35 ಎಸೆತದಲ್ಲಿ ಶತಕ : ಯೂಸುಫ್‌ ಪಠಾಣ್‌ ದಾಖಲೆ ಮುರಿದ ಪಂಜಾಬ್‌ ಬ್ಯಾಟರ್ ಅನ್ಮೋಲ್‌ಪ್ರೀತ್‌ ಸಿಂಗ್‌

| Published : Dec 22 2024, 01:30 AM IST / Updated: Dec 22 2024, 04:13 AM IST

35 ಎಸೆತದಲ್ಲಿ ಶತಕ : ಯೂಸುಫ್‌ ಪಠಾಣ್‌ ದಾಖಲೆ ಮುರಿದ ಪಂಜಾಬ್‌ ಬ್ಯಾಟರ್ ಅನ್ಮೋಲ್‌ಪ್ರೀತ್‌ ಸಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

 ಪಂಜಾಬ್‌ನ ಅನ್ಮೋಲ್‌ ಆರ್ಭಟ. ವಿಶ್ವದಲ್ಲೇ 3ನೇ, ಭಾರತೀಯರಲ್ಲಿ ಅತಿ ವೇಗದ ಶತಕ. ಒಟ್ಟಾರೆ 45 ಎಸೆತಗಳಲ್ಲಿ 115 ರನ್‌ ಬಾರಿಸಿದ ಅನ್ಮೋಲ್‌

ಅಹಮದಾಬಾದ್‌: ಲಿಸ್ಟ್‌ ‘ಎ’(50 ಓವರ್‌ ಪಂದ್ಯ) ಕ್ರಿಕೆಟ್‌ನಲ್ಲಿ ಭಾರತೀಯರ ಪೈಕಿ ಅತಿ ವೇಗದ ಹಾಗೂ ಒಟ್ಟಾರೆ ವಿಶ್ವದಲ್ಲೇ 3ನೇ ಅತಿ ವೇಗದ ಶತಕ ಬಾರಿಸಿದ ದಾಖಲೆಯನ್ನು ಪಂಜಾಬ್‌ ಬ್ಯಾಟರ್‌ ಅನ್ಮೋಲ್‌ಪ್ರೀತ್‌ ಸಿಂಗ್‌ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಶನಿವಾರ ವಿಜಯ್‌ ಹಜಾರೆ ಏಕದಿನ ಟೂರ್ನಿಯ ಅರುಣಾಚಲ ಪ್ರದೇಶ ವಿರುದ್ಧ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು.

ಅರುಣಾಚಲ ತಂಡದ 164 ರನ್‌ ಗುರಿಯನ್ನು ಪಂಜಾಬ್‌ 12.5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿ ಜಯಗಳಿಸಿತು. 35 ಎಸೆತಗಳಲ್ಲೇ ಶತಕ ಪೂರ್ಣಗೊಳಿಸಿದ ಅನ್ಮೋಲ್‌ಪ್ರೀತ್‌, ಒಟ್ಟಾರೆ 45 ಎಸೆತಗಳಲ್ಲಿ 115 ರನ್‌ ಬಾರಿಸಿದರು. ಇದರಲ್ಲಿ 12 ಬೌಂಡರಿ, 9 ಸಿಕ್ಸರ್‌ಗಳಿದ್ದವು. 2009-10ರಲ್ಲಿ ಮಹಾರಾಷ್ಟ್ರ ವಿರುದ್ಧ ಬರೋಡಾದ ಯೂಸುಫ್‌ ಪಠಾಣ್‌ 40 ಎಸೆತಗಳಲ್ಲಿ ಶತಕ ಬಾರಿಸಿದ್ದು ಈ ವರೆಗೂ ದಾಖಲೆಯಾಗಿತ್ತು.ಇನ್ನು, ಕಳೆದ ವರ್ಷ ತಾಸ್ಮಾನಿಯಾ ವಿರುದ್ಧ ದಕ್ಷಿಣ ಆಸ್ಟ್ರೆಲಿಯಾದ ಜೇಕ್‌ ಫ್ರೇಸರ್‌ 29 ಎಸೆತ, ವಿಂಡೀಸ್‌ ವಿರುದ್ಧ 2015ರಲ್ಲಿ ದ.ಆಫ್ರಿಕಾದ ಎಬಿ ಡಿ ವಿಲಿಯರ್ಸ್‌ 31 ಎಸೆತಗಳಲ್ಲಿ ಶತಕ ಬಾರಿಸಿದ್ದು ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ವಿಶ್ವದಲ್ಲೇ ಅಗ್ರ-2 ವೇಗದ ಶತಕಗಳಾಗಿವೆ.