ಆಡಳಿತ ಗೊಂದಲ: ಭಾರತ ಕಬಡ್ಡಿ ಸಂಸ್ಥೆಯೇ ಸಸ್ಪೆಂಡ್‌, ಜಾಗತಿಕ ಕೂಟಗಳಲ್ಲಿ ಸ್ಪರ್ಧೆಗೆ ತಡೆ!

| Published : Sep 21 2024, 01:55 AM IST / Updated: Sep 21 2024, 04:32 AM IST

ಸಾರಾಂಶ

ಅಮಾನತುಗೊಂಡ ಕಾರಣ ಚೊಚ್ಚಲ ಆವೃತ್ತಿಯ ಬೀಚ್‌ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಂಡಗಳು ಪಾಲ್ಗೊಳ್ಳುವುದಿಲ್ಲ. ಭಾರತೀಯ ತಂಡಗಳ ಸ್ಪರ್ಧೆಗೆ ನಿಷೇಧ ಹೇರಲಾಗಿದೆ.

ನವದೆಹಲಿ: ಆಡಳಿತದ ಗೊಂದಲ ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತೀಯ ಅಮೆಚೂರ್‌ ಕಬಡ್ಡಿ ಸಂಸ್ಥೆ(ಎಕೆಎಫ್‌ಐ)ಯನ್ನು ಅಂತಾರಾಷ್ಟ್ರೀಯ ಕಬಡ್ಡಿ ಒಕ್ಕೂಟ ಅಮಾನತುಗೊಳಿಸಿದೆ. ಈ ಮೂಲಕ ಜಾಗತಿಕ ಕೂಟಗಳಲ್ಲಿ ಭಾರತೀಯ ತಂಡಗಳ ಸ್ಪರ್ಧೆಗೆ ನಿಷೇಧ ಹೇರಿದೆ. 

ಹೀಗಾಗಿ ಚೊಚ್ಚಲ ಆವೃತ್ತಿಯ ಬೀಚ್‌ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಂಡಗಳು ಪಾಲ್ಗೊಳ್ಳುವುದಿಲ್ಲ. ಎಕೆಎಫ್‌ಐಗೆ ಕಳೆದ 5 ವರ್ಷಗಳಿಂದ ಚುನಾಯಿತ ಸಮಿತಿಯಿಲ್ಲ. 

ನಿಯಮ ಉಲ್ಲಂಘಣೆ ಕಾರಣಕ್ಕೆ ಎಕೆಎಫ್‌ಐನ ಅಮಾನತುಗೊಳಿಸಿದ್ದ ದೆಹಲಿ ಹೈಕೋರ್ಟ್‌, ನ್ಯಾ. ಎಸ್‌.ಪಿ. ಗರ್ಗ್‌ ಅವರನ್ನು 2019ರಲ್ಲಿ ಆಡಳಿತಾಧಿಕಾರಿಯಾಗಿ ನೇಮಿಸಿತ್ತು. 2023ರ ಡಿಸೆಂಬರ್‌ನಲ್ಲಿ ಎಕೆಎಫ್‌ಐಗೆ ಚುನಾವಣೆ ನಡೆದಿತ್ತಾದರೂ ನಿಯಮ ಪಾಲಿಸಿಲ್ಲ ಎಂದು ದೆಹಲಿ ಹೈಕೋರ್ಟ್‌ ಚುನಾವಣೆಯನ್ನು ಅಸಿಂಧುಗೊಳಿಸಿತ್ತು.