಂದಿಗೆ ಅನುಕೂಲ ಒದಗಿಸಲಿದೆ.
ಕರ್ನಾಟಕದ 2, ಕೇರಳದ 1 ಮತ್ತು ತಮಿಳುನಾಡಿನ 1 ಅರಣ್ಯ ಸಿಬ್ಬಂದಿಗಳು ವನ್ಯಜೀವಿ ರಕ್ಷಣೆಗೆ ಅವರು ನೀಡಿದ ಅಪೂರ್ವ ಕೊಡುಗೆಗಾಗಿ ತಲಾ 1 ಲಕ್ಷ ನಗದು ಬಹುಮಾನವನ್ನು ಪಡೆಯುತ್ತಾರೆ.
ಕ್ರಿಕೆಟ್ ತಜ್ಞ ಶ್ರೀ ಜೋಸೆಫ್ ಹೂವರ್ ಮಾತನಾಡಿ, "ಟೈಗರ್ ಕಪ್ 2024 ಉದಯೋನ್ಮುಖ ಪ್ರತಿಭೆಗಳನ್ನು ಸಂಭ್ರಮಿಸುವ ಕಾರ್ಯಕ್ರಮವಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ವರದಿ ಮಾಡಿದ ಅನುಭವ ಇರುವ ನನಗೆ ಈ ಪಂದ್ಯಾವಳಿಯಲ್ಲಿ ಯುವ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದು ಮತ್ತು ಅವರ ಕನಸುಗಳನ್ನು ನನಸಾಗಿಸಲು ಶ್ರಮಿಸುವುದನ್ನು ನೋಡುವುದು ಸಂತೋಷ ಕೊಡುತ್ತದೆ. ನಮ್ಮಲ್ಲಿ ಭರವಸೆಯ ಪ್ರತಿಭೆಗಳ ಭಂಡಾರವೇ ಇದೆ ಮತ್ತು ಅವರೆಲ್ಲರ ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸುತ್ತೇನೆ.
ಯುವ ಪ್ರತಿಭೆಗಳು ಆಡುವುದನ್ನು ವೀಕ್ಷಿಸುವುದು ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೌಶಲ್ಯಗಳನ್ನು ಪ್ರದರ್ಶಿಸುವುದು ಒಂದು ಆನಂದದಾಯಕ ಅನುಭವವಾಗಿದೆ” ಎಂದು ಹೇಳಿದರು.ಲೆಗಸಿ ಬ್ರ್ಯಾಂಡ್ ಸೈಕಲ್ ಪ್ಯೂರ್ ಅಗರಬತ್ತಿಯು ಭಾರತದಾದ್ಯಂತ ಹೆಚ್ಚು ಸಂಭ್ರಮಿಸುವ ಕ್ರೀಡೆಯಲ್ಲಿ ಸ್ಪರ್ಧಿಸುವ ಮತ್ತು ಯುವ ಪ್ರತಿಭೆಗಳನ್ನು ಅನ್ವೇಷಿಸಲು ವೇದಿಕೆಯನ್ನು ಒದಗಿಸುವ ತನ್ನ ನಿಲುವಿನಲ್ಲಿ ಬದ್ಧವಾಗಿದೆ. ಸೈಕಲ್ ಪ್ಯೂರ್ ಅಗರಬತ್ತಿಯು ಹಲವು ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ಹಲವು ವರ್ಷಗಳಿಂದ ಬೆಂಬಲಿಸುತ್ತಾ ಬಂದಿದೆ ಮತ್ತು 12ನೇ ಆವೃತ್ತಿಯ ಟೈಗರ್ ಕಪ್ 2024ರೊಂದಿಗೆ ಪಾಲುದಾರಿಕೆ ಹೊಂದಲು ಸಂತೋಷ ಹೊಂದಿದೆ. ಪಂದ್ಯಾವಳಿ ಸುಗಮವಾಗಿ ನಡೆಯಲು ಮತ್ತು ಪಂದ್ಯಾವಳಿಯುದ್ದಕ್ಕೂ ಅಪಾರ ನೆರವು ನೀಡಿದ ಕೆಎಸ್‌ಸಿಎಗೆ, ಅದರಲ್ಲೂ ವಿಶೇಷವಾಗಿ ಬ್ರಿಜೇಶ್ ಪಟೇಲ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.