ಸಾರಾಂಶ
ಚೊಚ್ಚಲ ಆವೃತ್ತಿಯ ರಾಜ್ಯ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಚಾಂಪಿಯನ್‌ಶಿಪ್ ಮುಕ್ತಾಯ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬೀಗಲ್ಸ್ ತಂಡ ಚಾಂಪಿಯನ್. 75000 ರು. ಬಹುಮಾನ.
ಬೆಂಗಳೂರು : ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ (ಕೆಎಸ್‌ಬಿಬಿಎ) ಆಯೋಜಿಸಿದ್ದ ಚೊಚ್ಚಲ ಆವೃತ್ತಿಯ ರಾಜ್ಯ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಬೀಗಲ್ಸ್ ಕ್ಲಬ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸೋಮವಾರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬೀಗಲ್ಸ್ ತಂಡ ಮೈಸೂರಿನ ಡಿವೈಇಎಸ್ ತಂಡದ ವಿರುದ್ಧ 65-32 ಅಂಕಗಳಲ್ಲಿ ಜಯ ಸಾಧಿಸಿತು. ಚಾಂಪಿಯನ್ ತಂಡಕ್ಕೆ ₹75000 ಪ್ರಶಸ್ತಿ ಮೊತ್ತ ದೊರೆಯಿತು.
ಫಿಬಾ ಏಷ್ಯಾ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ಕೆಎಸ್‌ಬಿಬಿಎ ಅಧ್ಯಕ್ಷ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಟ್ರೋಫಿ ವಿತರಿಸಿದರು.