ಸಾರಾಂಶ
ನವದೆಹಲಿ: ನೋಂದಣಿ ಮಾಡದ ಕೋಚ್‌ಗಳಿಂದ ತರಬೇತಿ ಪಡೆಯುವ ಕ್ರೀಡಾಪಟುಗಳನ್ನು ಇನ್ನು ಮುಂದೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಪರಿಗಣಿಸುವುದಿಲ್ಲ ಎಂದು ಭಾರತ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ) ತಿಳಿಸಿದೆ. ಭಾರತದಲ್ಲಿ ಕ್ರೀಡಾಪಟುಗಳು ನಿಷೇಧಿತ ಮದ್ದು ಸೇವಿಸುತ್ತಿರುವುದು ಹೆಚ್ಚಾಗುತ್ತಿದೆ.
ಇದಕ್ಕೆ ಕೋಚ್‌ಗಳೇ ಸಹಕಾರ ನೀಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಎಎಫ್‌ಐ ಈ ನಿರ್ಧಾರಕ್ಕೆ ಬಂದಿದೆ. ಇತ್ತೀಚೆಗಷ್ಟೇ ಕೋಚ್‌ಗಳಿಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲು ಆದೇಶಿಸಿದ್ದ ಎಎಫ್‌ಐ, ಅದಕ್ಕೆ ಜು.31ರ ಗಡುವು ವಿಧಿಸಿತ್ತು.
ನೋಂದಣಿ ಮಾಡದಿರುವ ಕೋಚ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿಯೂ ಎಚ್ಚರಿಕೆ ನೀಡಿದೆ.‘ನೋಂದಣಿ ಮಾಡದ ಕೋಚ್‌ಗಳಿಂದ ತರಬೇತಿ ಪಡೆಯುವ ಅಥ್ಲೀಟ್‌ಗಳು ಪದಕ ಗೆದ್ದರೆ ಅವರನ್ನು ರಾಷ್ಟ್ರೀಯ ಪ್ರಶಸ್ತಿಗೆ ಶಿಫಾರಸ್ಸು ಮಾಡುವುದಿಲ್ಲ. ಕೋಚ್‌ಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿದ ಕೋಚ್‌ಗಳ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ’ ಎಂದು ಎಎಫ್‌ಐ ವಕ್ತಾರ, ಮಾಜಿ ಅಧ್ಯಕ್ಷ ಅದಿಲ್ಲೆ ಸುಮರಿವಲ್ಲ ತಿಳಿಸಿದ್ದಾರೆ.