ಸಾರಾಂಶ
2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಕುಸ್ತಿಪಟು ಅಮನ್ ಶೆಹ್ರಾವತ್. ಪುರುಷರ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಒಲಿಂಪಿಕ್ಸ್ ಕೋಟಾ. ಈಗಾಗಲೇ ಐವರು ಮಹಿಳಾ ಕುಸ್ತಿಪಟುಗಳಿಗೆ ಸಿಕ್ಕಿದೆ ಅರ್ಹತೆ.
ಇಸ್ತಾಂಬುಲ್(ಟರ್ಕಿ): ಭಾರತದ ತಾರಾ ಕುಸ್ತಿಪಟು ಅಮನ್ ಶೆಹ್ರಾವತ್ 2024ರ ಪ್ಯಾರಿಸ್ ಒಲಿಂಪಿಕ್ಸ್ ಕೋಟಾ ಗೆದ್ದಿದ್ದಾರೆ. ಇದು ಭಾರತಕ್ಕೆ ಪುರುಷರ ವಿಭಾಗದಲ್ಲಿ ಲಭಿಸಿದ ಮೊದಲ ಕೋಟಾ ಮತ್ತು ಒಟ್ಟಾರೆ 6ನೇ ಕೋಟಾ. ಮಹಿಳಾ ವಿಭಾಗದಲ್ಲಿ ಭಾರತಕ್ಕೆ 5 ಕೋಟಾಗಳು ಲಭ್ಯವಾಗಿವೆ.
ಶನಿವಾರ ರಾತ್ರಿ ಒಲಿಂಪಿಕ್ಸ್ ವಿಶ್ವ ಕುಸ್ತಿ ಅರ್ಹತಾ ಟೂರ್ನಿಯ ಪುರುಷರ ಫ್ರೀಸ್ಟೈಲ್ 57 ಕೆ.ಜಿ. ವಿಭಾಗದಲ್ಲಿ ಏಷ್ಯನ್ ಚಾಂಪಿಯನ್ ಅಮನ್, ಉತ್ತರ ಕೊರಿಯಾದ ಚೊಂಗ್ ಸಾಂಗ್ ಹಾನ್‌ರನ್ನು 12-2 ಅಂಕಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು. ಇದರೊಂದಿಗೆ ಅಮನ್ ಒಲಿಂಪಿಕ್ಸ್ ಕೋಟಾ ಗೆದ್ದುಕೊಂಡರು.ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) 57 ಕೆ.ಜಿ. ವಿಭಾಗದಲ್ಲಿ ಅಮನ್‌ರನ್ನೇ ಒಲಿಂಪಿಕ್ಸ್‌ಗೆ ಕಳುಹಿಸುವ ಸಾಧ್ಯತೆಯಿದೆ. ಆಯ್ಕೆ ಟ್ರಯಲ್ಸ್ ನಡೆಸಿ ಬೇರೆ ಕುಸ್ತಿಪಟುವನ್ನು ಕಳುಹಿಸುವ ಆಯ್ಕೆಯೂ ಇದೆ.