ವಿಶ್ವ ಸ್ಕೇಟಿಂಗ್‌: 2ನೇಬಂಗಾರ ಗೆದ್ದ ಆನಂದ್‌

| Published : Sep 22 2025, 01:00 AM IST

ವಿಶ್ವ ಸ್ಕೇಟಿಂಗ್‌: 2ನೇಬಂಗಾರ ಗೆದ್ದ ಆನಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಚೀನಾದಲ್ಲಿ ನಡೆದ ಸ್ಪೀಡ್‌ ಸ್ಕೇಟಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ ಮ್ಯಾರಾಥಾನ್‌ ಸ್ಪರ್ಧೆಯಲ್ಲಿ ಭಾರತದ ಯುವ ಸ್ಕೇಟರ್‌, 22 ವರ್ಷದ ಆನಂದ್‌ ಕುಮಾರ್‌ ವೆಲ್ಕುಮಾರ್‌ ಚಾಂಪಿಯನ್‌ ಆಗಿದ್ದಾರೆ. ಕೂಟದಲ್ಲಿ ಅವರು 2ನೇ ಬಂಗಾರ ಗೆದ್ದಿದ್ದು, ಈ ಸಾಧನೆ ಮಾಡಿದ ದೇಶದ ಮೊದಲ ಕ್ರೀಡಾಪಟು ಎಂಬ ದಾಖಲೆ ನಿರ್ಮಿಸಿದರು.

ಬೀಜಿಂಗ್‌: ಚೀನಾದಲ್ಲಿ ನಡೆದ ಸ್ಪೀಡ್‌ ಸ್ಕೇಟಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ ಮ್ಯಾರಾಥಾನ್‌ ಸ್ಪರ್ಧೆಯಲ್ಲಿ ಭಾರತದ ಯುವ ಸ್ಕೇಟರ್‌, 22 ವರ್ಷದ ಆನಂದ್‌ ಕುಮಾರ್‌ ವೆಲ್ಕುಮಾರ್‌ ಚಾಂಪಿಯನ್‌ ಆಗಿದ್ದಾರೆ. ಕೂಟದಲ್ಲಿ ಅವರು 2ನೇ ಬಂಗಾರ ಗೆದ್ದಿದ್ದು, ಈ ಸಾಧನೆ ಮಾಡಿದ ದೇಶದ ಮೊದಲ ಕ್ರೀಡಾಪಟು ಎಂಬ ದಾಖಲೆ ನಿರ್ಮಿಸಿದರು.

ಭಾನುವಾರ ನಡೆದ ಸ್ಪರ್ಧೆಯಲ್ಲಿ 42 ಕಿ.ಮೀ.ರೇಸ್‌ಅನ್ನು ಆನಂದ್‌ಕುಮಾರ್‌ ಮೊದಲಿಗರಾಗಿ ಪೂರ್ಣಗೊಳಿಸಿ, ಚಾಂಪಿಯನ್‌ ಆದರು. ಇತ್ತೀಚೆಗಷ್ಟೇ ಅವರು 1000 ಮೀ ವಿಭಾಗದಲ್ಲಿ ಚಿನ್ನ, 500 ಮೀ. ವಿಭಾಗದಲ್ಲಿ ಕಂಚು ಗೆದ್ದಿದ್ದರು. ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಭಾರತ

ಅಂಡರ್‌-19 ತಂಡಕ್ಕೆ ಗೆಲುವು

ಬ್ರಿಸ್ಬೇನ್‌: ಆಸ್ಟ್ರೇಲಿಯಾ ಅಂಡರ್‌-19 ತಂಡದ ವಿರುದ್ಧ ಮೊದಲ ಯೂತ್ ಏಕದಿನ ಪಂದ್ಯದಲ್ಲಿ ಭಾರತ ಅಂಡರ್‌-19 ತಂಡ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ.ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ತಂಡ 9 ವಿಕೆಟ್‌ ನಷ್ಟದಲ್ಲಿ 225 ರನ್‌ ಕಲೆಹಾಕಿತು. ತಂಡ 35 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜಾನ್‌ ಜೇಮ್ಸ್‌ 77 ಎಸೆತಗಳಲ್ಲಿ 68 ರನ್‌ ಗಳಿಸಿ ತಂಡಕ್ಕೆ ನೆರವಾದರು. ಹೆನಿಲ್‌ ಪಟೇಲ್‌ 38ಕ್ಕೆ 3 ವಿಕೆಟ್‌ ಪಡೆದರೆ, ಕನಿಶ್ಕ್‌ ಚೌಹಾಣ್‌ 2, ಕಿಶನ್‌ ಕುಮಾರ್ 2 ವಿಕೆಟ್‌ ಪಡೆದರು.

ಗುರಿ ಬೆನ್ನತ್ತಿದ ಭಾರತ ತಂಡ 30.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಅಭಿಜ್ಞಾನ್‌ ಕುಂಡು ಹಾಗೂ ವೇದಾಂತ್‌ ತ್ರಿವೇದಿ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 14 ವರ್ಷದ ವೈಭವ್‌ ಸೂರ್ಯವಂಶಿ ಅವರು 22 ಎಸೆತಗಳಲ್ಲಿ 38 ರನ್‌ ಸಿಡಿಸಿದರು.