ಸಾರಾಂಶ
ಬ್ಯಾಡ್ಮಿಂಟನ್ ಏಷ್ಯಾ ತಂಡ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆಲ್ಲಲು ಭಾರತ ಮಹಿಳಾ ತಂಡಕ್ಕೆ ಕೇವಲ ಒಂದೇ ಗೆಲುವು ಬಾಕಿ ಉಳಿದಿದೆ. ಟೂರ್ನಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿ ಮಹಿಳಾ ತಂಡ ಫೈನಲ್ ಪ್ರವೇಶಿಸಿದ್ದು, ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿಕೊಂಡಿದೆ.
ಶಾ ಆಲಮ್(ಮಲೇಷ್ಯಾ): ಬ್ಯಾಡ್ಮಿಂಟನ್ ಏಷ್ಯಾ ತಂಡ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆಲ್ಲಲು ಭಾರತ ಮಹಿಳಾ ತಂಡಕ್ಕೆ ಕೇವಲ ಒಂದೇ ಗೆಲುವು ಬಾಕಿ ಉಳಿದಿದೆ. ಟೂರ್ನಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿ ಮಹಿಳಾ ತಂಡ ಫೈನಲ್ ಪ್ರವೇಶಿಸಿದ್ದು, ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿಕೊಂಡಿದೆ.ಶನಿವಾರ ಸೆಮೀಸ್ ಕದನದಲ್ಲಿ ಭಾರತ ಜಪಾನ್ ವಿರುದ್ಧ 3-2ರ ಅಂತರದಲ್ಲಿ ಜಯಗಳಿಸಿತು. ಮೊದಲ ಸಿಂಗಲ್ಸ್‌ನಲ್ಲಿ ತಾರಾ ಆಟಗಾರ್ತಿ ಪಿ.ವಿ.ಸಿಂಧು ಸೋತರೂ, ಅತ್ಯುತ್ತಮ ಪ್ರದರ್ಶನ ನೀಡಿದ ಯುವ ಆಟಗಾರ್ತಿಯರು ಐತಿಹಾಸಿಕ ಸಾಧನೆ ಮಾಡಿದರು.
ಸಿಂಧು ಜಪಾನ್‌ನ ಅಯಾ ಓಹರಿ ವಿರುದ್ಧ 13-21, 20-22ರಿಂದ ಸೋಲನುಭವಿಸಿದರು. ನಂತರ ನಡೆದ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್, ನಮಿ ಮತ್ಸುಯಮ-ಚಿಹರು ಶಿದಾ ಜೋಡಿಯನ್ನು 21-17, 16-21, 22-20ರಿಂದ ಸೋಲಿಸಿದರು. 2ನೇ ಸಿಂಗಲ್ಸ್‌ನಲ್ಲಿ ಆಕ್ರಮಣಕಾರಿ ಆಟವಾಡಿದ ಅಶ್ಮಿತಾ ಚಾಲಿಹ, ವಿಶ್ವ ನಂ.20 ನೊಜೊಮಿ ಓಕುಹರಾ ಅವರನ್ನು 21-17, 21-14ರಿಂದ ಸೋಲಿಸಿ ಭಾರತಕ್ಕೆ 2-1ರ ಮುನ್ನಡೆ ತಂದುಕೊಟ್ಟರು.ಬಳಿಕ ಡಬಲ್ಸ್ ಪಂದ್ಯದಲ್ಲಿ ತನಿಶಾ ಗಾಯಗೊಂಡಿದದ್ದರಿಂದ ಸಿಂಧು ಜೊತೆಗೂಡಿ ಆಡಿದ ಅಶ್ವಿನಿ ಪೊನ್ನಪ್ಪ ರೆನಾ ಮಿಯೂರಾ-ಅಯಾಕೊ ಸಕುರಮೊ ವಿರುದ್ಧ 21-14, 21-11ರಿಂದ ಸೋತರು. ನಿರ್ಣಾಯಕ ಪಂದ್ಯದಲ್ಲಿ 17ರ ಅನ್ಮೋಲ್ ಖಾರ್ಬ್ ಅವರು ವಿಶ್ವ ನಂ.29 ನತ್ಸುಕಿ ನಿದೈರಾ ಅವರನ್ನು 21-14, 21-18ರಿಂದ ಸೋಲಿಸಿ, ಭಾರತವನ್ನು ಫೈನಲ್‌ಗೇರಿಸಿದರು. ಭಾನುವಾರ ಥಾಯ್ಲೆಂಡ್ ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣಸಲಿದೆ.;Resize=(128,128))
;Resize=(128,128))
;Resize=(128,128))
;Resize=(128,128))