ಐಎಸ್‌ಎಲ್‌ : ಬದ್ಧ ವೈರಿ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಬಿಎಫ್‌ಸಿ ಮ್ಯಾಜಿಕಲ್‌ ಆಟ - 3 - 1 ಜಯಭೇರಿ

| Published : Oct 26 2024, 01:01 AM IST / Updated: Oct 26 2024, 05:02 AM IST

ಸಾರಾಂಶ

ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಬಿಎಫ್‌ಸಿ ಮ್ಯಾಜಿಕಲ್‌ ಆಟ. ಸತತ 6 ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಅಜೇಯ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಸುನಿಲ್‌ ಚೆಟ್ರಿ ಪಡೆ.

ಕೊಚ್ಚಿ: 11ನೇ ಆವೃತ್ತಿಯ ಐಎಸ್‌ಎಲ್‌ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತನ್ನ ಅಜೇಯ ಓಟ ಮುಂದುವರಿಸಿದ್ದು, 5ನೇ ಗೆಲುವು ದಾಖಲಿಸಿದೆ. ಶುಕ್ರವಾರ ಇಲ್ಲಿ ನಡೆದ ತನ್ನ ಬದ್ಧವೈರಿ ಕೇರಳ ಬ್ಲಾಸ್ಟರ್ಸ್‌ ವಿರುದ್ಧದ ಪಂದ್ಯದಲ್ಲಿ ಬಿಎಫ್‌ಸಿ 3-1 ಗೋಲುಗಳ ಗೆಲುವು ಸಾಧಿಸಿತು. 6 ಪಂದ್ಯಗಳಲ್ಲಿ 5 ಗೆಲುವು, 1 ಡ್ರಾನೊಂದಿಗೆ ಸುನಿಲ್ ಚೆಟ್ರಿ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಪಂದ್ಯದ 8ನೇ ನಿಮಿಷದಲ್ಲೇ ಜಾರ್ಜ್‌ ಡಯಾಝ್‌ ಗೋಲು ಬಾರಿಸಿ ಬಿಎಫ್‌ಸಿಗೆ ಮುನ್ನಡೆ ಒದಗಿಸಿದರು. 45+2ನೇ ನಿಮಿಷದಲ್ಲಿ ಕೇರಳ ಸಮಬಲ ಸಾಧಿಸಿತು. ಬಳಿಕ 74, 90+4ನೇ ನಿಮಿಷಗಳಲ್ಲಿ ಗೋಲು ಬಾರಿಸಿದ ಎಡ್ಗಾರ್‌ ಮೆಂಡೆಜ್‌ ಬಿಎಫ್‌ಸಿಗೆ ಗೆಲುವು ಖಚಿತಪಡಿಸಿದರು.