ಸಾರಾಂಶ
ಹ್ಯಾಮಿಲ್ಟನ್(ನ್ಯೂಜಿಲೆಂಡ್): ಪಾಕಿಸ್ತಾನ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 21 ರನ್ ಗೆಲುವು ಸಾಧಿಸಿದ್ದು, 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಂಟಿಂಗ್ ಮಾಡಿದ ನ್ಯೂಜಿಲೆಂಡ್ ಫಿನ್ ಆ್ಯಲೆನ್ (74) ಅರ್ಧಶತಕದ ನೆರವಿನಿಂದ 8 ವಿಕೆಟ್‌ಗೆ 195 ರನ್ ಗಳಿಸಿತು. ಬಾಬರ್ ಅಜಂ(66), ಫಾಕರ್ ಜಮಾನ್(50) ಅರ್ಧಶತಕದಾಟ ಪಾಕ್ ಗೆಲುವಿಗೆ ಸಾಕಾಗಲಿಲ್ಲ. ಆರಂಭದಲ್ಲೇ ಕುಸಿತ ಕಂಡ ಪಾಕಿಸ್ತಾನ 19.3 ಓವರ್‌ಗಳಲ್ಲಿ 173ಕ್ಕೆ ಆಲೌಟಾಯಿತು.
ಎಲ್ಲಾ ಮಾದರಿ ಕ್ರಿಕೆಟ್‌ಗೆ ಶಾನ್ ಮಾರ್ಷ್ ವಿದಾಯ
ಮೆಲ್ಬರ್ನ್: ಆಸ್ಟ್ರೇಲಿಯಾದ ತಾರಾ ಬ್ಯಾಟರ್ ಶಾನ್ ಮಾರ್ಷ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ಭಾನುವಾರ ನಿವೃತ್ತಿ ಪ್ರಕಟಿಸಿದ್ದಾರೆ. ಸದ್ಯ ಬಿಗ್‌ಬ್ಯಾಶ್ ಟಿ20 ಲೀಗ್‌ನಲ್ಲಿ ಮೆಲ್ಬರ್ನ್ ರೆನಿಗೇಡ್ಸ್ ಪರ ಆಡುತ್ತಿರುವ 40ರ ಮಾರ್ಷ್, ಜ.17ರಂದು ಸಿಡ್ನಿ ಥಂಡರ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆ ಬಾರಿ ಕಾಣಿಸಿಕೊಳ್ಳಲಿದ್ದಾರೆ.
2008ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ್ದ ಮಾರ್ಷ್ ಆಸೀಸ್ ಪರ 38 ಟೆಸ್ಟ್, 73 ಏಕದಿನ, 15 ಟಿ20 ಪಂದ್ಯಗಳನ್ನಾಡಿದ್ದಾರೆ. 2008ರ ಚೊಚ್ಚಲ ಐಪಿಎಲ್‌ನಲ್ಲಿ ಮಾರ್ಷ್ ಗರಿಷ್ಠ ರನ್ ಗಳಿಸಿದವರಿಗೆ ನೀಡುವ ಆರೆಂಜ್ ಕ್ಯಾಪ್ ಪಡೆದಿದ್ದರು.