ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿ: 6 ಗಂಟೆ ಸೆಣಸಾಡಿ ಗೆದ್ದ ಭಾರತದ ಡಿ.ಗುಕೇಶ್‌ಗೆ ಜಯ

| Published : Apr 11 2024, 12:47 AM IST / Updated: Apr 11 2024, 04:15 AM IST

ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿ: 6 ಗಂಟೆ ಸೆಣಸಾಡಿ ಗೆದ್ದ ಭಾರತದ ಡಿ.ಗುಕೇಶ್‌ಗೆ ಜಯ
Share this Article
  • FB
  • TW
  • Linkdin
  • Email

ಸಾರಾಂಶ

ರೋಚಕಗೊಳ್ಳುತ್ತಿದೆ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ಸ್ಪರ್ಧೆ. 5ನೇ ಸುತ್ತಿನಲ್ಲಿ ಭಾರತದ 17 ವರ್ಷದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ಗೆ ಗೆಲುವು. ಬರೋಬ್ಬರಿ 6 ಗಂಟೆಗಳ ಕಾಲ ಹೋರಾಡಿ ಗೆದ್ದು ಜಂಟಿ ಅಗ್ರಸ್ಥಾನಕ್ಕೇರಿದ ಗುಕೇಶ್‌.

ಟೊರೊಂಟೊ: ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿ 5ನೇ ಸುತ್ತಿನಲ್ಲಿ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಡಿ.ಗುಕೇಶ್‌ ಅಜರ್‌ಬೈಜಾನ್‌ನ ನಿಜಾತ್‌ ಅಬಸೊವ್‌ ವಿರುದ್ಧ ಗೆದ್ದು ಜಂಟಿ ಮೊದಲ ಸ್ಥಾನಕ್ಕೇರಿದ್ದಾರೆ. ಭಾರೀ ರೋಚಕತೆಯಿಂದ ಕೂಡಿದ್ದ 5ನೇ ಸುತ್ತಿನಲ್ಲಿ ಗುಕೇಶ್‌, ಬರೋಬ್ಬರಿ 6 ಗಂಟೆಗಳ ಕಾಲ ಸೆಣಸಾಡಿದರು.3.5 ಅಂಕಗಳೊಂದಿಗೆ ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ಜೊತೆ ಭಾರತದ 17ರ ಗುಕೇಶ್‌ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಇನ್ನೂ 9 ಸುತ್ತುಗಳು ಬಾಕಿ ಇದೆ.

ಇದೇ ವೇಳೆ 5ನೇ ಸುತ್ತಿನಲ್ಲಿ ಭಾರತದ ಮತ್ತೊಬ್ಬ ತಾರಾ ಆಟಗಾರ ಆರ್‌.ಪ್ರಜ್ಞಾನಂದ, ನೆಪೊಮ್ನಿಯಾಚಿ ವಿರುದ್ಧ ಡ್ರಾ ಸಾಧಿಸಿದರು. ಸದ್ಯ ಪ್ರಜ್ಞಾನಂದ 2.5 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಇನ್ನು ವಿದಿತ್‌, ಅಮೆರಿಕದ ಫ್ಯಾಬಿಯೋ ಕರುನ ವಿರುದ್ಧ ಡ್ರಾ ಸಾಧಿಸಿ, 6ನೇ ಸ್ಥಾನ ಪಡೆದಿದ್ದಾರೆ.ಮಹಿಳೆಯರ ವಿಭಾಗದಲ್ಲಿ ವೈಶಾಲಿ ಹಾಗೂ ಕೊನೆರು ಹಂಪಿ ಇಬ್ಬರಿಗೂ 5ನೇ ಸುತ್ತಿನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ.