ಸಾರಾಂಶ
ಕಳಸ: ಸಂಸೆಯ ಟೀಂ ಯುವಶಕ್ತಿ ಕ್ರಿಕೆಟರ್ಸ್ ಸಂಸ್ಥೆಯ 30ನೇ ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ 30 ಗಜಗಳ, 7ನೇ ಆವೃತ್ತಿಯ ಸಂಸೆ ಪ್ರೀಮಿಯರ್ ಲೀಗ್ ಕ್ರಿಕೆಟ್‌ನಲ್ಲಿ ಪದ್ಮಾಂಬ ಕ್ರಿಕೆಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಈ ಟೂರ್ನಿಯನ್ನು ಕಳಸ ಬಾಳೂರು ಹೋಬಳಿಯ ಆಟಗಾರರಿಗೆ ಪ್ರತಿ ವರ್ಷ ಆಯೋಜಿಸಲಾಗುತ್ತದೆ. ಈ ಬಾರಿ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡವು. ಫೈನಲ್‌ನಲ್ಲಿ ಜಿನೇಂದ್ರ ಮಾಲೀಕತ್ವದ ಪದ್ಮಾಂಬ ಕ್ರಿಕೆಟರ್ಸ್ ತಂಡವು ಸುಜಿತ್ ಬೆಳ್ಳ ಮಾಲೀಕತ್ವದ ಬೆಳ್ಳ ಕ್ರಿಕೆಟರ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತು.
ಕಳೆದೆರಡು ಬಾರಿಯ ಚಾಂಪಿಯನ್ ಬೆಳ್ಳ ತಂಡಕ್ಕೆ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಕನಸು ನನಸಾಗಲಿಲ್ಲ. ತಂಡ ಈ ಬಾರಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.ಎಎಸ್ ಬ್ರದರ್ಸ್ ತಂಡ ಮೂರನೇ ಹಾಗೂ ಯುನೈಟೆಡ್ ಕ್ರಿಕೆಟರ್ಸ್ ತಂಡ ನಾಲ್ಕನೇ ಸ್ಥಾನ ಪಡೆಯಿತು. ಚಿದಾನಂದ ಸರಣಿ ಶ್ರೇಷ್ಠ ಆಟಗಾರ ಹಾಗೂ ಶ್ರೀಲಕ್ ಅತ್ಯುತ್ತಮ ಬ್ಯಾಟ್ಸ್‌ಮನ್, ಸಿದ್ದಾರ್ಥ್ ಅತ್ಯುತ್ತಮ ಎಸೆತಗಾರ ಹಾಗೂ ನಿತೇಶ್ ಅತ್ಯುತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿ ಮತ್ತು ಸಂದೀಪ್ ಅತ್ಯುತ್ತಮ ಗೂಟ ರಕ್ಷಕ ಪ್ರಶಸ್ತಿಗೆ ಭಾಜನರಾದರು.