ಇಂದು ಚೆಪಾಕ್‌ನಲ್ಲಿ ಚೆನ್ನೈ vs ಕೆಕೆಆರ್‌ ಕದನ

| Published : Apr 08 2024, 01:04 AM IST / Updated: Apr 08 2024, 04:49 AM IST

ಸಾರಾಂಶ

ಕೋಲ್ಕತಾ ನೈಟ್‌ ರೈಡರ್ಸ್‌ಗೆ ಟೂರ್ನಿಯಲ್ಲಿ ಸತತ 4ನೇ ಜಯದ ಗುರಿ. ತವರಿನ ಅಂಗಳದಲ್ಲಿ ಗೆಲುವಿನ ಹಳಿಗೆ ಮರಳಲು ಗಾಯಕ್ವಾಡ್‌ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್ ಕಾತರ.

ಚೆನ್ನೈ: ತವರಲ್ಲಿ ಮೊದಲೆರಡು ಪಂದ್ಯ ಗೆದ್ದು ಬಳಿಕ ತವರಿನಾಚೆಯ ಎರಡೂ ಪಂದ್ಯಗಳಲ್ಲಿ ಸೋತಿರುವ ಹಾಲಿ ಚಾಂಪಿಯನ್‌ ಚೆನ್ನೈ ತಂಡ ಈಗ ಬಲಿಷ್ಠ ಕೋಲ್ಕತಾದ ಸವಾಲು ಎದುರಿಸಲು ಸಜ್ಜಾಗಿದೆ. ಚೆಪಾಕ್‌ನಲ್ಲಿ ಪಂದ್ಯ ನಡೆಯಲಿದ್ದು, ಸಿಎಸ್‌ಕೆ ಗೆಲುವಿನ ಹಳಿಗೆ ಮರಳುವ ಕಾತರದಲ್ಲಿದೆ. 

ಸತತ ಸೋಲು ಕಂಡ ಹೊರತಾಗಿಯೂ ಚೆನ್ನೈ ತಂಡ ತವರಿನಲ್ಲಿ ಎಷ್ಟು ಬಲಿಷ್ಠ ಎಂಬುದು ಕೆಕೆಆರ್‌ಗೆ ಅರಿವಿದೆ. ಆದರೆ ಶಿವಂ ದುಬೆ ಹೊರತುಪಡಿಸಿ ಇತರ ಯಾವ ಬ್ಯಾಟರ್‌ ಕೂಡಾ ನಿರ್ಭೀತಿಯಿಂದ ಬ್ಯಾಟ್‌ ಬೀಸುತ್ತಿಲ್ಲ. ರಹಾನೆ, ಡ್ಯಾರಿಲ್‌ ಮಿಚೆಲ್‌ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಅಬ್ಬರಿಸಬೇಕು. ಸ್ಫೋಟಕ ಬ್ಯಾಟರ್‌ ಸಮೀರ್‌ ರಿಜ್ವಿ ಮೇಲ್ಕ್ರಮಮಾಂಕದಲ್ಲಿ ಆಡಿದರೂ ಅಚ್ಚರಿಯಿಲ್ಲ. 

ಇನ್ನು, ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಮುಸ್ತಾಫಿಜುರ್‌, ಪತಿರನ ಕೆಕೆಆರ್‌ ವಿರುದ್ಧ ಆಡುವ ಬಗ್ಗೆ ಖಚಿತತೆಯಿಲ್ಲ.ಮತ್ತೊಂದೆಡೆ ಕೆಕೆಆರ್‌ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದು, ಸತತ 4ನೇ ಜಯದ ನಿರೀಕ್ಷೆಯಲ್ಲಿದೆ. ಆಕ್ರಮಣಕಾರಿ ಬ್ಯಾಟರ್‌ಗಳು ತಂಡದ ಪ್ಲಸ್‌ ಪಾಯಿಂಟ್‌. ಅಬ್ಬರಿಸುತ್ತಿರುವ ನರೈನ್‌, ರಸೆಲ್‌, ರಿಂಕು ಸಿಂಗ್‌ ಚೆನ್ನೈ ಬ್ಯಾಟರ್‌ಗಳಿಗೆ ಕಠಿಣ ಸವಾಲಾಗಿ ಪರಿಣಮಿಸಬಹುದು.

ಒಟ್ಟು ಮುಖಾಮುಖಿ: 28ಚೆನ್ನೈ: 18ಕೆಕೆಆರ್: 10

ಸಂಭವನೀಯ ಆಟಗಾರರ ಪಟ್ಟಿಚೆನ್ನೈ: ಋತುರಾಜ್‌(ನಾಯಕ), ರಚಿನ್‌, ರಹಾನೆ, ದುಬೆ, ಡ್ಯಾರಿಲ್‌, ಮೊಯೀನ್‌, ಜಡೇಜಾ, ಧೋನಿ, ದೀಪಕ್‌, ತುಷಾರ್‌, ತೀಕ್ಷಣ.ಕೆಕೆಆರ್‌: ನರೈನ್‌, ಸಾಲ್ಟ್‌, ವೆಂಕಟೇಶ್‌, ಶ್ರೇಯಸ್‌(ನಾಯಕ), ರಿಂಕು, ರಘುವಂಶಿ, ರಸೆಲ್‌, ರಮನ್‌ದೀಪ್‌, ಸ್ಟಾರ್ಕ್‌, ಹರ್ಷಿತ್‌, ವರುಣ್‌

ಪಂದ್ಯ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.